ಬೆಂಗಳೂರು : ಬೆಂಗಳೂರಿನ ಸಂಜಯ್ನಗರದ ಮನೆಯೊಂದರಲ್ಲಿ ಕೆಎಎಸ್ ಅಧಿಕಾರಿಯ ಪತ್ನಿ ಚೈತ್ರಾಗೌಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಇದೀಗ ಈ ಪ್ರಕಣಕ್ಕೆ ಸಂಬಂಧಿಸಿದಂತೆ ಚೈತ್ರಾಗೌಡ ಮನೆಯಲ್ಲಿ ಡೆತ್ನೋಟ್ ಪತ್ತೆಯಾಗಿದೆ.
ಸಂಜಯನಗರ ನಿವಾಸದಲ್ಲಿ ಮಾರ್ಚ್ 11ರಂದು ಬರೆದಿದ್ದ ಡೆತ್ನೋಟ್ ಪತ್ತೆಯಾಗಿದ್ದು, ಒಂದು ಪುಟದ ಡೆತ್ನೋಟ್ನಲ್ಲಿ ನನ್ನ ಸಾವಿಗೆ ಯಾರು ಕಾರಣರಲ್ಲ. ತನ್ನ ಗಂಡ ತುಂಬಾ ಒಳ್ಳೆಯವರು. ನೀವು ಜೀವನವನ್ನು ಎಂಜಾಯ್ ಮಾಡಿ. ಮಗಳನ್ನು ಚೆನ್ನಾಗಿ ನೋಡಿಕೊಳ್ಳಿ.
ತಾನು ಡಿಪ್ರೆಷನ್ನಿಂದ ಬಳಲುತ್ತಿದ್ದೇನೆ. ಡಿಪ್ರೆಷನ್ನಿಂದ ಹೊರ ಬರಲು ಸಾಕಷ್ಟು ಪ್ರಯತ್ನ ಪಟ್ಟೆ ಆಗ್ತಿಲ್ಲ. ನಾನು ತನ್ನ ಜೀವನವನ್ಮು ಕೊನೆಗೊಳಿಸುತ್ತಿದ್ದೇನೆ. ಮಗುವನ್ನು ಚನ್ನಾಗಿ ನೋಡಿಕೊಂಡು ಲೈಫ್ ಎಂಜಾಯ್ ಮಾಡಿ. ನಾನು ಸೂಸೈಡ್ ಮಾಡಿಕೊಳ್ಳುವುದು ತಪ್ಪು ಅಂತ ಗೊತ್ತಿದೆ. ಆದ್ರೂ ಸಹ ಸೂಸೈಡ್ ಮಾಡಿಕೊಂಡು ಜೀವನ ಎಂಡ್ ಮಾಡಿಕೊಳ್ಳುತ್ತಿದ್ದೇನೆ ಎಂದು ಚೈತ್ರಾಗೌಡ ಒಂದು ಪುಟದ ಡೆತ್ನೋಟ್ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ : ಮಾಜಿ ರೌಡಿಶೀಟರ್ ಕಾರ್ತಿಕೇಯನ್ ಹ*ತ್ಯೆ ಪ್ರಕರಣ – ಪ್ರಮುಖ ಆರೋಪಿ ಧರ್ಮ ಸೇರಿ 9 ಮಂದಿ ಅರೆಸ್ಟ್..!