ಚಿತ್ರದುರ್ಗ : ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಬೃಹತ್ ಶೋಭಯಾತ್ರೆಗೆ ಕ್ಷಣಗಣನೆ ಶುರುವಾಗಿದೆ. ಚಿತ್ರದುರ್ಗ ನಗರದಾದ್ಯಂತ ಕೇಸರಿ ಬಾವುಟ, ಬ್ಯಾನರ್, ಕಟೌಟ್ಗಳು ರಾರಾಜಿಸುತ್ತಿವೆ. ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ.
VHP ರಾಷ್ಟ್ರೀಯ ಸಂಚಾಲಕ ಧೀರಜ್ ದೊನೇರಿಯಾ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರೂ ಸಾನಿಧ್ಯ ವಹಿಸಲಿದ್ದಾರೆ.
ಲಕ್ಷಾಂತರ ಜನರು ಸೇರುವ ಕಾರಣದಿಂದಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಪೊಲೀಸರು ಟೈಟ್ ಸೆಕ್ಯೂರಿಟಿ ಮಾಡಿದ್ದಾರೆ. ಒಬ್ಬರು SP, ಇಬ್ಬರು ASP, 16 ಮಂದಿ DYSPಗಳು, 50 CPIಗಳು, 120 PSI ಗಳು,167 ASIಗಳು, 1886 ಮಂದಿ ಪೊಲೀಸರು, 10 KSRP ತುಕಡಿ, 12 DAR ತುಕಡಿ ಸೇರಿ 3500 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಚಿತ್ರದುರ್ಗ ನಗರದ 72 ಕಡೆ ಖಾಸಗಿ ವಿಡಿಯೋ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದೆ, 5 ಡ್ರೋನ್ ಕ್ಯಾಮರ, 50 ಸ್ಕ್ರೈ ಸೆಂಟ್ರಿಗಳ ಕಣ್ಗಾವಲು ಹಾಕಲಾಗಿದೆ. ವಿಶ್ವ ಹಿಂದೂ ಪರಿಷತ್ & ಭಜರಂಗದಳ ನೇತೃತ್ವದಲ್ಲಿ ಗಣಪತಿ ಶೋಭಯಾತ್ರೆ ನಡೆಯಲಿದೆ.
ಇದನ್ನೂ ಓದಿ : ಮಾಜಿ ಮಂತ್ರಿ ಮುನಿರತ್ನ ಮನೆ, ಕಚೇರಿಗಳ ಮೇಲೆ SIT ರೇಡ್..!