ಬೆಂಗಳೂರು : ಅವಧಿ ಮುಗಿಯೋವರೆಗೂ ಸಿದ್ದರಾಮಯ್ಯನವ್ರೇ ಸಿಎಂ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾತೇ ಇಲ್ಲ. ಸತೀಶ್ ಜಾರಕಿಹೊಳಿ ಭೇಟಿ ಹಿಂದೆ ರಾಜಕೀಯ ಇಲ್ಲ, ಕನಕಪುರ ಕ್ಷೇತ್ರದ ವಿಚಾರಕ್ಕೆ ಸತೀಶ್ ಭೇಟಿಯಾಗಿದ್ದೆ. ಪಕ್ಷದ ಮುಖಂಡರು ಸಭೆ ಮಾಡೋದ್ರಲ್ಲಿ ತಪ್ಪೇನೂ ಇಲ್ಲ ಎಂದು ಡಿ.ಕೆ.ಸುರೇಶ್ ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಭೇಟಿ ನಂತರ ಡಿ.ಕೆ.ಸುರೇಶ್ ಮಾತನಾಡಿ, ದೇಶದ ರಾಜಕೀಯ ವಿಚಾರಗಳನ್ನೂ ಚರ್ಚೆ ಮಾಡಿದ್ದೇವೆ. ನಮ್ಮ ಪಕ್ಷದವರನ್ನ ನಾವೇ ಭೇಟಿ ಮಾಡೋದ್ರಲ್ಲಿ ತಪ್ಪೇನಿದೆ, ಸಿಎಂ ರಾಜಿನಾಮೆ ಅನ್ನೋದು ವಿಜಯೇಂದ್ರ ವೈಯಕ್ತಿಕ ಅಭಿಪ್ರಾಯ. ಮುಖ್ಯಮಂತ್ರಿಗಳನ್ನು EDಯವರು ಬಂಧನ ಮಾಡಲು ಬರಲ್ಲ, ECIR ಆದಾಕ್ಷಣ ಬಂಧಿಸಬೇಕು ಅಂತಾ ಏನಾದ್ರೂ ಇದೆಯಾ ? ಎಂದು ಪ್ರಶ್ನಿಸಿದ್ದಾರೆ.
ಸತೀಶ್ ಜಾರಕಿಹೊಳಿ-ಡಿ.ಕೆ.ಸುರೇಶ್ ಭೇಟಿ : ವಿಜಯೇಂದ್ರ ಭೇಟಿ ಬೆನ್ನಲ್ಲೇ ಸತೀಶ್ ನಿವಾಸಕ್ಕೆ ಡಿ.ಕೆ.ಸುರೇಶ್ ಭೇಟಿ ನೀಡಿದ್ದಾರೆ. ಸತೀಶ್ ಜಾರಕಿಹೊಳಿಯನ್ನು ಭೇಟಿಯಾಗಿ ಸುಮಾರು ಹೊತ್ತು ಚರ್ಚೆ ನಡೆಸಿದ್ದಾರೆ. ಸತೀಶ್ ನಡೆ ಕಾಂಗ್ರೆಸ್ನಲ್ಲಿ ಸಂಚಲನ ಮೂಡಿಸುತ್ತಿದ್ದು, ಕಳೆದ 15 ದಿನಗಳಿಂದಲೂ ಸತೀಶ್ ಸರಣಿ ಮೀಟಿಂಗ್ ಮಾಡ್ತಿದ್ದರು. ಹಲವು ಹಿರಿಯ ಸಚಿವರ ಜೊತೆ ಸತೀಶ್ ಜಾರಕಿಹೊಳಿ ಸಭೆ ಮಾಡಿದ್ದರು. ಇದೀಗ ಸತೀಶ್ ಜಾರಕಿಹೊಳಿಯ ಸದಾಶಿವನಗರದ ನಿವಾಸದಲ್ಲಿ ಡಿ.ಕೆ.ಸುರೇಶ್ ಭೇಟಿ ಮಾಡಿದ್ದಾರೆ.
ಇದನ್ನೂ ಓದಿ : ಸತೀಶ್ ಜಾರಕಿಹೊಳಿಯನ್ನು ದಿಢೀರ್ ಭೇಟಿಯಾದ ವಿಜಯೇಂದ್ರ – ಆಪರೇಷನ್ ಕಮಲಕ್ಕೆ ಮತ್ತೆ ರೆಡಿಯಾಯ್ತಾ ವೇದಿಕೆ?