Download Our App

Follow us

Home » ಮೆಟ್ರೋ » ದರ್ಶನ್ ಗ್ಯಾಂಗ್​ನ ಹೆಡೆಮುರಿಕಟ್ಟಿದ್ದೇ ಕಮಿಷನರ್​​ ಬಿ.ದಯಾನಂದ್​​..!

ದರ್ಶನ್ ಗ್ಯಾಂಗ್​ನ ಹೆಡೆಮುರಿಕಟ್ಟಿದ್ದೇ ಕಮಿಷನರ್​​ ಬಿ.ದಯಾನಂದ್​​..!

ಬೆಂಗಳೂರು : ರೇಣುಕಾಸ್ವಾಮಿಯನ್ನು ಅಪಹರಣ ಮಾಡುವುದರಿಂದ ಹಿಡಿದು ಕೊಲೆ ಮಾಡಿ ಶವ ಎಸೆಯುವ ತನಕ ಈ ಕೃತ್ಯದಲ್ಲಿ ಭಾಗಿಯಾದ ಎಲ್ಲರೂ ಈಗ ಪೊಲೀಸರ ಅತಿಥಿಯಾಗಿದ್ದಾರೆ. ರೇಣುಕಾಸ್ವಾಮಿ ಹತ್ಯೆಗೆ ಕಾರಣವಾದ ದರ್ಶನ್ ಅಂಡ್ ಗ್ಯಾಂಗ್​ನ ಎಲ್ಲರನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಇನ್ನು ಈ ಕೇಸ್​ನಲ್ಲಿ ದರ್ಶನ್ ಹೆಸರು ಹೊರಬಂದ ಕೂಡಲೇ ಸಿಕ್ರೇಟ್ ಅಪರೇಷನ್ ಒಂದು ನಡೆದಿತ್ತು. ಆ ಸಿಕ್ರೇಟ್​ ಆಪರೇಷನ್​ ಮಾಡಿದ್ದು ಯಾರು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಈ ಕೇಸ್​ನಲ್ಲಿ ಖುದ್ದು ಫೀಲ್ಡ್​​ಗೆ ಇಳಿದು ಎಲ್ಲಾ ಸಾಕ್ಷ್ಯ ಕಲೆ ಹಾಕಲು ನಿಂತಿದ್ದು ಬೇರೆ ಯಾರು ಅಲ್ಲ, ಬೆಂಗಳೂರು ನಗರ ಪೊಲೀಸ್​ ಕಮಿಷನರ್ ಬಿ.ದಯಾನಂದ್. ಹೌದು, ಜೂನ್ 10ರ ಬೆಳಗ್ಗೆ ಕೊಲೆ ಕೇಸ್​ನಲ್ಲಿ ನಟ ದರ್ಶನ್, ಪವಿತ್ರಾಗೌಡ ಹೆಸರು ಹೊರಬರುತ್ತಿದಂತೆ ಖುದ್ದು ಡಿಸಿಪಿ ಗಿರೀಶ್ ಟೀಮ್​ಗೆ ಕಮಿಷನರ್ ಬಿ.ದಯಾನಂದ್ ಅವರು ತನಿಖೆ ನಡೆಸುವ ಬಗ್ಗೆ ಮಾರ್ಗದರ್ಶನ ನೀಡಿದ್ದರು.

ಕಮಿಷನರ್ ದಯಾನಂದ್ ಅವರು ಪ್ರಕರಣದ ಮಾಹಿತಿ ಕಲೆ ಹಾಕಿ, ದರ್ಶನ್ ​​​ತಪ್ಪಿಸಿಕೊಳ್ಳಲು ಮಾಡಿದ್ದ ಎಲ್ಲಾ ಪ್ಲ್ಯಾನ್​ಗಳನ್ನು ಉಲ್ಟಾ ಮಾಡಿದ್ದರು. ಮೂವರು ಆರೋಪಿಗಳನ್ನು ಸರೆಂಡರ್ ಮಾಡಿಸಿ ಈ ಕೇಸ್​ನಿಂದ ಬಚವಾಗಲು ಯತ್ನಿಸಿದ್ದ ದರ್ಶನ್​ಗೆ ಕಮಿಷನರ್​​ ದಯಾನಂದ್ ಕೋಳ ಹಾಕಿದ್ದರು. ಕೊಲೆ ಕೇಸ್​ನಿಂದ ದರ್ಶನ್​​​​​​​​​​​​​​ ಹೆಸರು ಕೈ ಬಿಡುವಂತೆ ಭಾರೀ ಒತ್ತಡಗಳು ಬಂದಿದ್ದವು. ಆದ್ರೆ, ಯಾವ ಒತ್ತಡಕ್ಕೂ ಮಣಿಯದೇ ಕಮಿಷನರ್​​​ ದಯಾನಂದ್​ ಅವರು ದರ್ಶನ್​ನ್ನು​​ ಅರೆಸ್ಟ್​ ಮಾಡಿಸಿದ್ದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್​ ಪಾತ್ರದ ಇಂಚಿಂಚೂ ಮಾಹಿತಿ ಕಲೆ ಹಾಕಿ, ಪೊಲಿಟಿಕಲ್​ ಪ್ರೇಷರ್​​ ಹಾಗೂ ಯಾವ ಪ್ರಭಾವಿಗಳ ಮಾತಿಗೂ ಡೋಂಟ್​​ಕೇರ್ ಎನ್ನದೆ ಕಮಿಷನರ್​ ದಯಾನಂದ್ ಅವರು​​ ದರ್ಶನ್​ & ಗ್ಯಾಂಗ್​ನ್ನು ಸದ್ಯ ಕಂಬಿ ಹಿಂದೆ ಬಂಧಿಯಾಗುವಂತೆ ಮಾಡಿದ್ದಾರೆ.

ಒಂದೇ ಕೇಸ್​​ನಲ್ಲಿ 17 ಜನ ಆರೋಪಿಗಳನ್ನು ಅರೆಸ್ಟ್​​ ಮಾಡಿದ ಮೊದಲ ಕೇಸ್​ ಇದಾಗಿದ್ದು, ದರ್ಶನ್ ಬಂಧನದ ನಂತರ ಪ್ರತಿದಿನ ದರ್ಶನ್ ವಿಚಾರಣೆಯ ಮಾಹಿತಿಯನ್ನು ಕಮಿಷನರ್ ದಯಾನಂದ್​ ಕಲೆ ಹಾಕಿದ್ದಾರೆ. ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಗೆ ಪ್ರತಿದಿನ ಭೇಟಿ ಕೊಟ್ಟು ಆರೋಪಿಗಳ ವಿಚಾರಣೆಯನ್ನು ಖುದ್ದು ಕಮಿಷನರ್ ದಯಾನಂದ್​ ಅವರು ನಡೆಸಿದ್ದಾರೆ. ಇನ್ನು ಪ್ರತಿ ಹಂತದಲ್ಲೂ ತನಿಖೆಯಲ್ಲಿ ಯಾವುದೇ ಲೋಪ ಆಗದಂತೆ ಎಚ್ಚರಿಕೆ ವಹಿಸಿ ಅಪರೇಟ್ ಮಾಡಿಸಿದ್ದಾರೆ. ಪ್ರಕರಣದಲ್ಲಿ ವಾದ ಮಂಡಿಸಲು SPP ನೇಮಕ ಮಾಡಿಸಿದ್ದು ಕೂಡ ಕಮಿಷನರ್ ದಯಾನಂದ್ ಅವರೆ. ಹಳ್ಳ ಹಿಡಿಯುತ್ತಿದ್ದ ಈ ಕೇಸನ್ನು ಹಾನೆಸ್ಟ್ ಆಗಿ ಅಪರೇಟ್ ಮಾಡಿದ ಖ್ಯಾತಿ ದಯಾನಂದ್ ಅವರಿಗೆ ಸಲ್ಲುತ್ತದೆ. ಈ ಮೂಲಕ ರೇಣುಕಾಸ್ವಾಮಿ ಸಾವಿಗೆ ನ್ಯಾಯ ಕೊಡಿಸಲು ಕಮಿಷನರ್ ದೊಡ್ಡ​​ ಪಾತ್ರ ವಹಿಸಿದ್ದಾರೆ.

ಇದನ್ನೂ ಓದಿ : ರೇಣುಕಾಸ್ವಾಮಿ ಹತ್ಯೆ ಕೇಸ್​ – ಇಂದು ದರ್ಶನ್‌ ಪರಪ್ಪನ ಅಗ್ರಹಾರ ಜೈಲು ಸೇರೋದು ಫಿಕ್ಸ್?

 

 

 

 

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here