Download Our App

Follow us

Home » ಸಿನಿಮಾ » ಚಂದನ್ ಶೆಟ್ಟಿ-ನಿವೇದಿತಾ ದಾಂಪತ್ಯ ಜೀವನದಲ್ಲಿ ಬಿರುಕು : ಡಿವೋರ್ಸ್‌ಗೆ ಅರ್ಜಿ ಹಾಕಿದ ಸ್ಟಾರ್ ದಂಪತಿ..!

ಚಂದನ್ ಶೆಟ್ಟಿ-ನಿವೇದಿತಾ ದಾಂಪತ್ಯ ಜೀವನದಲ್ಲಿ ಬಿರುಕು : ಡಿವೋರ್ಸ್‌ಗೆ ಅರ್ಜಿ ಹಾಕಿದ ಸ್ಟಾರ್ ದಂಪತಿ..!

ಬಿಗ್​ಬಾಸ್​ನಲ್ಲಿ ಲವ್ ಮಾಡಿ ಮದ್ವೆಯಾಗಿದ್ದ ರ್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಪರಸ್ಪರ ಒಪ್ಪಿಗೆ ಮೇರೆಗೆ ಸ್ಟಾರ್ ದಂಪತಿ ಡಿವೋರ್ಸ್​ಗೆ ಕೋರ್ಟ್​ ಮೆಟ್ಟಿಲೇರಿದ್ದಾರೆ. 2020ರಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಇದೀಗ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಬಿಗ್​ಬಾಸ್ ಶೋನಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಸ್ಪರ್ಧಿಸಿದ್ದರು. ಅಲ್ಲಿಂದಲೇ ಇಬ್ಬರ ಮಧ್ಯೆ ಆತ್ಮೀಯತೆ ಬೆಳೆಯಿತು. ನಂತರ ಮೈಸೂರು ದಸರಾ ಈವೆಂಟ್‌ನಲ್ಲೇ ಬಹಿರಂಗವಾಗಿ ನಿವೇದಿತಾ ಗೌಡಗೆ ಚಂದನ್ ಶೆಟ್ಟಿ ಲವ್ ಪ್ರಪೋಸ್ ಮಾಡಿ ಕಾಂಟ್ರೋವರ್ಸಿ ಮಾಡಿಕೊಂಡಿದ್ದರು. ಆದರೆ ಇದಾದ ಬಳಿಕ ಈ ಇಬ್ಬರು ಬಹಳ ಅದ್ಧೂರಿಯಾಗಿ ಗುರು ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಸಾಮಾಜಿಕ ತಾಣದಲ್ಲಿ ಆ್ಯಕ್ಟಿವ್ ಆಗಿದ್ದ ನಿವೇದಿತಾ ಗೌಡ ಬಿಗ್‌ಬಾಸ್‌ನಲ್ಲಿ ಭಾಗವಹಿಸುವ ಮೂಲಕ ಸೆಲೆಬ್ರಿಟಿಯಾಗಿ ಬಿಟ್ಟರು. ಬಿಗ್‌ಬಾಸ್‌ನಲ್ಲಿ ಅವರು ಅತೀ ಹೆಚ್ಚು ಗಮನ ಸೆಳೆದದ್ದು ಅವರ ಫ್ಯಾಷನ್‌ ಸೆನ್ಸ್‌ ಮೂಲಕ. ಗೌನ್ ಡ್ರೆಸ್‌ಗಳಲ್ಲಿ ಗೊಂಬೆ ರೀತಿ ಕಾಣುತ್ತಿದ್ದ ನಿವೇದಿತಾ ಗೌಡ ಗೊಂಬೆಯೆಂದೇ ಫೇಮಸ್‌ ಆಗಿದ್ದರು. ಇದೀಗ 4ವರ್ಷದ ದಾಂಪತ್ಯ ಜೀವನಕ್ಕೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಗುಡ್​ಬೈ ಹೇಳಿದ್ದಾರೆ.

ಇದನ್ನೂ ಓದಿ : ಜಾಹೀರಾತು ವಿಚಾರದಲ್ಲಿ ರಾಹುಲ್‌ ಗಾಂಧಿ ಪಾತ್ರ ಇಲ್ಲ, ಅವರಿಗೆ ಅನಾವಶ್ಯಕವಾಗಿ ತೊಂದರೆ ಕೊಡ್ತಿದ್ದಾರೆ : ಡಿಕೆಶಿ..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here