ಬೆಂಗಳೂರು : ಹಾಡಹಾಗಲೇ ಮನೆ ಮುಂದೆ ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗವನ್ನು ಮಹಿಳೆಯೋರ್ವಳು ಕಿಡ್ನ್ಯಾಪ್ ಮಾಡಿರುವ ಘಟನೆ ಮಲ್ಲೇಶ್ವರಂ ಪೈಪ್ ಲೈನ್ ಮಕ್ಕಳ ಮಾರಮ್ಮ ದೇವಸ್ಥಾನದ ಬಳಿ ನಿನ್ನೆ ಬೆಳಗ್ಗೆ ನಡೆದಿದೆ. ಸದ್ಯ ಮಗುವನ್ನು ಪೊಲೀಸರು ರಕ್ಷಿಸಿ ಪೋಷಕರಿಗೆ ಒಪ್ಪಿಸಿದ್ದಾರೆ.
ನಾಪತ್ತೆಯಾಗಿದ್ದ ಮಗು ವೈಯ್ಯಾಲಿಕಾವಲ್‌ನ ದೇವಯ್ಯಪಾರ್ಕ್ ಬಳಿ ಮಗು ಪತ್ತೆಯಾಗಿದೆ. ಸದ್ಯ ಪೊಲೀಸರು ಮಗುವನ್ನ ರಕ್ಷಿಸಿ ಪೋಷಕರಿಗೆ ಒಪ್ಪಿಸಿದ್ದು, ಮಗುವನ್ನ ಕರೆದೊಯ್ದಿದ್ದ ಮಹಿಳೆ ಮಾನಸಿಕ ಅಸ್ವಸ್ಥೆ ಎಂದು ಹೇಳಲಾಗ್ತಿದೆ. ಸದ್ಯ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣದ ಹಿನ್ನೆಲೆ : ದಿವ್ಯಾ ಭಾರತಿ ಹಾಗೂ ಲೋಕೇಶ್ ದಂಪತಿಯ ಎರಡೂವರೆ ವರ್ಷದ ಪುತ್ರಿ ನವ್ಯಾ ನಿನ್ನೆ ಬೆಳಗ್ಗೆ ಕಿಡ್ನ್ಯಾಪ್ ಆಗಿದ್ದಳು. ಮೊದಲ ಮಗುವನ್ನ ಶಾಲೆಗೆ ಕಳಿಸಲು ತಾಯಿ ದಿವ್ಯಾ ಭಾರತಿ ರೆಡಿ ಮಾಡುತ್ತಿದ್ದರು. ಈ ವೇಳೆ ನವ್ಯಾ ಆಟ ಆಡುತ್ತಾ ಮನೆ ಹೊರಗೆ ಹೋಗಿದ್ದಳು. ಮನೆ ಬಳಿ ಬಂದ ಅಪರಿಚಿತ ಮಹಿಳೆ ಆಟವಾಡುತ್ತಿದ್ದ ನವ್ಯಾಳನ್ನು ಮಾತನಾಡಿಸುತ್ತಲೇ ತನ್ನ ಜೊತೆ ಕರೆದೊಯ್ದಿದ್ದಳು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ವಿಷಯ ತಿಳಿಯಿಯುತ್ತಿದ್ದಂತೆ ಪೋಷಕರು ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲು ಮಾಡಿದ್ದರು. ತಕ್ಷಣವೇ ಮಗುವಿಗಾಗಿ ಪೊಲೀಸರು ತನಿಖೆ ಶುರು ಮಾಡಿದ್ದರು. ಇದೀಗ ಮಗು ವೈಯ್ಯಾಲಿಕಾವಲ್‌ನ ದೇವಯ್ಯಪಾರ್ಕ್ ಬಳಿ ಪತ್ತೆಯಾಗಿದ್ದು, ಪೋಷಕರ ಮಡಿಲು ಸೇರಿದೆ.
ಇದನ್ನೂ ಓದಿ : ಮುಡಾ ಸಭೆಯಲ್ಲಿ ಮಹತ್ವದ ನಿರ್ಧಾರ.. 50:50 ಅನುಪಾತದಲ್ಲಿ ಸೈಟ್ ಪಡೆದವರಿಗೆ ಬಿಗ್ ಶಾಕ್..!