ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್ನ ಎಲ್ಲಾ 17 ಆರೋಪಿಗಳು ಇಂದು ಬೆಂಗಳೂರಿನ ಸೆಷನ್ಸ್ ಕೋರ್ಟ್‌ಗೆ ಹಾಜರಾಗಿ ಕೆಲ ಕಾಲ ವಿಚಾರಣೆ ಎದುರಿಸಿದರು. ಆ ಬಳಿಕ ಕೋರ್ಟ್ ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 25ಕ್ಕೆ ಮುಂದೂಡಿತು.
6 ತಿಂಗಳ ನಂತರ ದರ್ಶನ್-ಪವಿತ್ರಾ ಗೌಡ ಈಗ ಕೋರ್ಟ್‌ನಲ್ಲಿ ಮುಖಾಮುಖಿಯಾಗಿದ್ದು, ದರ್ಶನ್ನ್ನು ನೋಡಿ ಪವಿತ್ರಾ ಗೌಡ ಕಣ್ಣೀರು ಹಾಕಿದ್ದಾರೆ. ಈ ವೇಳೆ ಗೆಳತಿ ಪ್ರವಿತ್ರಾ ಗೌಡರನ್ನು ದರ್ಶನ್ ಸಮಾಧಾನ ಮಾಡಿದ್ದಾರೆ. ಕೋರ್ಟ್ ಹಾಲ್‌ನಲ್ಲಿ ಪವಿತ್ರಗೌಡ ಪದೇ ಪದೇ ದರ್ಶನ ಮಾತನಾಡಿಸಲು ಪ್ರಯತ್ನ ಪಡುತ್ತಿದ್ದರು. ಈ ವೇಳೆ ದರ್ಶನ್ ಬೆನ್ನುತಟ್ಟಿ ಪವಿತ್ರಾ ಅವರನ್ನು ಸಂತೈಸಿ ಕೆಲ ಕ್ಷಣ ಮಾತನಾಡಿದರು.
ಇಂದು ಕೋರ್ಟ್‌ಗೆ ಹಾಜರಾದ ಪವಿತ್ರಾ ಗೌಡ ಹೊರ ರಾಜ್ಯದ ದೇವಸ್ಥಾನಕ್ಕೆ ತೆರಳಲು ಅನುಮತಿ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. 57ನೇ ಸಿಸಿಹೆಚ್ ನ್ಯಾಯಾಧೀಶರ ಮುಂದೆ ಪವಿತ್ರಾ ಪರ ವಕೀಲರು, ಹೊರ ರಾಜ್ಯದ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡುವಂತೆ ಕೋರಿದರು.
ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ಹೈಕೋರ್ಟ್‌ನಿಂದ ಜಾಮೀನು ಪಡೆದು ಕೊಂಡು 17 ಆರೋಪಿಗಳು ನ್ಯಾಯಾಂಗ ಬಂಧನದಿಂದ ಬಿಡುಗಡೆಯಾಗಿ ಜೈಲಿನಿಂದ ಹೊರಗಿದ್ದರು. ಸದ್ಯ ಬೆಂಗಳೂರಿನ ಸೆಷನ್ಸ್ ಕೋರ್ಟ್‌ನಲ್ಲಿ ಪ್ರಕರಣದ ಸಾಮಾನ್ಯ ವಿಚಾರಣೆ ನಡೆಯುತ್ತಿದ್ದು, ನಿಯಮದಂತೆ ಆರೋಪಿಗಳೆಲ್ಲಾ ಹಾಜರಾಜರಾಗಿದ್ದಾರೆ. ಜಾಮೀನು ನೀಡುವ ಸಂದರ್ಭದಲ್ಲಿಯೇ ಕೋರ್ಟ್ ವಿಚಾರಣೆಯಂದು ಕಡ್ಡಾಯವಾಗಿ ಹಾಜರಾಗುವಂತೆ ಷರತ್ತು ವಿಧಿಸಲಾಗಿತ್ತು.
ಇದನ್ನೂ ಓದಿ : ವೈದ್ಯಕೀಯ ಕ್ಷೇತ್ರದಲ್ಲಿ 4 ದಶಕಗಳ ನಿಸ್ವಾರ್ಥ ಸೇವೆ – ಪ್ರತಿಷ್ಠಿತ API ಪಿಜಿಶಿಯನ್ ಅವಾರ್ಡ್ಗೆ ಭಾಜನರಾದ ಡಾ.ಚಂದ್ರಕಾಂತ ಗುದಗೆ!