ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿ ಗಿಲಿಗಿಲಿ ಸೀಸನ್ 1 ರಿಂದ ಸೀಸನ್ 3ರವರೆಗೂ ಯಶಸ್ವಿಯಾಗಿ ಮೂಡಿ ಬಂದಿದೆ. ವೀಕ್ಷಕರನ್ನು ರಂಜಿಸುತ್ತಾ ಇದ್ದಂತ ಈ ಗಿಚ್ಚಿ ಗಿಲಿಗಿಲಿ ಸೀಸನ್ 3 ಮುಕ್ತಾಯದ ಹಂತಕ್ಕೆ ಬಂದಿದೆ. ನಕ್ಕು ನಗಿಸುವರ ಈ ಶೋ ಫಿನಾಲೆ ಹಂತವನ್ನು 6-7 ಮಂದಿ ತಲುಪಿದ್ದಾರೆ.
ಈಗಾಗಲೇ ಎಲಿಮಿನೇಟ್ ಆಗಿರುವ ಸ್ಪರ್ಧಿಗಳು ಕೂಡ ಫಿನಾಲೆ ವೇದಿಕೆಯಲ್ಲಿ ಸ್ಕಿಟ್ ಮಾಡುತ್ತಾರೆ. ಇನ್ನು ಸೀಸನ್ 1ರಿಂದ 3ರವರೆಗೂ ಜನರನ್ನು ಮನೋರಂಜಿಸುತ್ತಿರುವ ಚಿಲ್ಲರ್ ಮಂಜು ಮೊದಲ ಸಲ ವೇದಿಕೆ ಮೇಲೆ ಭಾವುಕರಾಗಿದ್ದಾರೆ.
ವೇದಿಕೆ ಮೇಲೆ ತಮ್ಮ ಮನದಾಳದ ಮಾತನ್ನು ಹಂಚಿಕೊಂಡ ಅವರು, ಮೊದಲ ಸಲ ನನ್ನ ಫ್ಯಾಮಿಲಿ ವೇದಿಕೆ ಮೇಲೆ ಬಂದಿರುವುದು. ಭೂಮಿ ಮೇಲೆ ನನ್ನ ಅಪ್ಪ ಇಷ್ಟ ಆದಂತೆ ಯಾರೂ ಇಷ್ಟ ಆಗುವುದಿಲ್ಲ. ಸಿಕ್ಕಾಪಟ್ಟೆ ಪ್ರಾಣ ಅವರು ಅಂದ್ರೆ. ಒಂದು ಹೊತ್ತು ಊಟಕ್ಕೂ ಕಷ್ಟ ಪಟ್ಟಿದ್ದೀನಿ. ಊಟ ಮಾಡುವ ಸಮಯದಲ್ಲಿ ಯಾಕೆ ಈ ಅಪ್ಪ ಈ ರೀತಿ ಆಡುತ್ತಾರೆ ಎಂತ ಸುಮಾರು ಸಲ ಅತ್ತಿದ್ದೀನಿ’ ಎಂದು ಚಿಲ್ಲರ್ ಮಂಜು ಕಣ್ಣೀರಿಟ್ಟಿದ್ದಾರೆ.
ಈ ವೇಳೆ ವೇದಿಕೆ ಮೇಲೆ ಭಾವುಕರಾದ ಮಂಜು ಸಹೋದರ ‘ನನ್ನ ಜೇಬಿನಲ್ಲಿ 50 ರೂಪಾಯಿ ಇಟ್ಟಿದ್ದೀನಿ ಹೊರಗಡೆ ಊಟ ಮಾಡಿಕೋ ಎಂದು ಹೇಳಿ ಹೊರಡುತ್ತಿದ್ದೆ. ಅವನು ಮಾತ್ರ ನೀರು ಕುಡಿದುಕೊಂಡು ಜೀವನ ಮಾಡುತ್ತಿದ್ದ. ತುಂಬಾ ತ್ಯಾಗ ಮಾಡಿದ್ದಾನೆ ನಮಗೋಸ್ಕರ’ ಎಂದು ವೇದಿಕೆ ಮೇಲೆ ಮಂಜು ಸಹೋದರ ಭಾವುಕರಾಗಿದ್ದಾರೆ.
ಇನ್ನು ಕಲಾವಿದನಾಗಬೇಕು ಎಂಬ ಮಂಜು ಆಸೆಗೆ ಪೋಷಕರು ಸಾಥ್ ಕೊಟ್ಟಿದ್ದಾರೆ. ಮಂಜು ಇಂದು ದೊಡ್ಡ ಮಟ್ಟದಲ್ಲಿ ಹೆಸರು ಮಾಡಲು ಸಾಕಷ್ಟು ತ್ಯಾಗಗಳನ್ನು ಮಾಡಿದ್ದಾರೆ. ಈ ವರ್ಷ ಚಿಲ್ಲರ್ ಬಿಗ್ ಬಾಸ್ ಮನೆಗೆ ಕಾಲಿಡಬೇಕು, ಗಿಚ್ಚಿ ಗಿಲಿಗಿಲಿ ಟ್ರೋಫಿ ಚಿಲ್ಲರ್ ಕೈ ಸೇರಬೇಕು, ಚಿಲ್ಲರ್‌ಗೆ ಸಿನಿಮಾದಲ್ಲಿ ಅವಕಾಶಗಳು ಸಿಗಬೇಕು ಎಂದು ನೆಟ್ಟಿಗರು ಪಾಸಿಟಿವ್ ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ : ‘ಧ್ರುವತಾರೆ’ ಚಿತ್ರದ ಟ್ರೈಲರ್ ರಿಲೀಸ್ – ಮೆಚ್ಚುಗೆ ವ್ಯಕ್ತಪಡಿಸಿದ ಸ್ಯಾಂಡಲ್ವುಡ್ ನಟರು..!