Download Our App

Follow us

Home » ಮೆಟ್ರೋ » ಕೆಲಹೊತ್ತಿನಲ್ಲೇ ಲೋಕಸಭಾ ಎಲೆಕ್ಷನ್​​​ ಕೌಂಟಿಂಗ್ ಶುರು – ಬೆಂಗಳೂರಿನ 3 ಮತಎಣಿಕೆ ಕೇಂದ್ರಗಳಲ್ಲಿ ಹೇಗಿದೆ ಸಿದ್ಧತೆ?

ಕೆಲಹೊತ್ತಿನಲ್ಲೇ ಲೋಕಸಭಾ ಎಲೆಕ್ಷನ್​​​ ಕೌಂಟಿಂಗ್ ಶುರು – ಬೆಂಗಳೂರಿನ 3 ಮತಎಣಿಕೆ ಕೇಂದ್ರಗಳಲ್ಲಿ ಹೇಗಿದೆ ಸಿದ್ಧತೆ?

ಬೆಂಗಳೂರು : ಲೋಕಸಭಾ ಚುನಾವಣೆಯ ಮತ ಎಣಿಕೆಗೆ ಕೌಂಟ್ ಡೌನ್ ಶುರುವಾಗಿದೆ. ಇಂದು ಬೆಳಗ್ಗೆ 8 ಗಂಟೆಯಿಂದ ಮತಎಣಿಕೆ ಆರಂಭವಾಗಲಿದ್ದು, ಇದಕ್ಕಾಗಿ ಬೆಂಗಳೂರಿನ 3 ಮತಎಣಿಕೆ ಕೇಂದ್ರಗಳಲ್ಲಿ ಸಕಲ ಸಿದ್ಧತೆ ಮಾಡೊಕೊಳ್ಳಲಾಗಿದೆ. ಇಂದು ಬೆಳಗ್ಗೆ 7.45ಕ್ಕೆ ಸ್ಟ್ರಾಂಗ್ ರೂಂಗಳು ಓಪನ್ ಆಗಲಿದ್ದು, ಬೆಳಗ್ಗೆ 8 ಗಂಟೆಯಿಂದ ಮತಎಣಿಕೆ ಆರಂಭಿಸಲು ತಯಾರಿ ನಡೆಸಲಾಗಿದೆ.

ಸದ್ಯ ಬೆಂಗಳೂರಿನ 3 ಸ್ಟ್ರಾಂಗ್ ರೂಂಗಳಲ್ಲಿ 9 ಕೊಠಡಿಗಳಲ್ಲಿನ ಪ್ರತಿ ಕೊಠಡಿಗೆ 14 ಟೇಬಲ್ ಗಳಲ್ಲಿ ಮತಎಣಿಕೆ ನಡೆಯಲಿದೆ. 8 ಗಂಟೆಯಿಂದ ಅಂಚೆಮತಗಳ ಎಣಿಕೆ ಶುರುವಾಗಲಿದ್ದು, ಬಳಿಕ ಇವಿಎಂ ಕೌಂಟಿಂಗ್ ಆರಂಭವಾಗಲಿದೆ. ಮತಎಣಿಕೆ ಕೇಂದ್ರಗಳಲ್ಲಿ ಸಿಸಿಟಿವಿಗಳ ಮೂಲಕ ನಿಗಾ ಇಡಲಿದ್ದು, ಮತಎಣಿಕೆ ಸಿಬ್ಬಂದಿಗೆ ಮೊಬೈಲ್,  ಪರ್ಸ್, ಸ್ಮಾರ್ಟ್ ವಾಚ್, ಮುಂತಾದ ಎಲೆಕ್ಟ್ರಾನಿಕ್​​ ವಸ್ತುಗಳ ಬಳಕೆಗೆ ನಿಷೇಧ ಹೇರಲಾಗಿದೆ. ಆನ್ ಕೂರ್ ಸಾಫ್ಟ್​ವೇರ್ ನಲ್ಲಿ ಪ್ರತಿ ರೌಂಡ್ ಮತಎಣಿಕೆ ಅಪ್ ಲೋಡ್ ಆಗಲಿದ್ದು, ಎಣಿಕೆಯಲ್ಲಿ ಸಮಸ್ಯೆಯಾಗದಂತೆ ನಿಗಾ ಇಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. 1200 ಸಿಬ್ಬಂದಿಯಿಂದ ಮೂರು ಮತ ಎಣಿಕಾ ಕೇಂದ್ರಗಳಲ್ಲಿ ಮತಎಣಿಕೆ ನಡೆಯಲಿದ್ದು, ಪ್ರತಿ ಕೇಂದ್ರದಲ್ಲೂ ಬಿಗಿಭದ್ರತೆ ಮೂಲಕ ಎಚ್ಚರ ವಹಿಸಲಾಗಿದೆ.ಸ್ಟ್ರಾಂಗ್ ರೂಂನ 100 ಮೀಟರ್​​​ ಒಳಗೆ 144 ಸೆಕ್ಷನ್ ಜಾರಿ ಮಾಡಲಾಗಿದೆ.

ಬೆಂಗಳೂರಿನ ಸ್ಟ್ರಾಂಗ್ ರೂಂಗಳ ವಿವರ : –

 ಬೆಂಗಳೂರು ಕೇಂದ್ರ : ಮೌಂಟ್ ಕಾರ್ಮೆಲ್ ಕಾಲೇಜು, ಅರಮನೆ ರಸ್ತೆ, ವಸಂತನಗರ

  • ವಿಧಾನಸಭಾ ಕ್ಷೇತ್ರಗಳ ಸಂಖ್ಯೆ – 8
  • ಮತಗಟ್ಟೆಗಳ ಸಂಖ್ಯೆ – 2125
  • ಮತ ಎಣಿಕೆ ಕೊಠಡಿಗಳ ಸಂಖ್ಯೆ – 10
  • ಒಟ್ಟು ಟೇಬಲ್ ಗಳ ಸಂಖ್ಯೆ – 135
  • ಒಟ್ಟು ಸಿಬ್ಬಂದಿಯ ಸಂಖ್ಯೆ – 416

ಬೆಂಗಳೂರು ಉತ್ತರ : ಸೆಂಟ್ ಜೋಸೆಫ್ ಕಾಲೇಜು, ಮಲ್ಯ ರಸ್ತೆ

  • ವಿಧಾನಸಭಾ ಕ್ಷೇತ್ರಗಳ ಸಂಖ್ಯೆ – 8
  • ಮತಗಟ್ಟೆಗಳ ಸಂಖ್ಯೆ – 2911
  • ಮತ ಎಣಿಕೆ ಕೊಠಡಿಗಳ ಸಂಖ್ಯೆ – 19
  • ಒಟ್ಟು ಟೇಬಲ್ ಗಳ ಸಂಖ್ಯೆ – 130
  • ಒಟ್ಟು ಸಿಬ್ಬಂದಿಯ ಸಂಖ್ಯೆ – 390

ಬೆಂಗಳೂರು ದಕ್ಷಿಣ : ಎಸ್ಎಸ್ಎಂಆರ್ವಿ ಕಾಲೇಜು, 9ನೇ ಬ್ಲಾಕ್, ಜಯನಗರ

  • ವಿಧಾನಸಭಾ ಕ್ಷೇತ್ರಗಳ ಸಂಖ್ಯೆ – 8
  • ಮತಗಟ್ಟೆಗಳ ಸಂಖ್ಯೆ – 2120
  • ಮತ ಎಣಿಕೆ ಕೊಠಡಿಗಳ ಸಂಖ್ಯೆ – 9
  • ಒಟ್ಟು ಟೇಬಲ್ ಗಳ ಸಂಖ್ಯೆ – 118
  • ಒಟ್ಟು ಸಿಬ್ಬಂದಿಯ ಸಂಖ್ಯೆ – 354

ಒಟ್ಟಿನಲ್ಲಿ ಎಕ್ಸಿಟ್ ಪೋಲ್ ಬಿಸಿ ಬಿಸಿ ಚರ್ಚೆ ಹುಟ್ಟುಹಾಕಿರೋ ಹೊತ್ತಲ್ಲೇ, ಇದೀಗ ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಸಿಲಿಕಾನ್ ಸಿಟಿಯ ಮತ ಎಣಿಕೆ ಕೇಂದ್ರಗಳು ಸಜ್ಜಾಗಿದ್ದು, ಮತದಾರರ ಒಲವು ಯಾರ ಮೇಲಿದೆ ಅನ್ನೋದನ್ನ ಕಾದುನೋಡಬೇಕಿದೆ.

ಇದನ್ನೂ ಓದಿ : ಸಂಸತ್​​ ಸಮರದ ಮಹಾ ತೀರ್ಪಿಗೆ ಕೌಂಟ್​ಡೌನ್ ​- ದೇಶದ ಗದ್ದುಗೆ ಯಾರ ಪಾಲಾಗಲಿದೆ?

 

 

 

 

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here