ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದ ಭಾರತದ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿಆಸ್ಟ್ರೇಲಿಯಾ ತಂಡ ಭರ್ಜರಿ ಜಯ ಸಾಧಿಸಿದೆ. ಈ ಜಯದೊಂದಿಗೆ ಆಸೀಸ್ ಪಡೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು 3-1 ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಭಾರತದ ವಿರುದ್ಧ 10 ವರ್ಷಗಳ ಬಳಿಕ ಟೆಸ್ಟ್ ಸರಣಿ ಗೆಲ್ಲುವಲ್ಲಿ ಕೊನೆಗೂ ಆಸ್ಟ್ರೇಲಿಯಾ ತಂಡ ಯಶಸ್ವಿಯಾಗಿದೆ.
ಆಸ್ಟ್ರೇಲಿಯಾ ವಿರುದ್ಧ ನಡೆದ 5ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಹೀನಾಯ ಸೋಲು ಕಂಡಿದೆ. ಎರಡನೇ ಇನ್ನಿಂಗ್ಸ್ನಲ್ಲಿ 157 ರನ್ಗಳಿಗೆ ಆಲೌಟ್ ಆಗಿದ್ದ ಭಾರತ ತಂಡ 162 ರನ್ಗಳ ಟಾರ್ಗೆಟ್ ನೀಡಿತ್ತು. ಇನ್ನೂ 6 ವಿಕೆಟ್ ಬಾಕಿ ಉಳಿಸಿಕೊಂಡು ಆಸ್ಟ್ರೇಲಿಯಾ ಅಲ್ಪ ಗುರಿ ಬೆನ್ನತ್ತಿ ಸರಣಿ ತನ್ನದಾಗಿಸಿಕೊಂಡಿದೆ. ಮೊದಲ ಇನ್ನಿಂಗ್ಸ್ನಲ್ಲಿ ಭಾರತ 185 ರನ್ಗೆ ಆಲೌಟ್ ಆಗಿತ್ತು. ಆಸ್ಟ್ರೇಲಿಯಾವನ್ನು 181 ರನ್ಗೆ ಕಟ್ಟಿಹಾಕಿದ್ದ ಬುಮ್ರಾ ಪಡೆ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ನಲ್ಲಿ ನೀರಸ ಪ್ರದರ್ಶನ ತೋರಿತ್ತು.
ರಿಶಬ್ ಪಂತ್ 61 ರನ್ ಗಳಿಸಿದ್ದು ಬಿಟ್ಟರೆ ಬೇರೆ ಯಾವ ಬ್ಯಾಟ್ಸ್ಮನ್ 50 ರನ್ ಗಳಿಸಲಿಲ್ಲ. ಸುಲಭ ಚೇಸ್ ಬೆನ್ನತ್ತಿದ್ದ ಆಸ್ಟ್ರೇಲಿಯಾ ಕೇವಲ 27 ಓವರ್ನಲ್ಲಿ 162 ರನ್ ಭಾರಿಸಿತು. ನಾಯಕ ಬುಮ್ರಾ ಅನಾರೋಗ್ಯ ಕಾರಣಕ್ಕೆ ಎರಡನೇ ಇನ್ನಿಂಗ್ಸ್ನಲ್ಲಿ ಬೌಲಿಂಗ್ ಮಾಡಲಿಲ್ಲ. ಇದು ಟೀಂ ಇಂಡಿಯಾಗೆ ಮತ್ತಷ್ಟು ಹೊಡೆತ ನೀಡ್ತು.
ಇದನ್ನೂ ಓದಿ : Dysp ಸೆಕ್ಸ್ ಸ್ಕ್ಯಾಂಡಲ್ – ಕಾಮುಕ ರಾಮಚಂದ್ರ ವಿರುದ್ಧ ದೂರು ನೀಡಲು 10ಕ್ಕೂ ಹೆಚ್ಚು ಸಂತ್ರಸ್ಥೆಯರು ರೆಡಿ..!