Download Our App

Follow us

Home » ಮೆಟ್ರೋ » ಖಾಸಗಿ ಬ್ಯಾಂಕ್​ನಿಂದ ಕಿರುಕುಳ ಆರೋಪ : ವಿಧಾನಸೌಧ ಮುಂಭಾಗ ಆತ್ಮಹ*ತ್ಯೆಗೆ ಯತ್ನಿಸಿದ ದಂಪತಿ..!

ಖಾಸಗಿ ಬ್ಯಾಂಕ್​ನಿಂದ ಕಿರುಕುಳ ಆರೋಪ : ವಿಧಾನಸೌಧ ಮುಂಭಾಗ ಆತ್ಮಹ*ತ್ಯೆಗೆ ಯತ್ನಿಸಿದ ದಂಪತಿ..!

ಬೆಂಗಳೂರು : ಖಾಸಗಿ ಬ್ಯಾಂಕ್ ನಿಂದ ನಿರಂತರ ಕಿರುಕುಳ ಆಗುತ್ತಿದೆ ಎಂದು ಆರೋಪಿಸಿ ವಿಧಾನಸೌಧದ ಮುಂಭಾಗದಲ್ಲಿ ದಂಪತಿ ಆತ್ನಹತ್ಯೆಗೆ ಯತ್ನಿಸಿದ್ದಾರೆ. ಜೆಜೆಆರ್​​ ನಗರದ ಶಾಯಿಸ್ತಾ ಕುಟುಂಬ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಹೈಡ್ರಾಮಾ ಮಾಡಿದ್ದಾರೆ.

ಬ್ಯಾಂಕ್​ನವರು 3 ಕೋಟಿ ಮೌಲ್ಯದ ಬಿಲ್ಡಿಂಗ್​ನ್ನು 1.41 ಕೋಟಿಗೆ ಹರಾಜು ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಸಚಿವ ಜಮೀರ್ ಅಹ್ಮದ್​​ ನೆರವಿಗೆ ಬರ್ಲಿಲ್ಲ ಅಂತಾ ಬೇಸರ ವ್ಯಕ್ತಪಡಿಸಿ, ನಮಗೆ ನ್ಯಾಯ ಕೊಡಿಸಿ ಎಂದು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದಾರೆ.

ಗೌರಿಪಾಳ್ಯದ ಅನ್ವರ್​ ಹೋಟೆಲ್​​ 13 ಸಿ ಕ್ರಾಸ್​ ರಸ್ತೆಯ ನಿವಾಸಿಗಳಾದ ಮೊಹ್ಮದ್​ ಮುನಾಯಿದ್, 48 ವರ್ಷದ ಶಾಯಿಸ್ತಾ ಬಾನು​ ದಂಪತಿ ಬೆಂಗಳೂರು ಕೋ ಆಪರೇಟೀವ್ ಬ್ಯಾಂಕ್​​ನಲ್ಲಿ 50 ಲಕ್ಷ ಸಾಲ ಪಡೆದಿದ್ದರು.

2016ರಲ್ಲಿ 50 ಲಕ್ಷ ಸಾಲಕ್ಕೆ ಕುಟುಂಬ 97 ಲಕ್ಷ ಸಾಲ ಕಟ್ಟಿದೆ. ಬಡ್ಡಿ ಕಡಿಮೆ ಮಾಡುವಂತೆ ದಂಪತಿ ಸಚಿವ ಜಮೀರ್ ಬಳಿ ಹೋಗಿದ್ದರು. ಸಾಲ ಬಾಕಿ ಇದೆ ಎಂದು ತಿಳಿಸಿದ ಬ್ಯಾಂಕ್ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು 1.41 ಕೋಟಿ ರೂಪಾಯಿಗೆ ಮಾರಾಟ ಮಾಡಿತ್ತು.

3 ಕೋಟಿ ಮೌಲ್ಯದ ಬಿಲ್ಡಿಂಗ್​​​​ 1.41 ಕೋಟಿಗೆ ಹರಾಜು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನಮಗೆ ಅನ್ಯಾಯ ಆಗಿದೆ ಎಂದು ವಿಧಾನ ಸೌಧ ಮೂರನೇ ಗೇಟ್ ಮುಂಭಾಗ ಸೀಮೆಎಣ್ಣೆ ಮೈ ಮೇಲೆ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ಫ್ಯಾಮಿಲಿಯನ್ನು ಪೊಲೀಸರು ವಶಕ್ಕೆ ಪಡೆದು, ದಂಪತಿ ಮೇಲೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ಬಳಿಕ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡು ಸ್ಟೇಷನ್​ ಬೇಲ್​ ಮೇಲೆ ಬಿಟ್ಟು ಕಳಿಸಿದ್ದಾರೆ.

ಇದನ್ನೂ ಓದಿ : ಬಳ್ಳಾರಿ ಪಾಲಿಕೆಯ ನೂತನ ಮೆಯರ್ ಆಗಿ ಬಿ.ಶ್ವೇತಾ ಆಯ್ಕೆ..!

Leave a Comment

DG Ad

RELATED LATEST NEWS

Top Headlines

‘ರಾಜ್ಯ ಸರ್ಕಾರ ಕೆಡವಲು 1000 ಕೋಟಿ ರೆಡಿ’ ಹೇಳಿಕೆ – ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ FIR ದಾಖಲು..!

ದಾವಣಗೆರೆ : ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ‘ರಾಜ್ಯ ಸರ್ಕಾರ ಕೆಡವಲು 1000 ಕೋಟಿ ರೆಡಿಯಾಗಿದೆ’ ಎಂದು ಹೇಳಿಕೆ

Live Cricket

Add Your Heading Text Here