Download Our App

Follow us

Home » ರಾಜಕೀಯ » ಸಿ.ಟಿ ರವಿ ಕೇಸ್ ಬಗ್ಗೆ ಮಹಜರ್ ಹೇಗೆ ಮಾಡ್ತೀರಿ? – ಸಿಐಡಿಗೆ ಪರಿಷತ್ ಸಚಿವಾಲಯದಿಂದ ಪತ್ರ..!

ಸಿ.ಟಿ ರವಿ ಕೇಸ್ ಬಗ್ಗೆ ಮಹಜರ್ ಹೇಗೆ ಮಾಡ್ತೀರಿ? – ಸಿಐಡಿಗೆ ಪರಿಷತ್ ಸಚಿವಾಲಯದಿಂದ ಪತ್ರ..!

ಬೆಂಗಳೂರು : ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್‌ ಕುರಿತು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಕ್ಷೇಪಾರ್ಹ ಪದ ಬಳಸಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ಸ್ಥಳ ಮಹಜರು ವಿಚಾರದಲ್ಲಿ ಗೊಂದಲ ಮುಂದುವರಿದಿದ್ದು, ಯಾವ ರೀತಿಯಲ್ಲಿ ಮಹಜರು ಮಾಡಲಾಗುತ್ತದೆ ಎಂಬುದನ್ನು ವಿವರಿಸುವಂತೆ ಪರಿಷತ್ ಸಚಿವಾಲಯವು ಸಿಐಡಿಗೆ ಪತ್ರ ಬರೆದಿದೆ.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲ ಅಧಿವೇಶನ ವೇಳೆ ನಡೆದ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌ ಮತ್ತು ಸಿ.ಟಿ.ರವಿ ಪ್ರಕರಣ ಸಂಬಂಧ ಸ್ಥಳ ಮಹಜರು ಮಾಡಲು ಪತ್ರ ಬರೆದಿರುವ ಸಿಐಡಿಗೆ ವಿಧಾನಪರಿಷತ್ ಸಚಿವಾಲಯ ಈ ಮರು ಪತ್ರ ಬರೆದಿದೆ ಎಂದು ತಿಳಿದುಬಂದಿದೆ.

ವಿಧಾನಪರಿಷತ್‌ ಕಾರ್ಯದರ್ಶಿ ಮಹಾಲಕ್ಷ್ಮೀ ಅವರು ಸಿಐಡಿಗೆ ಪತ್ರ ಬರೆದು ಯಾವ ರೀತಿ ಮಹಜರು ಮಾಡಲಾಗುತ್ತದೆ ಎಂಬುದರ ಕುರಿತು ವಿವರಣೆ ನೀಡುವಂತೆ ಸೂಚಿಸಿದ್ದಾರೆ. ಸ್ಥಳ ಮಹಜರು ಯಾವ ರೀತಿ ಇರಲಿದೆ ಎಂಬುದರ ಜತೆಗೆ ಯಾರನ್ನು ಮಹಜರು ಸ್ಥಳಕ್ಕೆ ಕರೆದೊಯ್ಯಲಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಕೇಳಲಾಗಿದೆ. ಸಭಾಪತಿ ಬಸವರಾಜ ಹೊರಟ್ಟಿ ನಿರ್ದೇಶನ ಮೇರೆಗೆ ಸಿಐಡಿಗೆ ಪತ್ರ ಬರೆಯಲಾಗಿದೆ ಎಂದು ತಿಳಿದುಬಂದಿದೆ.

ಲಕ್ಷ್ಮೀ ಹೆಬ್ಬಾಳ್ಕರ್‌ ಮತ್ತು ಸಿ.ಟಿ.ರವಿ ನಡುವಿನ ಮಾತಿನ ಚಕಮಕಿ ವೇಳೆ ವಿಧಾನಪರಿಷತ್‌ ಹಲವು ಸದಸ್ಯರು ಉಪಸ್ಥಿತರಿದ್ದರು. ಈ ಪೈಕಿ ಯಾವ ಸದಸ್ಯರಿಗೆ ಮಹಜರು ವೇಳೆ ಸಾಕ್ಷಿಯಾಗಲು ಸೂಚನೆ ನೀಡಲಾಗುತ್ತದೆ ಎಂಬುದರ ಕುರಿತು ಮಾಹಿತಿ ನೀಡಬೇಕು ಎಂದು ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ. 

ವಿಧಾನಪರಿಷತ್ ಸಚಿವಾಲಯದಿಂದ ಕೇಳಲಾದ ಪ್ರಶ್ನೆಗೆ ಸಿಐಡಿಯಿಂದ ಉತ್ತರ ಬಂದ ಬಳಿಕ ಮಹಜರಿಗೆ ಅನುಮತಿ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಅಲ್ಲಿಯವರೆಗೆ ಯಾವುದೇ ನಿರ್ಣಯ ಕೈಗೊಳ್ಳದಿರಲು ನಿರ್ಧರಿಸಲಾಗಿದೆ. ಸಿಐಡಿಯಿಂದ ಮಹಜರು ಕುರಿತು ವಿವರ ತಲುಪಿದ ಬಳಿಕ ವಿಧಾನಪರಿಷತ್ ಸಚಿವಾಲದಿಂದ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.

ಇದನ್ನೂ ಓದಿ : ಬೆಂಗಳೂರಲ್ಲಿ ಹೊತ್ತಿ ಉರಿದ ಐಷಾರಾಮಿ ಬೈಕ್​ ಶೋರೂಮ್​ – ಲಕ್ಷಾಂತರ ಮೌಲ್ಯದ ಬೈಕ್​ಗಳು ಸುಟ್ಟು ಭಸ್ಮ..!

Leave a Comment

DG Ad

RELATED LATEST NEWS

Top Headlines

ಮತ್ತೊಂದು ಸ್ಟಾರ್ ಜೋಡಿಯ ಡಿವೋರ್ಸ್ ಪಕ್ಕಾನಾ – ಇನ್‌ಸ್ಟಾಗ್ರಾಂನಲ್ಲಿ ಅನ್‌ಫಾಲೋ ಮಾಡಿದ ದಂಪತಿ!

ಮುಂಬೈ: ಟಿಂ ಇಂಡಿಯಾದ ಆಲ್​​ರೌಂಡರ್​ ಹಾರ್ದಿಕ್ ಪಾಂಡ್ಯಾ ಡಿವೋರ್ಸ್​ ಬೆನ್ನಲ್ಲೇ ಇದೀಗ ಭಾರತ ಕ್ರಿಕೆಟ್ ತಂಡದ ಮತ್ತೋರ್ವ ಆಟಗಾರನ ವಿಚ್ಛೇದನ ಸುದ್ದಿ ವ್ಯಾಪಕ ಚರ್ಚೆಯಾಗುತ್ತಿದೆ.  ಭಾರತದ ತಂಡದ

Live Cricket

Add Your Heading Text Here