Download Our App

Follow us

Home » ಅಪರಾಧ » ಬೀದರ್​ನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಭರ್ಜರಿ ಕಾರ್ಯಾಚರಣೆ.. ಕೋಟಿ-ಕೋಟಿ ಮೌಲ್ಯದ ಗುಟ್ಕಾ ವಶಕ್ಕೆ..!

ಬೀದರ್​ನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಭರ್ಜರಿ ಕಾರ್ಯಾಚರಣೆ.. ಕೋಟಿ-ಕೋಟಿ ಮೌಲ್ಯದ ಗುಟ್ಕಾ ವಶಕ್ಕೆ..!

ಬೀದರ್​ : ಬೀದ‌ರ್ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ವಿವಿಧ ರಾಜ್ಯಕ್ಕೆ ಅಕ್ರಮವಾಗಿ ಗುಟ್ಕಾ ಪಾನ ಮಸಾಲಾ, ತಂಬಾಕು ತಯಾರಿಸಿ ಸಾಗಿಸುತ್ತಿರುವ ಅಡ್ಡೆಯನ್ನು ಪತ್ತೆ ಮಾಡಿದ್ದಾರೆ.

ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಮಹೇಶ ಪಾಟೀಲ್ ನೇತೃತ್ವದಲ್ಲಿ ದಾಳಿ ಮಾಡಿ ಒಂದು ಕೋಟಿ ಗೂ ಅಧಿಕ ಮೌಲ್ಯದ ಪಾನಪಸಾಲ ತಯಾರಿಕೆ ಕಚ್ಚಾವಸ್ತುಗಳು ಹಾಗೂ ಗುಟ್ಕಾ ಹಾಗೂ ಪಾನ ಮಸಾಲಾವನ್ನು ವಶಕ್ಕೆ ಪಡೆದಿದ್ದಾರೆ.

ಬೀದರನ ಕೋಳಾರ ಕೈಗಾರಿಕೆ ಪ್ರದೇಶದಲ್ಲಿರುವ ಗೋದಾಮಿನಲ್ಲಿ ನಕಲಿ ವಿವಿಧ ಬ್ಯಾಂಡ್ ಹೆಸರಲ್ಲಿ ಕಚ್ಚಾ ವಸ್ತುಗಳು ಪತ್ತೆ ಮಾಡಲಾಗಿದ್ದು, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ತೆಲಂಗಾಣ ಹಾಗೂ ಆಂಧ್ರಪ್ರದೇಶಕ್ಕೆ ಇಲ್ಲಿ ತಯಾರಿಸುವ ಸುಮಾರು 40 ಕ್ಕೂ ಅಧಿಕ ನಮೂನೆಯ ಗುಟ್ಕಾ ಪಾನಮಸಲಾ ಸರಬರಾಜು ಮಾಡೋ ಮಾಹಿತಿ ಮೇರೆಗೆ ಮಧ್ಯ ರಾತ್ರಿ ಕಾರ್ಯಚರಣೆ ನಡೆಸಿದ ವಾಣಿಜ್ಯ ತೆರಿಗೆ ಅಧಿಕಾರಿಗಳು ಲಾರಿ ಚಾಲಕ ಹಾಗೂ ಕೆಲ ಸಿಬ್ಬಂದಿಗಳನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ.

ಸ್ಥಳಕ್ಕೆ ಆಹಾರ ಸುರಕ್ಷತಾಧಿಕಾರಿ, ನ್ಯೂಟೌನ್ ಠಾಣೆ ಸಿಪಿಐ ವಿಜಯಕುಮಾ‌ರ್ ಹಾಗೂ ವಾಣಿಜ್ಯ ತೆರಿಗೆ ಅಧಿಕಾರಿಗಳಾದ ಮಹೇಶ ಪಾಟೀಲ್ ಹಾಗೂ ಶಿವಕುಮಾರ್ ಸ್ವಾಮಿ,ಅಶೋಕ ಹಾಗೂ ಮಹೇಶ ಮಾಶೆಟ್ಟೆ ಸೇರಿದಂತೆ ಅಧಿಕಾರಿಗಳ ತಂಡ ಗೋದಾಮಿನಲ್ಲಿ ಠಿಕಾಣಿ ಹೂಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಮೆಟ್ರೋ ತಡೆಗೋಡೆಗೆ ಗೂಡ್ಸ್ ಲಾರಿ ಡಿಕ್ಕಿ.. ನಾಗವಾರ-ಹೆಬ್ಬಾಳ ಮಾರ್ಗದಲ್ಲಿ 10 ಕಿಲೋಮೀಟರ್​ ಟ್ರಾಫಿಕ್ ಜಾಮ್..!

Leave a Comment

DG Ad

RELATED LATEST NEWS

Top Headlines

ಕಿಡಿಗೇಡಿಗಳಿಂದ ಸುಪ್ರೀಂ ಕೋರ್ಟ್‌ನ ಅಧಿಕೃತ ಯೂಟ್ಯೂಬ್ ಚಾನೆಲ್​ ಹ್ಯಾಕ್..!

ನವದೆಹಲಿ : ಸುಪ್ರೀಂ ಕೋರ್ಟ್‌ನ ಅಧಿಕೃತ ಯೂಟ್ಯೂಬ್ ಚಾನೆಲ್ ಅನ್ನೇ ಕಿಡಿಗೇಡಿಗಳು ಶುಕ್ರವಾರ ಹ್ಯಾಕ್ ಮಾಡಿದ್ದಾರೆ. ದೇಶದ ಸರ್ವೋಚ್ಚ ನ್ಯಾಯಾಲಯದ ಯೂಟ್ಯೂಬ್ ಚಾನೆಲ್ ಹ್ಯಾಕ್ ಮಾಡಿ ಅದರಲ್ಲಿ

Live Cricket

Add Your Heading Text Here