ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಧ್ಯಂತರ ಜಾಮೀನಿನ ಮೇಲೆ ಹೊರಗೆ ಬಂದಿರೋ ನಟ ದರ್ಶನ್ ಇಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ದರ್ಶನ್ ಅನಾರೋಗ್ಯ ಕಾರಣ ನೀಡಿ ಮಧ್ಯಂತರ ಜಾಮೀನು ಕೇಳಿದ್ದರು. ಕೋರ್ಟ್ ಆರು ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿ ಆದೇಶ ನೀಡಿತ್ತು.
ಈಗಾಗಲೇ ಜಾಮೀನು ಪಡೆದು 2 ದಿನ ಕಳೆದಿದ್ದು, ಇಂದು ದರ್ಶನ್ ಚಿಕಿತ್ಸೆ ಪಡೆಯಲೆಂದು ಕುಟುಂಬಸ್ಥರ ಜೊತೆ ಬೆಂಗಳೂರಿನ ಕೆಂಗೇರಿಯಲ್ಲಿರುವ ಬಿಜಿಎಸ್ ಆಸ್ಪತ್ರೆಗೆ ಬಂದಿದ್ದಾರೆ. ದರ್ಶನ್ ಬಿಜಿಎಸ್ ಆಸ್ಪತ್ರೆಯನ್ನೇ ಆಯ್ಕೆ ಮಾಡಿಕೊಳ್ಳಲು ಕಾರಣ ಕೂಡ ಇದೆ.
ದರ್ಶನ್ ಮೊದಲು ಮೈಸೂರಿನಲ್ಲಿ ಚಿಕಿತ್ಸೆ ಪಡೆಯಲು ನಿರ್ಧರಿಸಿದ್ರು. ಆದ್ರೆ ಕೋರ್ಟ್ ವ್ಯಾಪ್ತಿ ಬಿಟ್ಟು ಹೊರಗೆ ಹೋಗದಂತೆ ನ್ಯಾಯಾಲಯದ ಆದೇಶ ಇರುವ ಹಿನ್ನೆಲೆ ದರ್ಶನ್ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಈ ಹಿಂದೆ ಬೆನ್ನು ನೋವು ಕಾಣಿಸಿಕೊಂಡಿದ್ದಾಗ ನಟ ದರ್ಶನ್ ಮೈಸೂರಿನ ಅಪೋಲೋದಲ್ಲಿ ಚಿಕಿತ್ಸೆ ಪಡೆದಿದ್ರು.
ಅಷ್ಟೆ ಅಲ್ಲದೇ, ಬಿಜಿಎಸ್ ಆಸ್ಪತ್ರೆ ಆಯ್ಕೆ ಮಾಡಲು ಮತ್ತೊಂದು ಕಾರಣ, 2013ರಲ್ಲೂ ಬೆನ್ನುನೋವಿನ ಚಿಕಿತ್ಸೆಗೆ ದರ್ಶನ್ ಅವರು ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದರು. ‘ಬೃಂದಾವನ’ ಸಿನಿಮಾದ ಶೂಟಿಂಗ್ ವೇಳೆ ಕುದುರೆ ಮೇಲಿಂದ ಬಿದ್ದಿದ್ದರಿಂದ ಅವರಿಗೆ ನೋವು ಕಾಣಿಸಿಕೊಂಡಿತ್ತು. ಆಗಲೂ ಇದೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಈಗ ಪತ್ನಿ ವಿಜಯಲಕ್ಷ್ಮಿ ಹಾಗೂ ಸ್ನೇಹಿತ ಧನ್ವೀರ್ ಜೊತೆ ದರ್ಶನ್ ಅವರು ಆಸ್ಪತ್ರೆಗೆ ಬಂದಿದ್ದಾರೆ.
ಆಸ್ಪತ್ರೆ ಒಳ ಹೋದ ದರ್ಶನ್ಗೆ BGS ಆಸ್ಪತ್ರೆಯಲ್ಲಿ ಬ್ಯಾಕ್ಟು ಬ್ಯಾಕ್ ಟೆಸ್ಟ್ ಮಾಡಲಾಗುತ್ತಿದೆ. ಟೆಕ್ನೀಷಿಯನ್ಸ್ ಶುಗರ್, ಬಿಪಿ, ಮೂತ್ರ ಪರೀಕ್ಷೆ ಮಾಡಿದ್ದು, ತೂಕ, ಎತ್ತರ ಎಲ್ಲಾ ಸೇರಿ ನಾರ್ಮಲ್ & ಸ್ಪೆಷಲ್ ಟೆಸ್ಟ್ ಮಾಡಲಾಗಿದೆ. ಇದೆಲ್ಲಾ ಮುಗಿದ್ಮೇಲೆ ನರರೋಗ ತಜ್ಞರು ಮುಂದಿನ ಟೆಸ್ಟ್ಗೆ ಸಿದ್ಧತೆ ಮಾಡಿಕೊಳ್ಳಿದ್ದಾರೆ.
ಇದನ್ನೂ ಓದಿ : BGS ಆಸ್ಪತ್ರೆಯಲ್ಲಿ ದರ್ಶನ್ ಅಡ್ಮಿಟ್ – ಹೈಟೆಕ್ ಆಗಿರೋ ಸೂಟ್ ರೂಮ್ ಬುಕ್..!