Download Our App

Follow us

Home » ಸಿನಿಮಾ » ಮತ್ತೊಮ್ಮೆ ‘ಕಾಮಿಡಿ-ಲವ್​’ ಸಿನಿಮಾ ಮೂಲಕ ಎಂಟ್ರಿ – ಹರೀಶ್ ರಾಜ್ ನಿರ್ದೇಶನದ “ವೆಂಕಟೇಶಾಯ ನಮಃ” ಟೀಸರ್ ಬಿಡುಗಡೆ!

ಮತ್ತೊಮ್ಮೆ ‘ಕಾಮಿಡಿ-ಲವ್​’ ಸಿನಿಮಾ ಮೂಲಕ ಎಂಟ್ರಿ – ಹರೀಶ್ ರಾಜ್ ನಿರ್ದೇಶನದ “ವೆಂಕಟೇಶಾಯ ನಮಃ” ಟೀಸರ್ ಬಿಡುಗಡೆ!

ಚಂದನವನದ ಕಲಾಕರ್ ನಟ , ನಿರ್ದೇಶಕ ಹರೀಶ್ ರಾಜ್ ಸಾರಥ್ಯದ “ವೆಂಕಟೇಶಾಯ ನಮಃ” ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಸಂಬಂಧ ರೇಣುಕಾಂಬ ಸ್ಟುಡಿಯೋದಲ್ಲಿ ಪತ್ರಿಕಾಗೋಷ್ಠಿ ಆಯೋಜನೆ ಮಾಡಲಾಗಿತ್ತು. ನಿರ್ದೇಶಕ ಹರೀಶ್ ರಾಜ್, ನಿರ್ಮಾಪಕ ಪಿ. ಜನಾರ್ದನ ಸೇರಿ ಚಿತ್ರ ತಂಡದವರು “ವೆಂಕಟೇಶಾಯ ನಮಃ” ಸಿನಿಮಾದ ಕುರಿತು ಮಾತನಾಡಿದರು.

ನಟ, ನಿರ್ದೇಶಕ ಹರೀಶ್ ರಾಜ್ ಮಾತನಾಡುತ್ತಾ, ನಮ್ಮ ‘ವೆಂಕಟೇಶಾಯ ನಮಃ‘ ಚಿತ್ರಕ್ಕೆ ಸ್ಪೂರ್ತಿ ನಾನು ಈ ಹಿಂದೆ ಅಭಿನಯಿಸಿದ್ದ ‘ಗೋವಿಂದಾಯ ನಮಃ’ ಸಿನಿಮಾ ಎನ್ನಬಹುದು. ಹಾಗಾಗಿ ಮತ್ತೆ ಪ್ಯಾರ್​ಗೆ ಆಗ್ಬಿಟ್ಟೈತೆ.. ಅನ್ನೋ ಅಡಿಬರಹವನ್ನು ಕೂಡ ಬಳಸಿಕೊಂಡಿದ್ದೇವೆ. ಆ ಟ್ಯೂನ್ ಕೂಡ ಮತ್ತೆ ಬಳಸಿಕೊಳ್ಳುವ ಉದ್ದೇಶವಿದೆ. ಅದರ ಪ್ರಯತ್ನ ನಡೆಯುತ್ತಿದೆ. ಇದೊಂದು ಲವ್ ಸ್ಟೋರಿ ಚಿತ್ರವಾಗಿದ್ದು ಹುಡುಗಿ ಕೈ ಕೊಟ್ಟಾಗ ಜೀವನವನ್ನು ಚಾಲೆಂಜ್ ಆಗಿ ತಗೊಂಡು ಲವ್ ಮಾಡದೇ, ಹುಡುಗೀರ ಜೊತೆ ಚೆಲ್ಲಾಟವಾಡುತ್ತಾ, ಎಂಜಾಯ್ ಮಾಡಬೇಕೆಂಬ ವೆಂಕಿ ಅಲಿಯಾಸ್ ವೆಂಕಟೇಶನ ಸುತ್ತ ನಡೆಯುವ ಕಥೆಯನ್ನು ಹಾಸ್ಯ ಮಿಶ್ರಣದೊಂದಿಗೆ ಸಂಪೂರ್ಣ ಪ್ಯಾಕೇಜ್ ಒಳಗೊಂಡ ಮನರಂಜನೆಯ ಚಿತ್ರ ನೀಡಲು ಮುಂದಾಗಿದ್ದೇನೆ ಎಂದ್ರು.

“ವೆಂಕಟೇಶಾಯ ನಮಃ” ಸಿನಿಮಾದಲ್ಲಿ ಸಾಫ್ಟ್​ವೇರ್​ ಉದ್ಯೋಗಿ ಪಾತ್ರವನ್ನು ನಿರ್ವಹಿಸಿದ್ದೇನೆ. ನನ್ನ ತಾಯಿಯ ಪಾತ್ರದಲ್ಲಿ ಹಿರಿಯ ನಟಿ ಉಮಾಶ್ರೀ ಅವರು ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ 8 ಹೀರೋಯಿನ್ ಗಳು ಅಭಿನಯಿಸುತ್ತಿದ್ದು, ಇಬ್ಬರು ನಾಯಕಿಯರು ಪ್ರಮುಖವಾಗಿ ಕಾಣುತ್ತಾರೆ. ದೊಡ್ಡ ತಾರಾ ಬಳಗವೇ ಹೊಂದಿರುವ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುವುದರ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನ ವಹಿಸಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿ ನೀಡುತ್ತೇನೆ ನಿಮ್ಮ ಬೆಂಬಲ ನಮಗಿರಲಿ ಎಂದು ನಿರ್ದೇಶಕ ಹರೀಶ್ ರಾಜ್ ಕೇಳಿಕೊಂಡರು.

“ವೆಂಕಟೇಶಾಯ ನಮಃ” ಚಿತ್ರದ ನಿರ್ಮಾಪಕ ಪಿ. ಜನಾರ್ದನ ಮಾತನಾಡುತ್ತಾ, ನಿರ್ದೇಶಕರು ಕಾಮಿಡಿ ಸಬ್ಜೆಕ್ಟ್ ಹೇಳಿದ್ರು, ನಮಗೆ ಬಹಳ ಇಷ್ಟವಾಗಿ ಈ ಚಿತ್ರವನ್ನು ಆರಂಭಿಸಿದ್ದೇವೆ. ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ನಮಗೆ ಎಲ್ಲರೂ ಸಪೋರ್ಟ್ ಮಾಡಿ ಎಂದು ಕೇಳಿಕೊಂಡರು.

ಹಿರಿಯ ನಟ ಅಶೋಕ್ ಮಾತನಾಡುತ್ತಾ, ನಟ ಹಾಗೂ ನಿರ್ದೇಶಕ ಹರೀಶ್ ರಾಜ್ ನನಗೆ ದಂಡಪಿಂಡಗಳು ಧಾರಾವಾಹಿಯ ಮೂಲಕ ಪರಿಚಯ. ನಟನೆ ಹಾಗೂ ನಿರ್ದೇಶನ ಜವಾಬ್ದಾರಿಯನ್ನು ಒಟ್ಟೊಟ್ಟಿಗೆ ಹೇಗೆ ನಿಭಾಯಿಸುತ್ತಾರೆ ಎಂಬುದೇ ನನಗೆ ಆಶ್ಚರ್ಯ. ನನ್ನ 50 ವರ್ಷದ ಸಿನಿಮಾ ಜರ್ನಿಯಲ್ಲಿ ಇಂದಿಗೂ ನಿರ್ದೇಶನ ಮಾಡುವುದಕ್ಕೆ ಭಯ ಪಡುತ್ತೇನೆ. ಈಗಿನ ಸಿನಿಮಾ ಟ್ರೆಂಡೇ ಬದಲಾಗಿದೆ. ವರ್ಷಕ್ಕೆ 200 ಚಿತ್ರಗಳು ಬಂದರೆ ಬೆರಳೆಣಿಕೆಯ ಚಿತ್ರಗಳು ಮಾತ್ರ ಸಕ್ಸಸ್ ಕಾಣುತ್ತಿದೆ. ನಾನು ಈ ಚಿತ್ರದಲ್ಲಿ ನಾಯಕಿಯ ತಂದೆ ಪಾತ್ರವನ್ನು ಮಾಡುತ್ತಿದ್ದೇನೆ , ಕಾಮಿಡಿ ಸಬ್ಜೆಕ್ಟ್ ಜೊತೆ ಮನರಂಜನೆ ಕೂಡ ಸಿಗುತ್ತೆ , ಎಲ್ಲರೂ ನಮ್ಮ ತಂಡಕ್ಕೆ ಸಹಕಾರ , ಬೆಂಬಲ ನೀಡಿ ಎಂದು ಕೇಳಿಕೊಂಡರು.

ಮತ್ತೊಬ್ಬ ಹಿರಿಯ ನಟ ಉಮೇಶಣ್ಣ ಮಾತನಾಡುತ್ತಾ, ಹಿರಿಯ ಕಲಾವಿದರನನ್ಉ ಗುರುತಿಸಿ ಅವಕಾಶ ನೀಡುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತದೆ. ನನ್ನದು ಈ ಚಿತ್ರದಲ್ಲಿ ಹುಡುಗಿ ತೋರಿಸುವ ಬ್ರೋಕರ್ ಪಾತ್ರ. ನಿರ್ದೇಶಕರಿಗೆ ನನ್ನ ಎಕ್ಸ್​​ಪ್ರೆಷನ್ ಮೇಲೆ ನಂಬಿಕೆ ಜಾಸ್ತಿ, ಹಾಗಾಗಿ ಈ ಪಾತ್ರ ಸಿಕ್ಕಿದೆ ಎನ್ನುತ್ತಾ ಒಂದಷ್ಟು ಅನುಭವಗಳನ್ನು ಹಂಚಿಕೊಂಡರು. ಮತ್ತೊಬ್ಬ ಹಾಸ್ಯ ನಟ ತಬಲಾ ನಾಣಿ ಮಾತನಾಡುತ್ತಾ ನಿರ್ದೇಶಕರು ಮೊದಲು ನನ್ನ ಜೊತೆ ಈ ಕಥೆಯ ಡಿಸ್ಕಶನ್ ಮಾಡಿದ್ರು, ಇದು ಪ್ರಸ್ತುತ ಕಾಲಘಟ್ಟಕ್ಕೆ ಸೂಕ್ತ ಎಂದಿದೆ. ಅದರಂತೆ ಈಗ ಚಿತ್ರೀಕರಣ ಆರಂಭಗೊಂಡಿದೆ. ನನ್ನದು ಚಿತ್ರ ನಿರ್ದೇಶಕನ ಪಾತ್ರ, ಮೊದಲು ಸಣ್ಣ ಪಾತ್ರ ಬೇಡ ಎಂದಿದೆ. ನಂತರ ಪಾತ್ರದ ತೂಕ ಇಷ್ಟವಾಯಿತು ಎಂದರು.

ಇನ್ನು “ವೆಂಕಟೇಶಾಯ ನಮಃ” ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿರುವ ಪ್ರಕೃತಿ, ಆರಾಧನಾ, ನಾಯಕಿಯ ತಾಯಿಯಾಗಿ ಚಿತ್ಕಲ ಬಿರಾದರ್, ರಾಘು ರಾಮನ ಕೊಪ್ಪ, ರೇಣುಕಾ ಸೇರಿದಂತೆ ಚಿತ್ರತಂಡದವರು ತಮ್ಮ ತಮ್ಮ ಪಾತ್ರದ ಕುರಿತು ಮಾಹಿತಿ ಹಂಚಿಕೊಂಡರು.

ಶ್ರೀ ಲಕ್ಷ್ಮಿ ಜನಾರ್ದನ ಮೂವೀಸ್ ಮೂಲಕ ನಿರ್ಮಾಣವಾಗುತ್ತಿರುವ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು 2ನೇ ಹಂತದ ಚಿತ್ರೀಕರಣವನ್ನು ಇದೇ ತಿಂಗಳು 20 ರಿಂದ ಆರಂಭ ಮಾಡಲು ನಿರ್ಧರಿಸಲಾಗಿದೆ. ಸುಮಾರು 45 ದಿನಗಳ ಕಾಲ ಚಿತ್ರೀಕರಣ ಮಾಡುವ ಪ್ಲಾನ್ ಚಿತ್ರತಂಡ ಹಾಕಿಕೊಂಡಿದೆ. “ವೆಂಕಟೇಶಾಯ ನಮಃ” ಚಿತ್ರಕ್ಕೆ ಶಿವಶಂಕರ್ ಛಾಯಾಗ್ರಾಹಣ, ಪ್ರವೀಣ್  ಶ್ರೀನಿವಾಸ್ ಮೂರ್ತಿ ಸಂಗೀತ, ಪ್ರಮೋದ್ ಮರುವಂತೆ & ಚೇತನ್ ಕುಮಾರ್ ಸಾಹಿತ್ಯ, ಜೀವನ್ ಪ್ರಕಾಶ್ ಸಂಕಲನ, ವಿನಯ್. ಜಿ. ಆಲೂರ್ ಡಿ.ಐ, ಸಂತೋಷ್. ಸಿ.ಎಂ ಸಹ ನಿರ್ದೇಶನ, ಶ್ರೀನಿವಾಸ್ ವಸ್ತ್ರಲಂಕಾರವಿದೆ.

ಇದನ್ನೂ ಓದಿ : ‘ಸೌಂದರ್ಯ’ ರಾಶಿಯಲಿ ಸೂರ್ಯನಿಗೆ ‘ಮುದ್ದು‘ ಮಾಡಿದ್ರಾ ನಿವ್ವಿ? – ಟ್ರಾನ್ಸ್​ಪರೆಂಟ್ ಡ್ರೆಸ್​ನಲ್ಲಿ ನಿವೇದಿತಾ ಗೌಡ ಫುಲ್ ಫ್ಲ್ಯಾಶ್..!

Leave a Comment

DG Ad

RELATED LATEST NEWS

Top Headlines

ಹುಬ್ಬಳ್ಳಿ : ಆಸ್ತಿಗಾಗಿ ತಂದೆ, ಮಲತಾಯಿಯನ್ನ ಕೊಚ್ಚಿ ಕೊಲೆಗೈದ ಮಗ..!

ಹುಬ್ಬಳ್ಳಿ : ಆಸ್ತಿಗಾಗಿ ಪುತ್ರನೊಬ್ಬ ತಂದೆ ಮತ್ತು ಮಲತಾಯಿಯನ್ನ ಕೊಚ್ಚಿ ಕೊಲೆಗೈದಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ನಡೆದಿದೆ. ತಂದೆ ಅಶೋಕ, ಮಲತಾಯಿ ಶಾರದಮ್ಮರನ್ನ ಪುತ್ರ

Live Cricket

Add Your Heading Text Here