ಬಿಗ್ಬಾಸ್ ಕನ್ನಡ ಸೀಸನ್ 11ರ ಕೆಲ ಸ್ಪರ್ಧಿಗಳ ಘೋಷಣೆ ನಿನ್ನೆ ‘ರಾಜ ರಾಣಿ’ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಆಗಿದೆ. ಬಿಗ್ಬಾಸ್ ಕನ್ನಡ 11 ಭಾನುವಾರ ಸಂಜೆ ಪ್ರಾರಂಭವಾಗಲಿದೆ. ಆದರೆ ಶನಿವಾರವೇ 4 ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡಲಾಗಿದೆ.
ಮೊದಲನೇಯ ಸ್ಪರ್ಧಿ ನಟಿ ಗೌತಮಿ ಜಾಧವ್ ಆಗಿದ್ದರೆ, ಎರಡನೇ ಸ್ಪರ್ಧಿ ಲಾಯರ್ ಜಗದೀಶ್ ಇದೀಗ ಮೂರನೇ ಸ್ಪರ್ಧಿಯ ಘೋಷಣೆ ಆಗಿದೆ. ಹಿಂದೂಪರ ಸಂಘಟನೆಗಳಲ್ಲಿ ಭಾಷಣಕಾರಳಾಗಿ ಗುರುತಿಸಿಕೊಂಡಿದ್ದ ಚೈತ್ರಾ ಕುಂದಾಪುರ ಅವರನ್ನು ಮೂರನೇ ಸ್ಪರ್ಧಿಯಾಗಿ ಬಿಗ್ಬಾಸ್ ಸ್ಪರ್ಧಿಯಾಗಿ ಮನೆಗೆ ಎಂಟ್ರಿ ಕೊಡಲಿದ್ದಾರೆ.
ಚೈತ್ರಾ ಕುಂದಾಪುರ ಹಿಂದೂಪರ ಸಂಘಟನೆ, ಹೋರಾಟಗಳಿಂದ ಗುರುತು ಪಡೆದುಕೊಂಡಿದ್ದಾರೆ. ಹಿಂದೂಪರ ಭಾಷಣಗಳು, ಕೆಲವು ಸಂದರ್ಭದಲ್ಲಿ ದ್ವೇಷ ಭಾಷಣಗಳನ್ನು ಮಾಡಿದ ಆರೋಪವೂ ಚೈತ್ರಾ ಮೇಲಿದೆ. ಇನ್ನು ಬಿಜೆಪಿಯ ಕೆಲ ಶಾಸಕರು, ಸಂಸದರಿಂದ ಭಾರಿ ಮೊತ್ತದ ಹಣ ವಂಚನೆ ಮಾಡಿದ ಆರೋಪದಲ್ಲಿ ಜೈಲು ಪಾಲಾಗಿದ್ದರು.
ಟಿಕೆಟ್ ಕೊಡಿಸುವ ಆಮೀಷಗಳನ್ನು ಒಡ್ಡಿ ಕೆಲವು ಬಿಜೆಪಿ ಮುಖಂಡರಿಂದ ಭಾರಿ ಮೊತ್ತದ ಹಣವನ್ನು ಚೈತ್ರಾ ಕುಂದಾಪುರ ಹಾಗೂ ಅವರ ಸಂಗಡಿಗರು ತೆಗೆದುಕೊಂಡಿದ್ದಾರೆಂದು ಆರೋಪ ಮಾಡಲಾಯ್ತು, ಪ್ರಕರಣ ದಾಖಲಾಗಿ ಚೈತ್ರಾ ಕುಂದಾಪುರ ಹಾಗೂ ಇನ್ನಿತರರು ಜೈಲು ಪಾಲಾಗಿದ್ದರು. ಪ್ರಸ್ತುತ ಚೈತ್ರಾ ಕುಂದಾಪುರ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ. ಚೈತ್ರಾ ಕುಂದಾಪುರ ಜೈಲಿನಿಂದ ಹೊರಬಂದ ಬಳಿಕ ಯಾವುದೇ ಹೋರಾಟಗಳಲ್ಲಿ ಗುರುತಿಸಿಕೊಂಡಿಲ್ಲ. ಇದೀಗ ಏಕಾಏಕಿ ಬಿಗ್ಬಾಸ್ ಮನೆಗೆ ಹೋಗುತ್ತಿದ್ದಾರೆ.
ಇದನ್ನೂ ಓದಿ : ಬಿಗ್ ಬಾಸ್ ಮನೆಗೆ ನಾಲ್ಕನೇ ಸ್ಪರ್ಧಿಯಾಗಿ ಗೋಲ್ಡ್ ಸುರೇಶ್ ಎಂಟ್ರಿ.. ಯಾರಿವರು ಗೊತ್ತಾ?