Download Our App

Follow us

Home » ರಾಜಕೀಯ » ಉಪ ಚುನಾವಣೆ : ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್‌, ಸಂಡೂರಲ್ಲಿ ಅನ್ನಪೂರ್ಣ ತುಕಾರಾಂಗೆ ಕಾಂಗ್ರೆಸ್​ ಟಿಕೆಟ್..!

ಉಪ ಚುನಾವಣೆ : ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್‌, ಸಂಡೂರಲ್ಲಿ ಅನ್ನಪೂರ್ಣ ತುಕಾರಾಂಗೆ ಕಾಂಗ್ರೆಸ್​ ಟಿಕೆಟ್..!

ಬೆಂಗಳೂರು : ರಾಜ್ಯದಲ್ಲಿ ಉಪಚುನಾವಣಾ ಕಣ ರಂಗೇರಿದ್ದು, ಎರಡು ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಚನ್ನಪಟ್ಟಣದಿಂದ ಸಿ.ಪಿ.ಯೋಗೇಶ್ವರ್‌ ಹಾಗೂ ಸಂಡೂರು ಕ್ಷೇತ್ರದಿಂದ ಅನ್ನಪೂರ್ಣ ಅವರು ಸ್ಪರ್ಧಿಸಲಿದ್ದಾರೆ ಎಂದು ಎಐಸಿಸಿ ಘೋಷಣೆ ಮಾಡಿದೆ.

ಬಳ್ಳಾರಿ ಸಂಸದ ಇ.ತುಕಾರಾಂ ಅವರ ಪತ್ನಿ ಅನ್ನಪೂರ್ಣ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಯೋಗೇಶ್ವರ್ ಆರನೇ ಬಾರಿಗೆ ವಿಧಾನಸಭೆ ಪ್ರವೇಶಿಸಲು ಸ್ಪರ್ಧಿಸಿದ್ದಾರೆ. ಯೋಗೇಶ್ವರ್ ಅವರು ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಶಿಗ್ಗಾಂವಿ ಕ್ಷೇತ್ರದ ಅಭ್ಯರ್ಥಿಯನ್ನು ಕಾಂಗ್ರೆಸ್ ಇನ್ನೂ ಘೋಷಣೆ ಮಾಡಿಲ್ಲ. ನಾಮಪತ್ರ ಸಲ್ಲಿಸಲು ಅಕ್ಟೋಬರ್ 25 ಕೊನೆಯ ದಿನವಾಗಿದೆ.

ಬುಧವಾರವಷ್ಟೇ ಸಿ.ಪಿ ಯೋಗೇಶ್ವರ್‌ ಅವರು ಕಾಂಗ್ರೆಸ್​ ಸೇರ್ಪಡೆಯಾಗಿದ್ದರು. ಕಾಂಗ್ರೆಸ್‌ ಸೇರ್ಪಡೆಯಾಗುತ್ತಿದ್ದಂತೆಯೇ ಅವರಿಗೆ ಟಿಕೆಟ್‌ ಸಿಗಲಿದೆ ಎನ್ನುವುದು ಬಹುತೇಕ ಖಚಿತವಾಗಿತ್ತು. ಘೋಷಣೆಯಷ್ಟೇ ಬಾಕಿ ಉಳಿದಿತ್ತು. ನಂತರ ತಡರಾತ್ರಿ ಟಿಕೆಟ್‌ ಘೋಷಣೆಯಾಗಿದೆ.

ಇದನ್ನೂ ಓದಿ : ಬಿಗ್ ಬಾಸ್ ವೇದಿಕೆಯಲ್ಲಿ ಸಲ್ಮಾನ್ ಖಾನ್‌ಗೆ ಮದುವೆ ಪ್ರಪೋಸಲ್ ಇಟ್ಟ ನಟಿ..!

Leave a Comment

DG Ad

RELATED LATEST NEWS

Top Headlines

ಬಿಗ್​ಬಾಸ್​ ಸ್ಪರ್ಧಿಗಳಿಗೆ ಬಿಗ್​ ಶಾಕ್ – ದೊಡ್ಮನೆಗೆ ರಾಧಾ ಹಿರೇಗೌಡರ್ ಖಡಕ್ ಎಂಟ್ರಿ..!

ಬಿಗ್​ಬಾಸ್ ಕನ್ನಡ​ ಸೀಸನ್​ 11 ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ಮನೆಯಲ್ಲಿ ಸ್ಪರ್ಧಿಗಳ ನಡುವೆ ಪೈಪೋಟಿ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಲಾಯರ್ ಜಗದೀಶ್ ಮತ್ತು ರಂಜಿತ್​​ ಅವರನ್ನು ಎಲಿಮಿನೇಟ್

Live Cricket

Add Your Heading Text Here