ಗಂಡ ಕುರ್ಕುರೆ ತಂದಿಲ್ಲ, ಫ್ರೆಂಚ್ ಫ್ರೈಸ್ ತಿನ್ನಲು ಬಿಡುತ್ತಿಲ್ಲ, ಪತಿ ದಿನಾಲೂ ಸ್ನಾನ ಮಾಡೊಲ್ಲ ಹೀಗೆ ಚಿತ್ರ ವಿಚಿತ್ರ ಕಾರಣಗಳಿಗೆ ಹೆಂಡತಿ ಡಿವೋರ್ಸ್ ಕೊಟ್ಟಿದ್ದ ಸುದ್ದಿಯನ್ನು ಕೇಳಿದ್ದೆವು. ಆದರೆ ಇದೀಗ ಚಿಕನ್ ಸಾಂಬಾರ್ನಲ್ಲಿ ಉಪ್ಪು ಕಡಿಮೆ ಇದೆ ಅಂತ ಹೇಳಿದ್ದಕ್ಕೆ ಗಂಡನಿಗೆ ಕಬ್ಬಿಣದ ರಾಡ್ನಿಂದ ಹೊಡೆದು ಹೆಂಡತಿ ಕೊಲೆ ಮಾಡಿರುವ ಘಟನೆ ಬಿಹಾರದ ಚಂಪಾರಣ್ ಜಿಲ್ಲೆಯ ಚೌತರ್ವದ ಕೊಲ್ಹುವಾ ಗ್ರಾಮದಲ್ಲಿ ನಡೆದಿದೆ.
ಕೊಲ್ಹುವಾ ಗ್ರಾಮದ ಶಂಶೇರ್ ಆಲಂ ಅಲಿಯಾಸ್ ಲಾಲು (35) ಮೃತ ದುರ್ದೈವಿ. ಶಂಶೇರ್ ಆಲಂ ಪತ್ನಿ ಮನೆಯಲ್ಲಿ ಯಾವಾಗಲೂ ಮಾಡುವಂತೆ ಚಿಕನ್ ಸಾಂಬಾರ್ ಮಾಡಿದ್ದಳು ಮನೆಗೆ ಬಂದ ಗಂಡ ಚಿಕನ್ ಊಟ ಮಾಡುತ್ತ ಚಿಕನ್ಗೆ ಉಪ್ಪು ಜಾಸ್ತಿ ಆಗಿದೆ. ನೋಡಿಕೊಂಡು ಚಿಕನ್ ಮಾಡೋಕೆ ಬರಲ್ವಾ ಎಂದು ಪ್ರಶ್ನೆ ಮಾಡಿದ್ದಾನೆ ಎಂದು ಹೇಳಲಾಗಿದೆ.
ಇದ್ದರಿಂದ ಸಿಟ್ಟಿಗೆದ್ದ ಹೆಂಡತಿ ಮನೆಯಲ್ಲಿದ್ದ ರಾಡ್ ತೆಗೆದುಕೊಂಡು ಗಂಡನಿಗೆ ಮನಬಂದಂತೆ ಹೊಡೆದಿದ್ದಾಳೆ. ಹೆಂಡತಿ ಹೊಡೆಯುವಾಗ ಈಕೆ ಅಪ್ರಾಪ್ತ ಸಹೋದರಿ ಕೂಡ ಕೋಲು ಹಿಡಿದುಕೊಂಡು ಬಂದು ಮಾವನಿಗೆ ಹೊಡೆದಿದ್ದಾಳೆ. ಆದರೆ ರಾಡ್ನಿಂದ ಬಲವಾದ ಪೆಟ್ಟು ಬಿದ್ದಿದ್ದರಿಂದ ಶಂಶೇರ್ ಆಲಂ ಮೃತಪಟ್ಟಿದ್ದಾನೆ.
ಇನ್ನು ಕೂಗಾಟ, ಅರಚಾಟ ಕೇಳಿ ಪಕ್ಕದ ಮನೆಯವರು ಬಂದು ನೋಡುವಷ್ಟರಲ್ಲಿ ಗಂಡನನ್ನ ಹತ್ಯೆ ಮಾಡಿದ್ದಳು. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತನ ಹೆಂಡತಿ ಹಾಗೂ ಅಪ್ರಾಪ್ತೆಯನ್ನು ಅರೆಸ್ಟ್ ಮಾಡಿದ್ದಾರೆ.
ಇದನ್ನೂ ಓದಿ : ಆಸ್ತಿ ವಿವಾದ – ಸ್ವಂತ ತಂಗಿಯನ್ನೇ ಚಾಕುವಿನಿಂದ ಇರಿದು ಕೊಲೆಗೈದ ಪಾಪಿ ಅಣ್ಣ..!