ಬೆಂಗಳೂರು : ಕಾಪಿರೈಟ್ ಉಲ್ಲಂಘನೆ ಆರೋಪದಡಿ ನಟ ರಕ್ಷಿತ್ ಶೆಟ್ಟಿ ವಿರುದ್ಧ ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಎರಡು ಚಿತ್ರದ ಹಾಡುಗಳನ್ನು ಅನುಮತಿ ಇಲ್ಲದೆ ಬಳಕೆ ಆರೋಪದಡಿಯಲ್ಲಿ ರಕ್ಷಿತ್ ಶೆಟ್ಟಿ ಅವರಿಗೆ ಇದೀಗ ಸಂಕಷ್ಟ ಎದುರಾಗಿದೆ.
ಎಂಆರ್ಟಿ ಮ್ಯೂಸಿಕ್ ಪಾಲುದಾರರಾದ ನವೀನ್ ಕುಮಾರ್ ಎಂಬುವರು ನಟ ರಕ್ಷಿತ್ ಶೆಟ್ಟಿ ವಿರುದ್ದ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನ್ನ ಸಿನಿಮಾದ ಎರಡು ಹಾಡುಗಳನ್ನು ಅನುಮತಿ ಇಲ್ಲದೇ ನಟ ರಕ್ಷಿತ್ ಶೆಟ್ಟಿ ತಮ್ಮ ಸಿನಿಮಾಗಳಲ್ಲಿ ಬಳಸಿಕೊಂಡಿದ್ದಾರೆ ಎಂದು ನವೀನ್ ಕುಮಾರ್ ಆರೋಪಿಸಿದ್ದಾರೆ. ಸದ್ಯ ಪರಂವಃ ಸ್ಟುಡಿಯೋಸ್ ಹಾಗೂ ನಟ ರಕ್ಷಿತ್ ಶೆಟ್ಟಿ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ. ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ರಕ್ಷಿತ್ ಶೆಟ್ಟಿ ಮಾಲೀಕತ್ವದ ಪರಂವಃ ಸ್ಟುಡಿಯೋಸ್ ನಿರ್ಮಿಸಿದ್ದ ಬ್ಯಾಚುಲರ್ ಪಾರ್ಟಿ ಸಿನಿಮಾ ಜನವರಿ 26ರಂದು ರಿಲೀಸ್ ಆಗಿತ್ತು. ಈ ಸಿನಿಮಾದಲ್ಲಿ ‘ನ್ಯಾಯ ಎಲ್ಲಿದೆʼ ಟೈಟಲ್ ಸಾಂಗ್ ಹಾಗೂ “:ಒಮ್ಮೆ ನಿನ್ನನ್ನೂ ಕಣ್ತುಂತ ನೋಡುವಾಸೆ” ಹಾಡುಗಳನ್ನು ರಕ್ಷಿತ್ ಶೆಟ್ಟಿ ಕದ್ದಿದ್ದಾರೆ. ಅನುಮತಿ ಇಲ್ಲದೇ ಸಿನಿಮಾದಲ್ಲಿ ತಮ್ಮ ಹಾಡು ಬಳಸಿದ್ದಾರೆ ಎಂದು ನವೀನ್ ಕುಮಾರ್ ಆರೋಪಿಸಿದ್ದಾರೆ.
ಈ ಹಿಂದೆ ನವೀನ್ ಕುಮಾರ್ ಎಂಬುವವರ ಜತೆ ಹಾಡುಗಳ ಬಗ್ಗೆ ಮಾತುಕತೆ ನಡೆದಿತ್ತು. ನವೀನ್ ಕುಮಾರ್ ಹಾಡುಗಳ ಕಾಪಿರೈಟ್ ಪಡೆದು ಮಾರಟ ಮಾಡುವ ಬ್ಯುಸಿನೆಸ್ ಮೆನ್ ಆಗಿದ್ದರು. ಮಾತು ಕತೆ ಸರಿಯಾದ ಹಿನ್ನೆಲೆ ಹಾಡುಗಳ ಖರೀದಿ ವಿಚಾರವನ್ನು ಅಲ್ಲಿಗೆ ಬಿಟ್ಟಿದ್ದರಂತೆ. ಹಕ್ಕುಸ್ವಾಮ್ಯ ಹಾಗೂ ಪ್ರಸಾರದ ಹಕ್ಕನ್ನ ಖರೀದಿ ಮಾಡದೇ ರಕ್ಷಿತ್ ಶೆಟ್ಟಿ ನಿರ್ಮಾಣದ ಸಿನಿಮಾದಲ್ಲಿ ನ್ಯಾಯ ಎಲ್ಲಿದೆʼ ಟೈಟಲ್ ಸಾಂಗ್ ಹಾಗೂ ‘ಒಮ್ಮೆ ನಿನ್ನನ್ನೂ ಕಣ್ತುಂತ ನೋಡುವಾಸೆ” ಹಾಡುಗಳನ್ನು ಬಳಸಿದ್ದಾರೆ ಎಂದು ನವೀನ್ ಕುಮಾರ್ ಕಿಡಿಕಾರಿದ್ದಾರೆ.
ಈ ಹಿಂದೆ ರಕ್ಷಿತ್ ಶೆಟ್ಟಿ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರವಿಚಂದ್ರನ್ ಸಿನಿಮಾ ‘ಶಾಂತಿ ಕ್ರಾಂತಿ’ ಹಾಡನ್ನು ಅನುಮತಿ ಪಡೆಯದೆ ಬಳಸಿ ಸಂಕಷ್ಟಕ್ಕೆ ಸಿಲುಕಿದ್ರು. ಇದೀಗ ಬ್ಯಾಚುಲರ್ ಪಾರ್ಟಿ ಸಿನಿಮಾ ವಿಚಾರದಲ್ಲೂ ಕಾಫಿ ರೈಟ್ಸ್ ಕಂಟಕ ಎದುರಾಗಿದೆ. ಪ್ರಕರಣದಲ್ಲಿ ಪೊಲೀಸರು ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿ ಅವರನ್ನು A-2, ಪರಂವಃ ಸ್ಟುಡಿಯೋಮಸ್ನ್ನು A-1 ಮಾಡಿದ್ದಾರೆ.
ಇದನ್ನೂ ಓದಿ : ಕರಾವಳಿಗೆ ಮತ್ತೆ ರೆಡ್ ಅಲರ್ಟ್ : ಇಂದಿನಿಂದ 2 ದಿನ ಭಾರೀ ಮಳೆಯ ಮುನ್ಸೂಚನೆ, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ..!