ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ಬಾಸ್ ಸೀಸನ್ 11’ 7ನೇ ವಾರಕ್ಕೆ ಕಾಲಿಟ್ಟಿದೆ. ಇದೇ ಹೊತ್ತಲ್ಲಿ ಬಿಗ್ಬಾಸ್ ಮನೆ ಮಂದಿಗೆ ಮಣ್ಣಿನ ಮಕ್ಕಳು ಎಂಬ ಟಾಸ್ಕ್ವೊಂದನ್ನು ಕೊಟ್ಟಿದ್ದರು. ಇದೇ ಟಾಸ್ಕ್ ಆಡುವಾಗ ಚೈತ್ರಾ ಕುಂದಾಪುರ ಅವರು ತಮ್ಮ ಕೈಯಲ್ಲಿದ್ದ ಚಿನ್ನದ ಉಂಗುರವನ್ನು ಕಳೆದುಕೊಂಡಿದ್ದರು.
ಒಂದು ಸುತ್ತಿನ ಟಾಸ್ಕ್ ಮುಗಿದ ಬಳಿಕ ಆಟದಿಂದ ಹೊರ ಬಂದ ಕೂಡಲೇ ಚೈತ್ರಾ ತಮ್ಮ ಕೈನಲ್ಲಿದ್ದ ಉಂಗುರವನ್ನು ಗಮನಿಸಿದ್ದಾರೆ. ಕೈಯಲ್ಲಿ ಉಂಗುರ ಇಲ್ಲದೇ ಇದ್ದ ಕಾರಣ ಹುಡುಕಾಡಲು ಶುರು ಮಾಡಿದ್ದಾರೆ. ಆಗ ಏಕಾಏಕಿ ಚೈತ್ರಾ ಕುಂದಾಪುರ ಅಳಲು ಶುರು ಮಾಡಿ ಆತಂಕಕ್ಕೆ ಒಳಗಾಗಿದ್ದಾರೆ. ಆ ಕೂಡಲೇ ಮನೆಯ ಸ್ಪರ್ಧಿಗಳು ಆ ಉಂಗುರಕ್ಕಾಗಿ ಹುಡುಕಾಟ ನಡೆಸಿದ್ದಾರೆ.
ಆದರೆ ಎಷ್ಟೇ ಹುಡುಕಿದರೂ ಉಂಗುರ ಸಿಗದೇ ಇದ್ದಾಗ ಚೈತ್ರಾ ಅವರು ಬಿಗ್ಬಾಸ್ ಬಳಿ ಹುಡುಕಿಕೊಡಿ ಎಂದು ಬೇಡಿಕೊಂಡಿದ್ದಾರೆ. ದೈವ ಕೊರಗಜ್ಜನಿಗೆ ಕೈ ಮುಗಿದಿದ್ದಾರೆ. ಬಿಗ್ಬಾಸ್ ನನ್ನ ಉಂಗುರ ಕಳೆದು ಹೋಗಿದೆ. ಅದು ನನಗೆ ತುಂಬಾ ಮುಖ್ಯವಾದ ಉಂಗುರ. ದಯಮಾಡಿ ನನಗೆ ಸಹಾಯ ಮಾಡಿ ಪ್ಲೀಸ್ ಅಂತ ಕೇಳಿಕೊಂಡಿದ್ದಾರೆ. ಇದಾದ ಕೆಲವು ಗಂಟೆಗಳ ಬಳಿಕ ಬಿಗ್ಬಾಸ್ ಚೈತ್ರಾ ಅವರ ಉಂಗುರವನ್ನು ಹಿಂತಿರುಗಿಸಿದ್ದಾರೆ ಕೊಟ್ಟಿದ್ದಾರೆ. ಅದಕ್ಕೆ ಚೈತ್ರಾ ಕುಂದಾಪುರ ಅವರು ಬಿಗ್ಬಾಸ್ಗೆ ಧನ್ಯವಾದ ತಿಳಿಸಿದ್ದಾರೆ.
ಆ ಬಳಿಕ ಉಂಗುರ ಸಿಕ್ಕ ಖುಷಿಯಲ್ಲಿ ಚೈತ್ರಾ ಕುಂದಾಪುರ ಅವರು ಕುಣಿದಾಡಿದ್ದಾರೆ. ಅಲ್ಲದೇ, ತುಳುನಾಡಿನ ಕಾರ್ಣಿಕ ಶಕ್ತಿ ಕೊರಗಜ್ಜನಿಗೆ ನೆನೆದಿದ್ದಾರೆ. ತುಳುನಾಡಿನಲ್ಲಿ ಕೊರಗಜ್ಜ ದೈವವನ್ನು ನಂಬುವ ಅಪಾರ ಜನ ಇದ್ದಾರೆ. ಕಷ್ಟದ ಕಾಲದಲ್ಲಿ ಕೊರಗಜ್ಜ ಕೈ ಬಿಡುವುದಿಲ್ಲ ಎಂಬ ನಂಬಿಕೆ ಎಲ್ಲರದ್ದು. ಇದೀಗ ಬಿಗ್ ಬಾಸ್ ಮನೆಯಲ್ಲಿ ಕೂಡ ಇದು ಸಾಬೀತಾಗಿದೆ ಎಂದು ನೆಟ್ಟಿಗರು ಮಾತನಾಡಿಕೊಳುತ್ತಿದ್ದಾರೆ.
ಇದನ್ನೂ ಓದಿ : ಟಿ20 : ಸೆಂಚೂರಿಯನ್ನಲ್ಲಿ ತಿಲಕ್ ವರ್ಮಾ ದಾಖಲೆಯ ಶತಕ.. ಹರಿಣಗಳ ವಿರುದ್ಧ ಭಾರತಕ್ಕೆ ರೋಚಕ ಜಯ..!