Download Our App

Follow us

Home » ಜಿಲ್ಲೆ » ಕೋಮುಲ್ ನೇಮಕಾತಿ ಹಗರಣ – FIR ದಾಖಲಿಸಿ ಸ್ವತಂತ್ರ ತನಿಖೆ ನಡೆಸುವಂತೆ ED ಮನವಿ..!

ಕೋಮುಲ್ ನೇಮಕಾತಿ ಹಗರಣ – FIR ದಾಖಲಿಸಿ ಸ್ವತಂತ್ರ ತನಿಖೆ ನಡೆಸುವಂತೆ ED ಮನವಿ..!

ಬೆಂಗಳೂರು : ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದಲ್ಲಿ 2023ರಲ್ಲಿ ನೇಮಕ ಹಗರಣ ನಡೆದಿತ್ತು. ಇದೀಗ ಕೋಮುಲ್ ನೇಮಕಾತಿ ಹಗರಣದಲ್ಲಿ ಸ್ಫೋಟಕ ಡೆವಲಪ್ಮೆಂಟ್ ಆಗಿದ್ದು, ಈ ಹಗರಣದ ಬಗ್ಗೆ ತನಿಖೆ ನಡೆಸುವಂತೆ ಜಾರಿ ನಿರ್ದೇಶನಾಲಯವು ರಾಜ್ಯಪಾಲರು ಮತ್ತು ಲೋಕಾಯುಕ್ತರಿಗೆ ಪತ್ರ ಬರೆದಿದೆ.

FIR ದಾಖಲಿಸಿ ಸ್ವತಂತ್ರ ತನಿಖೆ ನಡೆಸುವಂತೆ ಕರ್ನಾಟಕ ಗವರ್ನರ್, ಮತ್ತು ಲೋಕಾಯುಕ್ತಕ್ಕೆ ED ಪತ್ರ ಬರೆದಿದೆ. ಈ ಬೃಹತ್ ಹಗರಣ ಕಾಂಗ್ರೆಸ್ ಶಾಸಕರ ನೇತೃತ್ವದಲ್ಲಿ ನಡೆದಿದೆ ಎನ್ನಲಾಗಿದೆ.  ಕೋಲಾರ -ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ನೇಮಕಾತಿಯಲ್ಲಿ ಅವ್ಯವಹಾರ ನಡೆದಿತ್ತು, ಆದರೆ ಈ ಹಗರಣ ಶಾಸಕ K.Y ನಂಜೇಗೌಡ ಮೇಲೆ ED ರೇಡ್ ನಡೆಸಿದ್ದಾಗ ಬೆಳಕಿಗೆ ಬಂದಿತ್ತು. ಮನಿ ಲಾಂಡ್ರಿಂಗ್ ಕೇಸ್​​ನಲ್ಲಿ K.Y ನಂಜೇಗೌಡ ಮೇಲೆ ದಾಳಿ ನಡೆದಿತ್ತು.

81 ಹುದ್ದೆಗಳ ನೇಮಕಾತಿಗಾಗಿ ಶಾಸಕರ ನೇತೃತ್ವದಲ್ಲಿ ಕೋಟಿ ಕೋಟಿ ಡೀಲ್ ನಡೆದಿದ್ದು, ಈ ಬಗ್ಗೆ ED ಈಗಾಗಲೇ ರಾಜ್ಯಪಾಲರಿಗೆ ಮಾಹಿತಿಯ ಕಡತ ರವಾನಿಸಿದೆ. ಫಲಿತಾಂಶ ಪ್ರಕಟಿಸಿದೇ ನೇಮಕಾತಿ ಮಾಡಿರೋ ಬಗ್ಗೆ ED ಬಳಿ ಸಾಕ್ಷ್ಯ ಇದೆ, ತಿದ್ದಿದ OMR ಶೀಟ್​​ಗಳು, ವಾಟ್ಸಪ್ ಚಾಟ್, ಕಾಲ್ ರೆಕಾರ್ಡ್ ಸೇರಿ ಹಲವು ಸಾಕ್ಷಿಗಳು ED ಬಳಿ ಇದೆ. K.Y ನಂಜೇಗೌಡ ಮತ್ತು ನಾಲ್ವರಿಂದ ನೇಮಕಾತಿಯಲ್ಲಿ ಅವ್ಯವಹಾರ ನಡೆಸಿರೋ ದಾಖಲೆಯಿದೆ.

ತಲಾ 80 ಲಕ್ಷ ಪಡೆದಿರುವುದಾಗಿ ನಿರ್ದೇಶಕರೊಬ್ಬರಿಂದ ತಪ್ಪೊಪ್ಪಿಗೆಯ ಮಾಹಿತಿ ಲಭ್ಯವಾಗಿದೆ. OMR ಶೀಟ್ ತಿದ್ದುಪಡಿಗಾಗಿ ನಿವೃತ್ತ ರಿಜಿಸ್ಟ್ರಾರ್ ಒಬ್ಬರು ತಲಾ 6 ಲಕ್ಷ ಪಡೆದ ದಾಖಲೆ EDಗೆ ಸಿಕ್ಕಿದೆ. ಈ ಎಲ್ಲಾ ಸಾಕ್ಷಿಗಳನ್ನು ED ರಾಜ್ಯಪಾಲರು ಮತ್ತು ಲೋಕಾಯುಕ್ತಕ್ಕೆ ಒದಗಿಸಿದೆ. ಇದರ ಜೊತೆಗೆ FIR ದಾಖಲಿಸಿ ಸ್ವತಂತ್ರ ತನಿಖೆ ನಡೆಸುವಂತೆ ED ಅಧಿಕಾರಿಗಳು ಮನವಿ ಕೋರಿದ್ದಾರೆ.

ಇದನ್ನೂ ಓದಿ : ಕಪಾಳಕ್ಕೆ ಹೊಡೆದು ಸಾರಿ ಕೇಳಿದ್ರೆ ಆಗುತ್ತಾ? – ಹೆಚ್​​ಡಿಕೆ ವಿರುದ್ಧ ಡಿಕೆಶಿ ಕಿಡಿ..!

Leave a Comment

DG Ad

RELATED LATEST NEWS

Top Headlines

ಬೆಂಗಳೂರಲ್ಲಿ ಕಾರು-ಆಟೋ ನಡುವೆ ಭೀಕರ ಅಪಘಾತ – ಆಟೋ ಸವಾರ ದುರ್ಮರಣ..!

ಬೆಂಗಳೂರು : ನಗರದಲ್ಲಿ ತಡರಾತ್ರಿ ಕಾರು ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿ ಆಟೋ ಸವಾರ ಸಾವನ್ನಪಿರುವ ಘಟನೆ ಜ್ಞಾನಭಾರತಿಯ ಮುದ್ದಿನಪಾಳ್ಯದಲ್ಲಿ ನಡೆದಿದೆ. ಕಿರಣ್ 32 ವರ್ಷ ಅಪಘಾತದಲ್ಲಿ

Live Cricket

Add Your Heading Text Here