Download Our App

Follow us

Home » ಜಿಲ್ಲೆ » ಉಡುಪಿಯ ಕಾರ್ಕಳದಲ್ಲಿ ಸಿಲಿಂಡರ್ ಸ್ಫೋಟ – ಲಕ್ಷಾಂತರ ರೂ. ನಷ್ಟ..!

ಉಡುಪಿಯ ಕಾರ್ಕಳದಲ್ಲಿ ಸಿಲಿಂಡರ್ ಸ್ಫೋಟ – ಲಕ್ಷಾಂತರ ರೂ. ನಷ್ಟ..!

ಉಡುಪಿ : ಕಾರ್ಕಳದ ಕೃಷ್ಣಾ ಅಪಾರ್ಟ್ಮೆಂಟ್​​​ವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಭಾರಿ ಶಬ್ದದೊಂದಿಗೆ ಗ್ಯಾಸ್ ಸಿಲಿಂಡರ್ ಸ್ಫೋಟಕ್ಕೆ ಕಾರ್ಕಳದ ಜನತೆ ಬೆಚ್ಚಿಬಿದ್ದಿದೆ.

ಕಾರ್ಕಳದ ಆನೆಕೆರೆ ಸಮೀಪ ಇರುವ ಅಪಾರ್ಟ್​ಮೆಂಟ್​​​ನಲ್ಲಿ ಸ್ಪೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಅಪಾರ್ಟ್​ಮೆಂಟ್​ನ 4 ಫ್ಲಾಟ್​ಗಳಿಗೆ ಹಾನಿಯಾಗಿದ್ದು, ಮನೆಯ ಗೋಡೆಗಳು ಛಿದ್ರವಾಗಿದ್ದು, ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದೆ. ಘಟನೆಯ ಪರಿಣಾಮ ಗಂಭೀರ ಗಾಯಗೊಂಡ ಇಬ್ಬರನ್ನು ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇನ್ನು ಫ್ಲ್ಯಾಟ್​​​ನಲ್ಲಿದ್ದವರ ಸಮಯ ಪ್ರಜ್​ ಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ಅಗ್ನಿಶಾಮಕ ದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ : ಮಾರ್ಟಿನ್​​​ ಸಿನಿಮಾ ಪ್ರೊಡ್ಯೂಸರ್​​ ಉದಯ್ ಮೆಹ್ತಾಗೆ ಲೀಗಲ್ ನೋಟಿಸ್ ಜಾರಿ..!

Leave a Comment

DG Ad

RELATED LATEST NEWS

Top Headlines

ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಡ್ರೆಸ್ ಕೋಡ್ ಜಾರಿ – ದೇವರ ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆ ಕಡ್ಡಾಯ..!

ಚಿಕ್ಕಮಗಳೂರು : ಇತ್ತೀಚೆಗೆ ಶೃಂಗೇರಿಯ ಶ್ರೀ ಶಾರದಾಂಬೆ ಸನ್ನಿಧಾನದಲ್ಲಿ ಹಾಗೂ ಸುತ್ತಲಿನ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿಯಾಗಿತ್ತು. ಇದೀಗ ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾದ ಹೊರನಾಡು ಶ್ರೀ

Live Cricket

Add Your Heading Text Here