ಬೆಂಗಳೂರು : ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹೈಕೋರ್ಟ್ನಲ್ಲಿ ಹಿನ್ನಡೆ ಆಗಿದೆ. ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಶನ್ಗೆ ನೀಡಿದ್ದ ಅನುಮತಿಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಪ್ರಕರಣದ ಬಗ್ಗೆ ತನಿಖೆ ಆಗಬೇಕು ಎಂದು ಹೈಕೋರ್ಟ್ ಹೇಳಿದೆ. ಇದೀಗ ಹೈಕೋರ್ಟ್ ತೀರ್ಪು ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿ ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.
ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿಲ್ಲ ಕೇವಲ ತನಿಖೆಗೆ ಅನುಮತಿ, ನಾನು ಯಾಕೆ ರಾಜೀನಾಮೆ ಕೊಡ್ಬೇಕು. ಕುಮಾರಸ್ವಾಮಿ ರಾಜೀನಾಮೆ ಕೊಟ್ಟಿದ್ದಾರಾ? ಬೇಲ್ ಮೇಲೆ ಅವರು ಹೊರಗೆ ಇದ್ದಾರೆ. ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು. ಪ್ರತಿಪಕ್ಷ ರಾಜೀನಾಮೆ ಒತ್ತಾಯಿಸಿ ಪ್ರತಿಭಟನೆ ಮಾಡಿದ್ರೆ ಮಾಡಲಿ, ಅವರಿಗೆ ಪ್ರತಿಭಟನೆ ಮಾಡೋ ಯಾವ ನೈತಿಕತೆಯೂ ಇಲ್ಲ. ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಬಿಜೆಪಿ ಮತ್ತು ಜೆಡಿಎಸ್ ಇಬ್ಬರು ಸೇರಿಕೊಂಡು ಸಂಚು ಮಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ನಾನು ಹಾಕಿದ್ದಂತಹ ರಿಟ್ ಪಿಟಿಷನ್ ಮೇಲೆ ಆದೇಶ ನೀಡಿದ್ದಾರೆ, 218 BNS ಮತ್ತು 19 PC ಮೇಲೆ ಅನುಮತಿ ಕೇಳಿದ್ದಾರೆ. 218 BNSS ಕಾಯ್ದೆ ಅಡಿಯಲ್ಲಿ ಪ್ರಾಸಿಕ್ಯೂಷನ್ ಅನುಮತಿ ನೀಡಿಲ್ಲ, ಅದನ್ನ ಹೈಕೋರ್ಟ್ ತಿರಸ್ಕಾರ ಮಾಡಿದೆ. 17A PC ಕಾಯ್ದೆ ಅನ್ವಯ ವಿಚಾರಣೆಗೆ ಹೈಕೋರ್ಟ್ ಅನುಮತಿ ನೀಡಿದೆ, ಇದರ ಬಗ್ಗೆ ಯಾವ ರೀತಿ ಹೋರಾಟ ಮಾಡ್ಬೇಕು ಮಾಡ್ತೀವಿ. ಕಾನೂನು ತಜ್ಞರ ಜೊತೆ ಇದರ ಬಗ್ಗೆ ಚರ್ಚಿಸಿ ನಿರ್ಧಾರ ಮಾಡ್ತೇವೆ ಎಂದಿದ್ದಾರೆ.
ಇದನ್ನೂ ಓದಿ : ಮುಡಾ ಮಹಾ ಸುಳಿಯಲ್ಲಿ ಸಿಎಂ ಸಿದ್ದು – ಹೈಕೋರ್ಟ್ ತೀರ್ಪಿನಲ್ಲಿ ಇರೋದೇನು ಗೊತ್ತಾ?