ಮೈಸೂರು : ನೈಋುತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ತಮಿಳುನಾಡು ಹಾಗೂ ಪುದುಚೇರಿಯಲ್ಲಿ ತಲ್ಲಣ ಸೃಷ್ಟಿಸಿದ್ದ ‘ಫೆಂಗಲ್’ ಚಂಡಮಾರುತ ಇದೀಗ ಕರ್ನಾಟಕದ ಬಾಗಿಲಿಗೂ ಬಂದಿದೆ. ಸೈಕ್ಲೋನ್ ಪರಿಣಾಮ ರಾಜ್ಯದಲ್ಲಿ ಕಳೆದೆರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ವರುಣನ ಆರ್ಭಟ ಇವತ್ತು ಮತ್ತಷ್ಟು ಜೋರಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇನ್ನು ‘ಫೆಂಗಲ್’ ಚಂಡಮಾರುತದ ಎಫೆಕ್ಟ್ ಮೈಸೂರಿನ ಚಾಮುಂಡಿ ಬೆಟ್ಟಕ್ಕೂ ತಟ್ಟಿದ್ದು, ನಿರಂತರ ಮಳೆಗೆ ಬೆಟ್ಟದ ಕಲ್ಲು ಬಂಡೆಗಳು ಮುಖ್ಯ ರಸ್ತೆಗೆ ಜಾರಿವೆ. ಭಾರೀ ಮಳೆಯಿಂದಾಗಿ ಮಣ್ಣು ಸಡಿಲಗೊಂಡಿತ್ತು. ಇಂದು ಮುಂಜಾನೆ ಏಕಾಏಕಿ ರಸ್ತೆಗೆ ಬಂಡೆಗಳು ಉರುಳಿ ಬಿದ್ದಿದೆ.
ಬಂಡೆ ಉರುಳುವ ಸಂದರ್ಭದಲ್ಲೇ ಸರ್ಕಾರಿ ಬಸ್ ಹಾದು ಹೋಗಿದ್ದು, ಕೂದಲೆಳೆ ಅಂತರದಲ್ಲಿ ಆಗಬೇಕಿದ್ದ ಭಾರೀ ಅನಾಹುತ ತಪ್ಪಿದೆ. ಇನ್ನು ಬಂಡೆಗಳು ರಸ್ತೆಗೆ ಉರುಳಿದ ಪರಿಣಾಮ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ, ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಕೇರಳದಲ್ಲಿ ಭೀಕರ ಅಪಘಾತ.. ಐವರು MBBS ವಿದ್ಯಾರ್ಥಿಗಳ ದುರ್ಮರಣ..!