Download Our App

Follow us

Home » ರಾಷ್ಟ್ರೀಯ » ಸಂಭಾಲ್​ನಲ್ಲಿ ಮಸೀದಿ ಸಮೀಕ್ಷೆ ವೇಳೆ ಘರ್ಷಣೆ, ಪೊಲೀಸರ ಮೇಲೆ ಕಲ್ಲು ತೂರಾಟ.. ಪರಿಸ್ಥಿತಿ ಉದ್ವಿಗ್ನ..!

ಸಂಭಾಲ್​ನಲ್ಲಿ ಮಸೀದಿ ಸಮೀಕ್ಷೆ ವೇಳೆ ಘರ್ಷಣೆ, ಪೊಲೀಸರ ಮೇಲೆ ಕಲ್ಲು ತೂರಾಟ.. ಪರಿಸ್ಥಿತಿ ಉದ್ವಿಗ್ನ..!

ಉತ್ತರ ಪ್ರದೇಶ : ಉತ್ತರ ಪ್ರದೇಶದ ಸಂಭಾಲ್ ನಗರದಲ್ಲಿರುವ ಐತಿಹಾಸಿಕ ಶಾಹಿ ಜಾಮಾ ಮಸೀದಿಯ 2ನೇ ಹಂತದ ಸಮೀಕ್ಷೆಗೆ ನ್ಯಾಯಾಲಯದ ಆದೇಶದ ಮೇರೆಗೆ ಸಮೀಕ್ಷಾ ತಂಡ ಇಂದು ಬೆಳಗ್ಗೆ ತೆರಳಿತ್ತು. ಮಸೀದಿ ಸಮೀಕ್ಷೆ ನಡೆಯುತ್ತಿದ್ದ ವೇಳೆ ಏಕಾಏಕಿ ಹೊರಗಡೆ ರಸ್ತೆಗಳಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿ ಘೋಷಣೆಗಳ ನಡುವೆ ಕಲ್ಲು ತೂರಾಟ ಆರಂಭಿಸಿದ್ದಾರೆ.

ಸ್ಥಳದಲ್ಲಿದ್ದ ಪೊಲೀಸರು ಗುಂಪು ಚದುರಿಸಲು ಲಾಠಿ ಚಾರ್ಜ್ ಮಾಡಿ ಅಶ್ರುವಾಯು ಪ್ರಯೋಗಿಸಿದ್ದಾರೆ. ಸದ್ಯ ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಘಟನೆ ಬಳಿಕ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಸೆಕ್ಷನ್ 144 ವಿಧಿಸುವ ಮೂಲಕ ಆಡಳಿತವು ಬಿಗಿ ಭದ್ರತೆಯನ್ನು ಮಾಡಿದೆ ಎಂದು ತಿಳಿದುಬಂದಿದೆ.

ಈ ಹಿಂದೆಯೂ ನವೆಂಬರ್ 19ರಂದು ಸಮೀಕ್ಷೆ ನಡೆಸಲಾಗಿತ್ತು. ಸಮೀಕ್ಷಾ ತಂಡವು ರಾತ್ರಿ ಆಗಮಿಸಿ ಮಸೀದಿಯ ಒಳಭಾಗವನ್ನು ಸಮೀಕ್ಷೆ ನಡೆಸಿತ್ತು. ಇದಾದ ಬಳಿಕ ಹೊರ ಭಾಗದ ಸಮೀಕ್ಷೆಗೆ ನ.24, ಅಂದರೆ ಇಂದಿಗೆ ನಿಗದಿ ಪಡಿಸಲಾಗಿತ್ತು. ಅದರಂತೆ ಇಂದು ಬೆಳಗ್ಗೆ ಎರಡೂ ಕಡೆಯವರ ಒಪ್ಪಿಗೆ ಮೇರೆಗೆ ಸಮೀಕ್ಷಾ ತಂಡ ಮಸೀದಿ ತಲುಪಿತು. ನಮಾಜಿಗೆ ಯಾವುದೇ ತೊಂದರೆಯಾಗದಂತೆ 7.30ರ ಸಮಯ ಆಯ್ಕೆ ಮಾಡಿಕೊಂಡು ಸಮೀಕ್ಷೆ ಶುರು ಮಾಡಿದ್ದರು. ಈ ವೇಳೆ ಏಕಾಏಕಿ ಕೆಲವರು ಗಲಾಟೆ ಸೃಷ್ಟಿಸಿದ್ದಾರೆ.

ಸದ್ಯ ಪೊಲೀಸರು ಕೆಲ ಯುವಕರನ್ನು ಬಂಧಿಸಿದ್ದು, ಸಮೀಕ್ಷೆ ಸ್ಥಗಿತಗೊಂಡಿದೆ. ಪರಿಸ್ಥಿತಿ ಸಹಜವಾದ ನಂತರವೇ ಸಮೀಕ್ಷೆ ಆರಂಭಿಸಲಾಗುವುದು ಎಂದು ಆಡಳಿತ ಹೇಳಿದೆ. ನವೆಂಬರ್ 29ರೊಳಗೆ ಸಮೀಕ್ಷಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ.

ಇದನ್ನೂ ಓದಿ : ನಿಖಿಲ್ ಕುಮಾರಸ್ವಾಮಿ ಸೋಲಿಂದ ಮನನೊಂದ ಅಭಿಮಾನಿ – ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ..!

 

Leave a Comment

DG Ad

RELATED LATEST NEWS

Top Headlines

ಭಾರತೀಯ ಚುನಾವಣಾ ವ್ಯವಸ್ಥೆ ಶ್ಲಾಘಿಸಿದ ಎಲಾನ್ ಮಸ್ಕ್ – ಅಮೆರಿಕಾಗಿಂತ ಇಂಡಿಯಾ ಉತ್ತಮ ಎಂದಿದ್ದೇಕೆ?

ಭಾರತದ ಚುನಾವಣಾ ವ್ಯವಸ್ಥೆಯ ಬಗ್ಗೆ ಟೆಸ್ಲಾ ಸಿಇಒ ಎಲಾನ್ ಮಸ್ಕ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್​​ ಹಂಚಿಕೊಂಡಿರುವ ಎಲಾನ್ ಮಸ್ಕ್, ಭಾರತದಲ್ಲಿ ಚುನಾವಣಾ

Live Cricket

Add Your Heading Text Here