Download Our App

Follow us

Home » ರಾಜಕೀಯ » ಕಾಂಗ್ರೆಸ್​​ಗೆ ಸೇರ್ಪಡೆಯಾದ ಸಿ.ಪಿ ಯೋಗೇಶ್ವರ್ – ‘ಕೈ’​ಗೆ ಸೈನಿಕನ ಕಂಡೀಷನ್​ ಏನೇನು..?

ಕಾಂಗ್ರೆಸ್​​ಗೆ ಸೇರ್ಪಡೆಯಾದ ಸಿ.ಪಿ ಯೋಗೇಶ್ವರ್ – ‘ಕೈ’​ಗೆ ಸೈನಿಕನ ಕಂಡೀಷನ್​ ಏನೇನು..?

ಬೆಂಗಳೂರು : ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆ ಕಣ ರಂಗೇರುತ್ತಿದ್ದು, ಸಿ.ಪಿ. ಯೋಗೇಶ್ವರ್‌ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್​​ಗೆ ಸೇರ್ಪಡೆಯಾಗಿದ್ದಾರೆ. ಇಂದು ಬೆಳಿಗ್ಗೆಯೇ ಡಿಸಿಎಂ ಡಿ.ಕೆ.ಶಿವಕುಮಾರ್‌ ಜೊತೆ ಕಾಣಿಸಿಕೊಂಡ ಸಿ.ಪಿ. ಯೋಗೇಶ್ವರ್‌ ಈ ಮೂಲಕ ಕಾಂಗ್ರೆಸ್‌ ಸೇರುವ ಮುನ್ಸೂಚನೆ ನೀಡಿದ್ದರು. ನಂತರ ಸಿಎಂ ಸಿದ್ದರಾಮಯ್ಯ ನೀವಾಸಕ್ಕೆ ಭೇಟಿ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಸಿ.ಪಿ. ಯೋಗೇಶ್ವರ್‌ ನಾಳೆಯೇ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಮೈತ್ರಿ ಟಿಕೆಟ್ ಸಿಗದ ಹಿನ್ನೆಲೆ ಸಿಪಿ ಯೋಗೇಶ್ವರ್ ಇದೀಗ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಸಿಪಿ ಯೋಗೇಶ್ವರ್ ವಾಟ್ಸ್​ ಆ್ಯಪ್​ ಮೂಲಕ ರಾಜೀನಾಮೆ ಸಲ್ಲಿಸಿದ್ದಾರೆ.

ಸಿಪಿ ಯೋಗೇಶ್ವರ್ ಕಾಂಗ್ರೆಸ್​ಗೆ​ ಬರೋಬ್ಬರಿ ಆರು ಷರತ್ತು ಹಾಕಿದ್ದಾರೆ.​​​ ಚನ್ನಪಟ್ಟಣದಲ್ಲಿ ಏನಾದರೂ ಮಾಡಿ ಎನ್‌ಡಿಎ ಮೈತ್ರಿ ಕೂಟ ಸೋಲಿಸಬೇಕು ಎನ್ನುವುದು ಕಾಂಗ್ರೆಸ್‌ ಉದ್ದೇಶ. ಅದರಲ್ಲೂ ತಮ್ಮದೇ ಹಿಡಿತ ಹೊಂದಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಮುಖಭಂಗ ಮಾಡಬೇಕು ಎನ್ನುವ ತಂತ್ರ ರೂಪಿಸುತ್ತಿದೆ. ಹಾಗಾಗಿ ದಳಪತಿ ಮಣಿಸಲು ಯೋಗೇಶ್ವರ್​ ಕಂಡೀಷನ್​​ಗೆ ಕಾಂಗ್ರೆಸ್ ಒಪ್ಪಿತಾ ​..? ಅನ್ನೋ ಪ್ರಶ್ನೆ ಇದೀಗ ಹುಟ್ಟಿಕೊಂಡಿದೆ.

ಕಾಂಗ್ರೆಸ್​ಗೆ ಸೈನಿಕನ ಕಂಡೀಷನ್​ ಏನೇನು..?

  • ಚನ್ನಪಟ್ಟಣದಿಂದ ಗೆದ್ದರೆ ಮಂತ್ರಿ ಮಾಡ್ಬೇಕು
  • ಬೆಂಬಲಿಗರಿಗೆ ಸೂಕ್ತ ಸ್ಥಾನಮಾನಗಳನ್ನು ನೀಡ್ಬೇಕು
  • ಅತೃಪ್ತರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡ್ಬೇಕು
  • ಹಳೆ ಮೈಸೂರು ಭಾಗದಲ್ಲಿ ನನಗೆ ಯಾರ ಹಸ್ತಕ್ಷೇಪ ಇರಬಾರದು
  • ಚುನಾವಣ ವೆಚ್ಚವನ್ನು ಕಾಂಗ್ರೆಸ್​ ಪಕ್ಷವೇ ಭರಿಸಬೇಕು
  • ಚನ್ನಪಟ್ಟಣ ಅಭಿವೃದ್ಧಿಗೆ ವಿಶೇಷ ಅನುದಾನ ನೀಡ್ಬೇಕು

ಇದನ್ನೂ ಓದಿ : ಬಿಜೆಪಿಗೆ ಗುಡ್​ ಬೈ – ಸಿಎಂ ಸಿದ್ದು ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ ಸಿ.ಪಿ ಯೋಗೇಶ್ವರ್..!

Leave a Comment

DG Ad

RELATED LATEST NEWS

Top Headlines

ಕಾಂಗ್ರೆಸ್​ ಸೇರಿದ ಯೋಗೇಶ್ವರ್​​ ಅಭ್ಯರ್ಥಿ ಆಗೋದು ಫಿಕ್ಸ್​.. ಡಿಕೆಶಿ ಚೆಕ್​ಮೇಟ್​ಗೆ ಹೆಚ್​ಡಿಕೆ ರಣತಂತ್ರ ಏನು..?

ಬೆಂಗಳೂರು : ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್​​ ಸಮ್ಮುಖದಲ್ಲಿ ಸಿ.ಪಿ.ಯೋಗೇಶ್ವರ್​ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಿದರು. ಈ ಮೂಲಕ

Live Cricket

Add Your Heading Text Here