ರಮೇಶ್ ಅರವಿಂದ್ ಪ್ರತಿಭಾನ್ವಿತ ಕಲಾವಿದ ಮಾತ್ರವಲ್ಲದೆ ನಿರ್ದೇಶಕ, ನಿರ್ಮಾಪಕ, ನಿರೂಪಕ, ವ್ಯಕ್ತಿತ್ವ ವಿಕಸನ ಉಪನ್ಯಾಸಕ ಹೀಗೆ ಹೇಳುತ್ತಾ ಹೋದರೆ ಅವರೊಬ್ಬ ಬಹುಮುಖ ಪ್ರತಿಭೆ. ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಸಜ್ಜನ ನಟ ಎನಿಸಿಕೊಂಡಿರುವ ಮಿಸ್ಟರ್ ಫರ್ಪೆಕ್ಟ್ ರಮೇಶ್ ಅರವಿಂದ್ ಅವರು ಇಂದು ಜನುಮದಿನದ ಸಂಭ್ರಮದಲ್ಲಿದ್ದಾರೆ.
ರಮೇಶ್ ಅರವಿಂದ್ ಅಂದ ತಕ್ಷಣ ಎಲ್ಲರಿಗೂ ನೆನಪಾಗುವುದು ಅವರ ಭಾವಪೂರ್ಣ ನಟನೆ. ತ್ಯಾಗಮಯಿ ಪಾತ್ರಗಳಿಂದಲೇ ಜನಪ್ರಿಯರಾದ ಅವರು ಇಂದಿಗೂ ಕೂಡ ಬೇಡಿಕೆಯ ನಟ. ಇದೀಗ ರಮೇಶ್ ಅವರು ಹುಟ್ಟುಹಬ್ಬದ ಸ್ಪೆಷಲ್ ಆಗಿ ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ.
ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಮೇಶ್ ಅರವಿಂದ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಶೂಟ್ ಶೇರ್ ಮಾಡ್ಕೊಂಡು, ಅದರ ಜೊತೆಗೆ “Before I enter into another year, thought I must freeze moments from last day of this decade” ಎಂಬುದಾಗಿ ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ರೆಟ್ರೋ ಲುಕ್ನಲ್ಲಿ ಕ್ಯಾಮೆರಾಗೆ ತರೇಹವಾರಿ ಪೋಸ್ ಕೊಟ್ಟಿದ್ದಾರೆ. ಖ್ಯಾತ ಕಾಸ್ಟ್ಯೂಮ್ ಡಿಸೈನರ್ ಭರತ್ ರಾಮದಾಸ್ ಬಟ್ಟೆಯಲ್ಲಿ ರಮೇಶ್ ಅರವಿಂದ್ ಅವರು ಚಿರಯುವಕನಂತೆ ಕಂಗೊಳಿಸಿದ್ದಾರೆ.
ಯಾರು ಈ ಭರತ್? ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಗ್ ಬಾಸ್ನಲ್ಲಿ ತೊಡುವ ಸ್ಟೈಲೀಶ್ ಕಾಸ್ಟ್ಯೂಮ್ಗಳನ್ನು ನೀವೆಲ್ಲಾ ನೋಡೇ ಇರ್ತಿರಾ. ವೀಕೆಂಡ್ ನಲ್ಲಿ ಸಖತ್ ಡಿಫರೆಂಟ್ ಕಾಸ್ಟ್ಯೂಮ್ ನಲ್ಲಿ ಕಿಚ್ಚ ಕಾಣಿಸಿಕೊಳ್ತಿದ್ದರು. ಕಿಚ್ಚನ ಆ ಸ್ಟೈಲೀಶ್ ಅವತಾರದ ಹಿಂದಿನ ರೂವಾರಿಯೇ ಈ ಭರತ್. ಭರತ್ ಕಿಚ್ಚನಿಗೆ ಮಾತ್ರವಲ್ಲ ಸಾಕಷ್ಟು ಸ್ಯಾಂಡಲ್ವುಡ್ ಸೆಲೆಬ್ರಿಟಿಗಳ ಕಾಸ್ಟ್ಯೂಮ್ ಡಿಸೈನರ್ ಇವರೇನೆ. ಇದೀಗ ಭರತ್ ರಾಮದಾಸ್ ಕಾಸ್ಟ್ಯೂಮ್ ಡಿಸೈನ್ನಲ್ಲಿ ರಮೇಶ್ ಅರವಿಂದ್ ಕೂಡ ಮಿಂಚಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ರಮೇಶ್ ಅರವಿಂದ್ ಹಾಕಿರೋ ಫೋಟೊಗಳನ್ನು ನೋಡಿ ಹೆಣ್ಣು ಮಕ್ಕಳು ಸಹ ಫಿದಾ ಆಗಿದ್ದು, ನಿಮಗೆ ವಯಸ್ಸು ಆಗಲ್ವಾ ಸರ್? ನಿಜವಾಗಲೂ ಆ ದೇವರ ಆಶೀರ್ವಾದ ನಿಮಗೆ ಸದಾ ಹೀಗೆ ಇರಲಿ. ನಿಮ್ಮ ವಯಸ್ಸು ಯಾಕೆ ಹಿಂದೆ ಓಡುತ್ತಿದೆ, ಎವರ್ ಗ್ರೀನ್ ಹೀರೋ.. ಹುಡ್ಗಿರಿಗೆ ಅಷ್ಟೇ ಅಲ್ಲ ಹುಡ್ಗರಿಗೂ ಹೊಟ್ಟೆ ಉರಿ ಇವರಿಗೆ ವಯಸ್ಸು ಆಗ್ತಾನೆ ಇಲ್ಲಾ ಅಂತ ಸೂಪರ್ ಸರ್, ಆ ಕಾಲ ನಮ್ಮ ಕಾಲ ಮುಂದಿನ ಕಾಲಕ್ಕೂ ಚಿರಯುವಕ ಎಂದು ಹಾಡಿ ಹೊಗಳಿದ್ದಾರೆ.
ಇನ್ನೂ ಕೆಲವರು ಕಾಮೆಂಟ್ ಮಾಡಿ ಏನ್ ಸರ್ 27 ವರ್ಷದ ಹುಡುಗನಂತೆ ಕಾಣುತ್ತೀರಾ. ಇಷ್ಟೊಂದು ಕ್ಯೂಟಾಗಿದಿರಲ್ಲ. ಸ್ಯಾಂಡಲ್ ವುಡ್ನ ಚಿರಯುವಕ, ನೀವು ರೀಲ್ ನಲ್ಲಿ ಮಾತ್ರವಲ್ಲ, ರಿಯಲ್ ಆಗಿ ಕೂಡ ಹೀರೋ. ಪಂಚಮ ವೇದದಲ್ಲೂ ನೀವು ಹೇಗೆ ಕಾಣಿಸ್ತಿದ್ರೋ, ಇವತ್ತೂ ಕೂಡ ಹಾಗೇ ಕಾಣಿಸ್ತಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ : ರೇಣುಕಾಸ್ವಾಮಿ ಭಯಾನಕ ಮರ್ಡರ್ ಬಳಿಕ ದರ್ಶನ್ ಗ್ಯಾಂಗ್ನಿಂದ ಮಾಸ್ಟರ್ ಪ್ಲಾನ್ – ಅಸಲಿ ಸತ್ಯ ಬಯಲು..!