Download Our App

Follow us

Home » ಅಪರಾಧ » 3 ಪ್ರಕರಣಗಳ ಪೈಕಿ ಎರಡರಲ್ಲಿ ದರ್ಶನ್​ A1 – ನಟೋರಿಯಸ್ ರೌಡಿಶೀಟರ್​​ಗಳ ಜೊತೆ ದಾಸನ ಕೇಸ್ ಫೈಲ್..!

3 ಪ್ರಕರಣಗಳ ಪೈಕಿ ಎರಡರಲ್ಲಿ ದರ್ಶನ್​ A1 – ನಟೋರಿಯಸ್ ರೌಡಿಶೀಟರ್​​ಗಳ ಜೊತೆ ದಾಸನ ಕೇಸ್ ಫೈಲ್..!

ಬೆಂಗಳೂರು : ಕೊಲೆ ಆರೋಪಿ ದರ್ಶನ್​ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಫೋಟೋ ಮತ್ತು ವಿಡಿಯೋಗಳು ವೈರಲ್​ ಆಗಿವೆ. ಅಷ್ಟಕ್ಕೂ ಕಾರಾಗೃಹದಲ್ಲಿ ಇಂಥ ಅಕ್ರಮಗಳು ನಡೆಯಲು ಹೇಗೆ ಸಾಧ್ಯ ಎಂದು ಸರ್ಕಾರವನ್ನು ಜನರು ಪ್ರಶ್ನಿಸುತ್ತಿದ್ದಾರೆ.

ಜೈಲಿನಲ್ಲಿರುವ ದರ್ಶನ್ ರಾಜಾತಿಥ್ಯದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದ್ದು, ದರ್ಶನ್ ಅವರ ಈ ಫೋಟೋ ಪ್ರಕರಣ ಜೈಲಾಧಿಕಾರಿಗಳು, ಸರ್ಕಾರಕ್ಕೆ ಮುಜುಗರವನ್ನು ಉಂಟುಮಾಡಿದೆ. ಇನ್ನು ಈ ಪ್ರಕರಣ ಸಂಬಂಧ ಮೂರು ಪ್ರತ್ಯೇಕ FIR ದಾಖಲಾಗಿದ್ದು, ಅದರ ಪೈಕಿ ಎರಡರಲ್ಲಿ ದರ್ಶನ್​ ಎ1 ಆಗಿದ್ದಾರೆ. ಜೈಲಿನಲ್ಲಿ ಕಾನೂನು ಉಲ್ಲಂಘನೆ ಮಾಡಿದ್ದಕ್ಕಾಗಿ ಈ ಕೇಸ್​ಗಳು ದಾಖಲಾಗಿವೆ. ಈ ಮೂಲಕ ನಟೋರಿಯಸ್​ ರೌಡಿಶೀಟರ್​ಗಳಾದ ವಿಲ್ಸನ್​ ಗಾರ್ಡನ್​ ನಾಗ, ಕುಳ್ಳ ಸೀನಾ, ಧರ್ಮ, ಸತ್ಯ ಮುಂತಾದವರ ಜೊತೆ ದರ್ಶನ್​ ಕೇಸ್​ ಹಾಕಿಸಿಕೊಂಡಂತಾಗಿದೆ. ಇದರಿಂದ ದರ್ಶನ್​ಗೆ ಕಾನೂನಿನ ಸಂಕಷ್ಟ ಹೆಚ್ಚಾಗಿದೆ.

ವಿಚಾರಣಾಧೀನ ಖೈದಿ ಆಗಿರುವ ದರ್ಶನ್​ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿದ್ದಕ್ಕಾಗಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಂದ್ರ ಕಾರಾಗೃಹ DIG ಸೋಮಶೇಖರ್​ ನೀಡಿರುವ ದೂರಿನ ಮೇರೆಗೆ FIR ದಾಖಲಿಸಲಾಗಿದೆ. ಒಟ್ಟು ಮೂರೂ ಕೇಸ್​ನಲ್ಲಿ ದರ್ಶನ್​ ಆರೋಪಿ ಆಗಿದ್ದು, ನಟನಿಗೆ ಕಾನೂನಿನ ಸಂಕಷ್ಟ ಇನ್ನಷ್ಟು ಹೆಚ್ಚಾಗಿದೆ. ‘ಕಾರಾಗೃಹ U/s. 42 ಆ್ಯಕ್ಟ್’ ಅಡಿಯಲ್ಲಿ ಒಂದು ಎಫ್​ಐಆರ್​ ದಾಖಲಾಗಿದ್ದು, ಅದರಲ್ಲಿ ದರ್ಶನ್ A1, ಮ್ಯಾನೇಜರ್​ ನಾಗರಾಜ್ A2, ವಿಲ್ಸನ್ ಗಾರ್ಡನ್ ನಾಗ A3 ಹಾಗೂ ಕುಳ್ಳ ಸೀನಾ A4 ಆಗಿದ್ದಾನೆ. ಇನ್ನೊಂದು ಎಫ್​ಐಆರ್​ನಲ್ಲಿ ದರ್ಶನ್ A1, ಧರ್ಮ A2 ಹಾಗೂ ಸತ್ಯ A3 ಆಗಿದ್ದಾನೆ.

ಇದನ್ನೂ ಓದಿ : ಕಾರ್ಕಳ ಯುವತಿಯ ಅತ್ಯಾಚಾರ ಪ್ರಕರಣ – ಮೂರನೇ ಆರೋಪಿ ಬಂಧನ..!

Leave a Comment

DG Ad

RELATED LATEST NEWS

Top Headlines

ಮತ್ತೊಂದು ಸ್ಟಾರ್ ಜೋಡಿಯ ಡಿವೋರ್ಸ್ ಪಕ್ಕಾನಾ – ಇನ್‌ಸ್ಟಾಗ್ರಾಂನಲ್ಲಿ ಅನ್‌ಫಾಲೋ ಮಾಡಿದ ದಂಪತಿ!

ಮುಂಬೈ: ಟಿಂ ಇಂಡಿಯಾದ ಆಲ್​​ರೌಂಡರ್​ ಹಾರ್ದಿಕ್ ಪಾಂಡ್ಯಾ ಡಿವೋರ್ಸ್​ ಬೆನ್ನಲ್ಲೇ ಇದೀಗ ಭಾರತ ಕ್ರಿಕೆಟ್ ತಂಡದ ಮತ್ತೋರ್ವ ಆಟಗಾರನ ವಿಚ್ಛೇದನ ಸುದ್ದಿ ವ್ಯಾಪಕ ಚರ್ಚೆಯಾಗುತ್ತಿದೆ.  ಭಾರತದ ತಂಡದ

Live Cricket

Add Your Heading Text Here