ಬೀಜಿಂಗ್ : ಕೋವಿಡ್-19 ಮಹಾಮಾರಿಯಿಂದ ಇಡೀ ಜಗತ್ತು ಚೇತರಿಸಿಕೊಂಡ 5 ವರ್ಷಗಳ ಬಳಿಕ ಮತ್ತೆ ಹೊಸದೊಂದು ಮಹಾ ಕಂಟಕ ಎದುರಾಗಿದೆ. ಡ್ರ್ಯಾಗನ್ ರಾಷ್ಟ್ರ ಚೀನಾದಲ್ಲಿ ಮತ್ತೊಂದು ಮಹಾಮಾರಿ ಸೋಂಕು ಹಬ್ಬುತ್ತಿದೆ ಎಂಬ ವರದಿಗಳು ಬೆಚ್ಚಿ ಬೀಳಿಸಿದೆ. ಜಗತ್ತಿಗೆ ಜಗತ್ತೇ ಲಾಕ್ ಆಗಿ ಬಿಡುತ್ತಾ.. ಗಲ್ಲಿ-ಗಲ್ಲಿಗಳೂ ಸೀಲ್ ಡೌನ್ ಆಗ್ತವಾ.. ಆಕ್ಸಿಜನ್ ಅಲ್ಲೋಲ-ಕಲ್ಲೋಲ ಶುರುವಾಗುತ್ತಾ.. ಆಸ್ಪತ್ರೆಗಳಲ್ಲಿ ಬೆಡ್ಗಾಗಿ ಪರದಾಟ ಪಡ್ಬೇಕಾ.. ಸೋಂಕಿತರ ಸಾಗಿಸಲು ಆಂಬ್ಯುಲೆನ್ಸ್ಗಳೇ ಸಾಲಲ್ವಾ.. ಚಿತಾಗಾರಗಳಲ್ಲಿ ದಫನ್ ಮಾಡೋಕೆ ಜಾಗ ಸಾಲಲ್ವಾ ಎಂಬ ಆತಂಕ ಶುರುವಾಗಿದೆ.
ಹೊಸ ವರ್ಷದ ಆರಂಭದಲ್ಲೇ ಹೆಲ್ತ್ ಡೇಂಜರ್ ಸಿಗ್ನಲ್ ಸಿಕ್ಕಿದ್ದು ಚೀನಾದ ಮತ್ತೊಂದು ಕ್ರಿಮಿ ಸಾವಿನ ಬೇಟೆ ಶುರು ಮಾಡುತ್ತಾ ಎನ್ನುವ ಆತಂಕ ಕಾಡ್ತಿದೆ. ಡಿಸೆಂಬರ್ 16ರಿಂದ ‘ಹ್ಯೂಮನ್ ಮೆಟಾಪ್‌ನಿಯುಮೊ ವೈರಸ್ (ಎಚ್‌ಎಂಪಿವಿ)’ ಚೀನಾದ ವಿವಿಧ ಪ್ರಾಂತ್ಯಗಳಲ್ಲಿ ಕಾಣಿಸಿಕೊಂಡಿದ್ದು, ಜನರ ಶ್ವಾಸಕೋಶದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎನ್ನಲಾಗಿದೆ. ಈ ಸೋಂಕಿನ ಹರಡುವಿಕೆ ಚೀನಾದಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಕಟ್ಟುನಿಟ್ಟಿನ ಮುಂಜಗ್ರತಾ ಕ್ರಮಗಳ ಜಾರಿಗೆ ಸರ್ಕಾರ ಮುಂದಾಗಿದೆ. ಇನ್ಫ್ಲುಯೆನ್ಜಾ -A ಮೈಕೋಪ್ಲಾಸ್ಮಾ HMPV ಅಬ್ಬರ ಜೋರಾಗಿದ್ದು ನ್ಯೂಮೋನಿಯಾ, ಕೋವಿಡ್-19 ಹರಡಿರುವ ಆತಂಕ ಇದೆ. ಈ ಬೆನ್ನಲ್ಲೇ ವಿಶ್ವಸಂಸ್ಥೆ ಚೀನಾದಿಂದ ಸಮಗ್ರ ಮಾಹಿತಿ ಕೇಳಿದೆ.
Human Metapneumovirus (HMPV) ವೈರಸ್ ವೇಗವಾಗಿ ಹರಡುತ್ತಿದ್ದು ಮಕ್ಕಳು, ವೃದ್ಧರನ್ನೇ ಟಾರ್ಗೆಟ್ ಮಾಡ್ತಿದೆ. 14 ವರ್ಷದ ಒಳಗಿನ ಮಕ್ಕಳನ್ನು ಹೆಚ್ಚು ಕಾಡ್ತಿದ್ದು ಅನಾರೋಗ್ಯ ಸಮಸ್ಯೆ ಇರುವ ವೃದ್ಧರಿಗೂ ಡೇಂಜರ್ ಆಗಿದೆ. ಸಾರ್ವಜನಿಕ ಸ್ಥಳಗಳಲ್ಲೂ ಅಘೋಷಿತ ಟೈಟ್ ರೂಲ್ಸ್ ಫಾಲೋ ಮಾಡಲಾಗ್ತಿದ್ದು HMPV ವೈರಸ್ ಕಾಟದಿಂದ ನೆರೆಯ ದೇಶ ತತ್ತರಿಸಿದೆ. ಚೀನಾದಲ್ಲಿ 2001ರಲ್ಲೂ ಇದೇ ಮಾದರಿಯ ಉಪ ತಳಿ ಕಾಟ ನೀಡಿತ್ತು. ಇದೀಗ ಪಬ್ಲಿಕ್ ಪ್ಲೇಸ್ನಲ್ಲಿ ಮಾಸ್ಕ್ ಬಳಕೆ ಮಾಡಲು ಸೂಚನೆ ನೀಡಲಾಗಿದೆ.
ಯಾವುದೇ ಕ್ಷಣ ಸಚಿವ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿ : ಚೀನಾದಲ್ಲಿ ಹೊಸ ಮಹಾಮಾರಿ ವಕ್ಕರಿಸಿಕೊಂಡಿದ್ದು ರಾಜ್ಯದಲ್ಲಿ ಮುಂಜಾಗೃತ ಕ್ರಮವಾಗಿ ಯಾವುದೇ ಕ್ಷಣ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ ಇದೆ. ಈಗಾಗಲೇ ಆರೊಗ್ಯ ಇಲಾಖೆ ಚೀನಾದಲ್ಲಿ ಏನಾಗಿದೆ ಎಂಬುದರ ಸಮಗ್ರ ಮಾಹಿತಿ ಸಂಗ್ರಹಿಸಿದ್ದು ಮುನ್ನೆಚ್ಚರಿಕೆ ಕ್ರಮದ ಬಗ್ಗೆ ತಿಳಿಸುವ ಸಾಧ್ಯತೆ ಇದೆ.
ಇದನ್ನೂ ಓದಿ : ಡಿಜಿಟಲ್ ಒಟಿಟಿ ಪ್ಲಾಟ್ ಫಾರ್ಮ್ಗೆ Glopixs ಲಗ್ಗೆ – ಏಕಕಾಲದಲ್ಲಿ 3 ರಾಜ್ಯಗಳಲ್ಲಿ ಲೋಗೋ ಲಾಂಚ್..!