ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಅಕ್ರಮವಾಗಿ ತಮ್ಮ ಕುಟುಂಬಸ್ಥರಿಗೆ ನಿವೇಶನ ಪಡೆದ ಆರೋಪ ಸಂಬಂಧ ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ಅಂತಿಮ ಆದೇಶ ಹೊರಬಿದ್ದಿದೆ. ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಅರ್ಜಿ ವಜಾಗೊಳಿಸಿ ತೀರ್ಪು ಪ್ರಕಟಿಸಿದ್ದಾರೆ.
ಹೈಕೋರ್ಟ್ ಆದೇಶದಲ್ಲಿ ಏನಿದೆ ಗೊತ್ತಾ? 197 ಪುಟಗಳ ಆರ್ಡರ್ ಮಾಡಿರುವ ಜಸ್ಟೀಸ್ ಎಂ.ನಾಗಪ್ರಸನ್ನ ಅವರ ಪೀಠ, 12 ಪ್ರಮುಖ ಅಂಶಗಳನ್ನು ಉಲ್ಲೇಖ ಮಾಡಿದೆ.
1 : ದೂರುದಾರರು ಗವರ್ನರ್ ಬಳಿ ಹೋಗಿದ್ದು ತಪ್ಪಲ್ಲ
2 : ಈ ಕೇಸ್ನಲ್ಲಿ ಸೆಕ್ಷನ್ 17 ಎ ಅಡಿ ಅನುಮತಿ ಕಡ್ಡಾಯ
3 : ಸೆಕ್ಷನ್ 17 ಎ ಅಡಿ ಸಾರ್ವಜನಿಕ ಸೇವಕನ ವಿರುದ್ಧ ಕೇಸ್ ಹಾಕಬಹುದು
4 : ಸಂಪುಟದ ನಿರ್ಣಯವನ್ನು ಗವರ್ನರ್ ಪಾಲಿಸಬೇಕಿಲ್ಲ
5 : ರಾಜ್ಯಪಾಲರು ವಿವೇಚನಾ ಅಧಿಕಾರ ಬಳಸೋ ಹಕ್ಕಿದೆ
6 : ಆದೇಶದ ಪ್ರತಿಯಲ್ಲಿ ಎಲ್ಲಾ ಕಾರಣ ವಿವರಿಸಬೇಕಿಲ್ಲ
7 : ರಾಜ್ಯಪಾಲರು ಸರಿಯಾಗಿಯೇ ನಡೆದುಕೊಂಡಿದ್ದಾರೆ
8 : ಸೆಕ್ಷನ್ 17 ಎ ಅಡಿ ತನಿಖೆ ಅಗತ್ಯವಿದ್ದರೆ ನೀಡಬಹುದು
9 : ಗವರ್ನರ್ ತರಾತುರಿ ಎನ್ನುವುದು ಆದೇಶ ಪ್ರಶ್ನಿಸಲು ಕಾರಣವಾಗಬಾರದು
10 : ರಾಜ್ಯಪಾಲರ ಆತುರದ ನಿರ್ಧಾರ ಎನ್ನುವುದನ್ನು ಒಪ್ಪಲಾಗದು
11 : ಕೊಟ್ಟಿರುವ ದಾಖಲೆ ಪ್ರಕಾರ ತನಿಖೆ ಅಗತ್ಯ ಇದೆ
12 : ಈ ಪ್ರಕರಣದಲ್ಲಿ ಅರ್ಜಿದಾರರ ಕುಟುಂಬಸ್ಥರೇ ಫಲಾನುಭವಿಗಳು
ಇದನ್ನೂ ಓದಿ : ಸಿಎಂ ಸಿದ್ದು ರಾಜೀನಾಮೆಗೆ ಬಿಜೆಪಿ ಬಿಗಿ ಪಟ್ಟು – ರಾಜ್ಯಾದ್ಯಂತ ಪ್ರತಿಭಟನೆಗೆ ಸಜ್ಜಾದ ಕಮಲ ನಾಯಕರು..!