Download Our App

Follow us

Home » ಸಿನಿಮಾ » ಕಾಲಿವುಡ್‌ಗೆ ಕಾಲಿಟ್ಟ ಚೈತ್ರಾ ಆಚಾರ್ – ಶಶಿಕುಮಾರ್‌ಗೆ ನಾಯಾಕಿಯಾದ ನಟಿ..!

ಕಾಲಿವುಡ್‌ಗೆ ಕಾಲಿಟ್ಟ ಚೈತ್ರಾ ಆಚಾರ್ – ಶಶಿಕುಮಾರ್‌ಗೆ ನಾಯಾಕಿಯಾದ ನಟಿ..!

ಚೈತ್ರಾ ಆಚಾರ್ ಕನ್ನಡ ಸಿನಿಮಾ ಇಂಡಸ್ಟ್ರಿಯ ಭರವಸೆಯ ನಟಿಯಾಗಿ ಬೆಳೆಯುತ್ತಿದ್ದಾರೆ. ಗಿಲ್ಕಿ, ಟೋಬಿ ಹಾಗೂ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಚಿತ್ರದಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದಿರುವ ಬೋಲ್ಡ್​​​ ಬೆಡಗಿ ಇದೀಗ ತಮಿಳಿನತ್ತ ಮುಖ ಮಾಡಿದ್ದಾರೆ.

ಹೌದು, ಕನ್ನಡದ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಟೋಬಿ ಬ್ಯೂಟಿಗೆ, ತಮಿಳಿನಲ್ಲಿ ಬಂಪರ್ ಅವಕಾಶ ಸಿಕ್ಕಿದೆ. ಚೈತ್ರಾ ಆಚಾರ್ ಅಭಿನಯದ ಚಿತ್ರದಲ್ಲಿ ತಮಿಳಿನ ಹೆಸರಾಂತ ನಟ ಶಶಿಕುಮಾರ್ ಹೀರೋ ಆಗಿದ್ದಾರೆ. ಈಗಾಗಲೇ ಶಶಿಕುಮಾರ್ 135 ಚಿತ್ರಗಳಲ್ಲಿ ನಟಿಸಿದ್ದಾರೆ.

ಒಂದು ಹಳ್ಳಿ ಸೊಗಡಿನ ಫ್ಯಾಮಿಲಿ ಡ್ರಾಮದಲ್ಲಿ ಚೈತ್ರಾ ಆಚಾರ್ ಈ ನಾಯಕನಿಗೆ ಜೋಡಿ ಆಗಿದ್ದಾರೆ. ಶಶಿಕುಮಾರ್ ಮತ್ತು ಚೈತ್ರಾ ನಟನೆಯ ಸಿನಿಮಾಗೆ ರಾಜು ಮುರುಗನ್ ನಿರ್ದೇಶನ ಮಾಡುತ್ತಿದ್ದಾರೆ. ಶಿವಕುಮಾರ್ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡುತ್ತಿದ್ದಾರೆ. ಸದ್ಯ ಸಿನಿಮಾದ ಶೂಟಿಂಗ್ ತಮಿಳುನಾಡಿನ ಕೋವಿಲ್ಪಟ್ಟಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ.

ಚೈತ್ರಾ ಆಚಾರ್ ಕನ್ನಡದಲ್ಲಿ ಹಲವು ಸಿನಿಮಾ ಮಾಡಿದ್ದಾರೆ. ಇತ್ತೀಚಿನ ಸಿನಿಮಾ ಅಂದ್ರೆ, ಅದು ಹ್ಯಾಪಿ ಬರ್ತ್ ಡೇ ಟು ಮಿ ಅನ್ನೋದೇ ಆಗಿದೆ. ಆದರೆ, ಈ ಸಿನಿಮಾ ನೇರವಾಗಿ ಓಟಿಟಿಗೆ ರಿಲೀಸ್ ಆಗಿದೆ. ಸದ್ಯ ರಾಜ್ ಬಿ ಶೆಟ್ಟಿ ಜೊತೆ ‘ರೂಪಾಂತರ’ ಸಿನಿಮಾದಲ್ಲಿ ಚೈತ್ರಾ ನಟಿಸಿದ್ದಾರೆ. ಈ ಚಿತ್ರದ ಹಾಡು, ಪೋಸ್ಟರ್ ಸಿನಿಮಾ ರಿಲೀಸ್‌ಗೂ ಮುನ್ನು ಸದ್ದು ಮಾಡುತ್ತಿದೆ.

ಇದನ್ನೂ ಓದಿ : ಡೆಂಘೀ ಅಬ್ಬರದ ಮಧ್ಯೆ ಹಾವೇರಿಯಲ್ಲಿ ಇಲಿ ಜ್ವರ ಪತ್ತೆ – 12 ವರ್ಷದ ಬಾಲಕನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ..!

 

 

 

 

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here