ಬೆಂಗಳೂರು : ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮದುವೆ ಇಂದು ಬೆಳಗ್ಗೆ ಬೆಂಗಳೂರಿನ ಪೂರ್ಣಿಮಾ ಪ್ಯಾಲೇಸ್ನಲ್ಲಿ ಅದ್ದೂರಿಯಾಗಿ ನಡೆದಿದೆ. ಕನ್ನಡ ಚಿತ್ರರಂಗದ ಅನೇಕ ನಟ-ನಟಿಯರು ಹಾಗೂ ಗಣ್ಯರು ಮದುವೆಗೆ ಆಗಮಿಸಿ ಶುಭಕೋರಿದ್ರು. ಆದರೆ ತರುಣ್ ಹಾಗೂ ಸೋನಲ್ ಮದುವೆ ಕಾರಣರಾದ ದರ್ಶನ್ ಮಾತ್ರ ಗೈರಾಗಿದ್ರು.
ತರುಣ್ ಹಾಗೂ ಸೋನಲ್ ಅವರ ಮದುವೆಗೆ ಮುನ್ನುಡಿ ಬರೆದಿದ್ದೇ ನಟ ದರ್ಶನ್ ಎನ್ನಬಹುದು. ಇಬ್ಬರ ಮದುವೆ ಮಾಡಿಸಬೇಕು ಎಂದು ಎಷ್ಟೋ ಸಲ ಅವರೇ ಹೇಳುತ್ತಿದ್ದರಂತೆ. ಆದರೆ ಇದೀಗ ದರ್ಶನ್ ಕೊಲೆ ಕೇಸ್ ವಿಚಾರವಾಗಿ ಜೈಲು ಸೇರಿದ ಹಿನ್ನೆಲೆ ಮದುವೆಯಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ.
ಮದುವೆಯ ಸಂಭ್ರಮದಲ್ಲಿ ಮಾಧ್ಯಮಗಳ ಜೊತೆ ಮಾತಾಡಿದ ನಿರ್ದೇಶಕ ತರುಣ್ ಸುಧೀರ್, ಹೊಸ ಜೀವನ ಹೊಸ ಹುರುಪಿದೆ. ಇಷ್ಟು ದಿನ ಕಾದಿದ್ದಕ್ಕೂ ಬೇಸ್ಟ್ ಕೊಟ್ಟಿದಾರೆ ದೇವ್ರು. ತುಂಬಾ ಜನ ಬಂದು ವಿಶ್ ಮಾಡಿದ್ರು ಎಲ್ಲರೂ ತಮ್ಮನ ಥರ ಕುಟುಂಬದ ಥರ ಬಂದು ಹಾರೈಸಿದ್ರು ಎಂದಿದ್ದಾರೆ.
ಇನ್ನು ದರ್ಶನ್ ಅನುಪಸ್ಥಿತಿ ಬಗ್ಗೆಯೂ ಮಾತನಾಡಿದ ತರುಣ್, ಲಗ್ನ ಪತ್ರಿಕೆ ಬರೆಸುವ ಮುಂಚೆ ಡೇಟ್ ಕನ್ಪರ್ಮ್ ಆಗಿತ್ತು. ಡೇಟ್ ಚೇಂಜ್ ಮಾಡ್ಬೇಡ ಮದ್ವೆ ಮಾಡ್ಕೊ ಅಂದ್ರು ದರ್ಶನ್. ಆಗಸ್ಟ್ 11 ಡೇಟ್ ಕೊಟ್ಟಿದ್ವಿ. ಅವರು ಹೇಳಿದಂತೆ ಮದುವೆ ಆಗ್ತಿದ್ದೇವೆ. ದರ್ಶನ್ ಅವ್ರ ಅನುಪಸ್ಥಿತಿ ಬೇಸರ ಅನ್ನಿಸ್ತಿದೆ’ ಎಂದು ದರ್ಶನ್ ಬಗ್ಗೆ ಮಾತಾಡ್ತಾ ತರುಣ್ ಸುಧೀರ್ ಭಾವುಕರಾಗಿದ್ದಾರೆ.
ಇದನ್ನೂ ಓದಿ : ತರುಣ್ ತಾಳಿ ಕಟ್ಟುವ ವೇಳೆ ಭಾವುಕರಾದ ಸೋನಲ್..!