ಬಜಾರ್ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟು, ಬೈಟ್ ಲವ್ ಮೂಲಕ ಪ್ರೇಕ್ಷಕರನ್ನ ಮೋಡಿ ಮಾಡಿ ಮಾಸ್ ಹೀರೋ ಆಗಿ ಮಿಂಚುತ್ತಿದ್ದಾರೆ ಶೋಕ್ದಾರ್ ಧನ್ವೀರ್ ಗೌಡ. ವಾ ವಾ ವಾಮನ ಅಂತ ಆರ್ಭಟಿಸೋ ವೇಳೆಯಲ್ಲಿಯೇ ಕೈವನಾಗಿ ಅಬ್ಬರಿಸಿ ಕನ್ನಡ ಚಿತ್ರರಂಗದಲ್ಲಿ ತನ್ನ ಛಾಪು ಮೂಡಿಸಿದ್ದಾರೆ. ಹೀಗೆ ಮಾಸ್ ಎಂಡ್ ಕ್ಲಾಸ್ ಲುಕ್ನಲ್ಲಿ ಹುಡುಗಿಯರಿಗೆ ಲವರ್ ಬಾಯ್ ಆಗಿರೋ ಧನ್ವೀರ್, ಪಕ್ಕ ಕಮರ್ಷಿಯಲ್ ಸಿನಿಮಾಗಳ ಮೂಲಕ ತನ್ನದೇ ಆದ ಅಭಿಮಾನಿಗಳನ್ನ ಗಳಿಸಿಕೊಂಡಿದ್ದಾರೆ. ಸದ್ಯ ‘ಹಯಗ್ರೀವ’ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ ಧನ್ವೀರ್. ಇತ್ತ ಧನ್ವೀರ್ ಆ ಒಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.. ಅರೇ ಯಾವ ಫೋಟೋ.. ಏನು ಅಂತ ಯೋಚನೆ ಮಾಡ್ತಿದ್ದೀರಾ..?
ನಟ ದರ್ಶನ್ ಮರ್ಡರ್ ಮಿಸ್ಟರಿ ಸಖತ್ ಸೌಂಡ್ ಮಾಡ್ತಿರುವಾಗಲೇ ಧನ್ವೀರ್ ಬಗ್ಗೆ ಚರ್ಚೆ ಜೋರಾಗಿದೆ.. ಹೇಳಿಕೇಳಿ ಧನ್ವೀರ್ ಹಾಗೂ ದರ್ಶನ್ ಸ್ನೇಹಿತರು. ಹೀಗಾಗಿ ಧನ್ವೀರ್ ಹಿಂದೆ ಕಾಣದ ಕೈಗಳ ಕುತಂತ್ರ ನಡೆಯುತ್ತಿದೆ. ನಾವು ಮೊದಲೇ ಹೇಳಿದಂತೆ ನಟ ಧನ್ವೀರ್ ಅವರ ಫೋಟೋ ಒಂದು ವೈರಲ್ ಆಗುತ್ತಿದೆ. ಆ ಫೋಟೋದಲ್ಲಿರೋದು ಏನಪ್ಪ ಅಂದ್ರೆ? ಒಬ್ಬ ಹುಡುಗ ಸೋಫಾದ ಮೇಲೆ ಮಲಗಿದ್ದಾನೆ. ಅವನನ್ನು ಯಾರೋ ಒಬ್ಬರು ಹಿಡಿದುಕೊಂಡಿದ್ದಾರೆ. ಧನ್ವಿರ್ ಅವನತ್ತ ನೋಡ್ತಿದ್ದಾರೆ. ಈ ಫೋಟೋದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬೇರೆ ರೀತಿಯಲ್ಲೇ ಚರ್ಚೆಯಾಗ್ತಿತ್ತು.
ಈ ಫೋಟೋ ನೋಡ್ತಿದ್ರೆ ನಟ ಧನ್ವೀರ್ ವಿರುದ್ಧ ಯಾರೋ ಪಿತೂರಿ ನಡೆಸುತ್ತಿದ್ದಾರೆ ಅನ್ಸುತ್ತೆ. ಕಾಣದ ಕೈಗಳ ಆಟ ಜೋರಾಗಿದೆ. ಧನ್ವೀರ್ ಬೆನ್ನ ಹಿಂದೆ ಸಂಚು ನಡೆದಂತೆ ಕಾಣಿಸುತ್ತಿದೆ. ನಟ ಧನ್ವೀರ್ ಅವರ ಹೆಸರು ಕೆಡಿಸಲು ಈ ರೀತಿ ಅಪಪ್ರಚಾರ ಮಾಡಿರೋ ಹಾಗೆ ಕಾಣುತ್ತಿದೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಧನ್ವಿರ್ ರಿಯಲ್ ಹೀರೋಯಿಸಂ ತೋರಿಸಿದ್ದಾರೆ, ಯುವಕನ ಮರ್ಮಾಂಗಕ್ಕೆ ಹೊಡೆದಿದ್ದಾರೆ ಅಂತ ಚರ್ಚೆಯಾಗ್ತಿತ್ತು. ಈ ಎಲ್ಲಾ ಚರ್ಚೆಗಳನ್ನು ನೋಡಿದ ಮೇಲೆ BTV ಧನ್ವಿರ್ ಅವರನ್ನು ಸಂಪರ್ಕಿಸಿ, ಇದು ನಿಜನಾ? ಅನ್ನೋದನ್ನು ಕೇಳಲಾಯಿತು. ಅದಕ್ಕೆ ಅವರು ಇದೆಲ್ಲಾ ಸುಳ್ಳು, ನಾವು ಸಂಸ್ಕಾರವಂತ ಕುಟುಂಬದಿಂದ ಬಂದವರು, ದೇವರನ್ನು ನಂಬೋನು ನಾನು, ಒಳ್ಳೆಯದು ಯಾವುದು ಕೆಟ್ಟದು ಯಾವುದು ಅನ್ನೋದು ನನಗೆ ಗೊತ್ತಿದೆ ಎಂದಿದ್ದಾರೆ.
ಅಸಲಿಗೆ ಅದು ಬರ್ತಡೇ ಫೋಟೋ, ನನ್ನ ಆತ್ಮೀಯ ಬಳಗದಲ್ಲಿರೋ ಹುಡುಗನ ಬರ್ತಡೇ ದಿನ ಬರ್ತಡೇ ಬಂಪ್ ಅಂತ ತಮಾಷೆಗೆ ಮಾಡಿರೋದು. ಅದನ್ನೇ ಯಾರೋ ನನಗೆ ಆಗದೇ ಇರೋರು, ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ, ಇದೆಲ್ಲಾ ಸುಳ್ಳು ಅಂತ ಹೇಳಿದ್ದಾರೆ. ನಂತರ ಆ ಫೋಟೋದಲ್ಲಿರೋ ಹುಡುಗನ ಜೊತೆಯೂ ಈ ಬಗ್ಗೆ ಕೇಳಿದಾಗ, ಆ ಹುಡುಗ ಕೂಡ ಬರ್ತಡೇ ವೇಳೆ ತಮಾಷೆಯಾಗಿ ನಡೆದಿರೋ ಪ್ರಸಂಗ. ಅದನ್ನ ಯಾರೋ ಧನ್ವಿರ್ ಗೆ ಆಗದೆ ಇರೋರು, ಅವರ ಹೆಸರನ್ನ ಕೆಡಿಸಲು ಈ ರೀತಿ ಅಪಪ್ರಚಾರ ಮಾಡಿದ್ದಾರೆ ಅಷ್ಟೇ ಅಂತ ಹೇಳಿದ್ದಾರೆ.
ನಟ ಧನ್ವೀರ್ ವಿರುದ್ಧ ಈ ರೀತಿ ಇಂದು ಪಿತೂರಿ ನಡೀದಿದೆ. ಯಾವುದೋ ಕಾಣದ ಕೈಗಳು ತಮಾಷೆ ಫೋಟೋ ಹಾಕಿ ಟ್ರೋಲ್ ಮಾಡ್ತಿದ್ದಾರೆ. ನಟ ಧನ್ವೀರ್ ಅವರ ಹೆಸರು ಕೆಡಿಸಲು ಈ ರೀತಿ ಅಪಪ್ರಚಾರ ಮಾಡಿದ್ದಾರೆ.
ಇದನ್ನೂ ಓದಿ : ಪವಿತ್ರಾಗೌಡ ಅಕೌಂಟ್ಗೆ ಸೌಂದರ್ಯ ಜಗದೀಶ್ರಿಂದ 2 ಕೋಟಿ ಟ್ರಾನ್ಸ್ಫರ್ – ದರ್ಶನ್ ಒತ್ತಡಕ್ಕೆ ಮಣಿದು ಕೋಟಿ ಕೋಟಿ ಕೊಟ್ರಾ?