ಕಾಂಗ್ರೆಸ್ನಲ್ಲಿ ವಿಧಾನಸಭೆಯಿಂದ ವಿಧಾನಪರಿಷತ್ಗೆ ನಡೆಯುವ ಎಲೆಕ್ಷನ್ ಟಿಕೆಟ್ಗೆ ಭಾರೀ ಫೈಟ್ ನಡೆಯುತ್ತಿದ್ದು, 7 ಸ್ಥಾನಕ್ಕೆ 300 ಜನರು ಸ್ಪರ್ಧಿಸಲು ಮುಂದಾಗಿದ್ದಾರೆ. ಈ ಹಿನ್ನಲೆ ಭಾರೀ ಒತ್ತಡಕ್ಕೆ ಸಿಲುಕಿದ ಕಾಂಗ್ರೆಸ್ ನಾಯಕರು ಅಭ್ಯರ್ಥಿಗಳ ಲಿಸ್ಟ್ ಫೈನಲ್ ಮಾಡಲು ಹರಸಾಹಸ ಪಡುವ ಸ್ಥಿತಿ ಎದುರಾಗಿದೆ.
ಕಳೆದ ರಾತ್ರಿ ರಹಸ್ಯ ಮೀಟಿಂಗ್ ಮಾಡಿದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು, 300 ಹೆಸರು 30ಕ್ಕೆ ಇಳಿಸಲು ಭಾರೀ ಸರ್ಕಸ್ ಮಾಡಿದ್ದಾರೆ. ಈಗಾಗಲೇ ಮಾಜಿ ಸಚಿವರು, ಮಾಜಿ ಶಾಸಕರು, ಮಾಜಿ MLCಗಳು ಹಾಗೂ ಜಿಲ್ಲಾವಾರು, ಜಾತಿವಾರು ಪ್ರಭಾವಿಗಳಯ ಒತ್ತಡ ಹೇರುತ್ತಿದ್ದಾರೆ.
ಇನ್ನು ವಿಧಾನಪರಿಷತ್ನ 11 ಸ್ಥಾನಗಳಿಗೆ ಜೂನ್ 13 ರಂದು ಚುನಾವಣೆ ನಿಗದಿಯಾಗಿದೆ. ಆದರೆ ಕಾಂಗ್ರೆಸ್ನ ಮಾಜಿ ಸಚಿವರು ಹಾಗೂ ಶಾಸಕರು ವಿಧಾನಪರಿಷತ್ಗೆ ನಮ್ಮನ್ನು ಆಯ್ಕೆ ಮಾಡುವಂತೆ ಫೈಟ್ ಮಾಡುತ್ತಿದ್ದಾರೆ. ಇದರಿಂದಾಗಿ ಪಟ್ಟಿ ಫೈನಲ್ ಮಾಡಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸರ್ಕಸ್ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಕೊಪ್ಪಳದಲ್ಲಿ ಒಂದೇ ಕುಟುಂಬದ ಮೂವರ ನಿಗೂಢ ಸಾ*ವು..!