ಚಿತ್ರದುರ್ಗ : ಊಟ ಕೇಳಿದ ಮಗುವನ್ನು ತಂದೆಯೇ ಕೈಯ್ಯಿಂದ ಗುದ್ದಿ ಕೊಂದ ದಾರುಣ ಘಟನೆ ಚಿತ್ರದುರ್ಗ ಜಿಲ್ಲೆಯ ಹಳೆ ರಂಗಾಪುರ ಗ್ರಾಮದಲ್ಲಿ ನಡೆದಿದೆ. ಆರು ವರ್ಷದ ಮಂಜುನಾಥ್ನ ಕೊಂದ ಪಾಪಿ ತಂದೆಯನ್ನು ತಿಪ್ಪೇಶ ಎಂದು ಗುರುತಿಸಲಾಗಿದೆ.
ತಿಪ್ಪೇಶ ಪ್ರತಿನಿತ್ಯ ಕುಡಿದು ಬಂದು ಪತ್ನಿ ಗೌರಮ್ಮಳನ್ನು ಪೀಡಿಸುತ್ತಿದ್ದನು. ಮಗು ಅನ್ನ ಬೇಕು ಅಂತಾ ಅತ್ತಿದ್ದಕ್ಕೆ ತಿಪ್ಪೇಶ ಮಗುವಿನ ಎದೆ ಹಾಗೂ ಬೆನ್ನಿಗೆ ಗುದ್ದಿದ್ದಾನೆ. ಇನ್ನು ಮೂರ್ಛೇ ಹೋಗಿದ್ದ ಮಗುವನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಗೆ ಬರುವ ಮಾರ್ಗ ಮಧ್ಯದಲ್ಲೇ ಮಗು ಮಂಜುನಾಥ್ ಸಾವನ್ನಪ್ಪಿದೆ.
ಇನ್ನು ಆಸ್ತಿ ಹೊಡೆಯಲು ತಿಪ್ಪೇಶ ಮಗುವನ್ನು ಕೊಲೆಮಾಡಿದ ಆರೋಪ ಕೇಳಿ ಬಂದಿದೆ. ಘಟನೆಯ ಸಂಬಂಧ ಭರಮಸಾಗರ ಪೊಲೀಸ್ ಠಾಣೆಯಲ್ಲಿ ತಂದೆ ವಿರುದ್ಧ FIR ದಾಖಲಾಗಿದ್ದು, ಮಗುವನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ತಿಪ್ಪೇಶನನ್ನ ಎನ್ಕೌಂಟರ್ ಮಾಡಿ ಎಂದು ಹೆಂಡ್ತಿ ಫ್ಯಾಮಿಲಿ ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ : ಕೋಲಾರ : ನೋಡ ನೋಡ್ತಿದ್ದಂತೆ ಕುಸಿದ ಮೂರು ಅಂತಸ್ತಿನ ಕಟ್ಟಡ..!