ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11, 108ನೇ ದಿನಕ್ಕೆ ಕಾಲಿಟ್ಟಿದೆ. ಬಿಗ್ಬಾಸ್ ಸೀಸನ್ 11 ಮುಕ್ತಾಯಗೊಳ್ಳುವುದಕ್ಕೆ ಇನ್ನೂ 2 ವಾರ ಬಾಕಿ ಉಳಿದಿದೆ. ಸದ್ಯ ಬಿಗ್ಬಾಸ್ ಮನೆಯಲ್ಲಿ ಒಟ್ಟು 8 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಕಳೆದ ವಾರ ಅಚ್ಚರಿ ಎಂಬಂತೆ ಬಿಗ್ ಬಾಸ್ ಮನೆಯಿಂದ ಚೈತ್ರಾ ಕುಂದಾಪುರ ಹೊರ ಬಂದಿದ್ದಾರೆ.
ಇದೀಗ ಬಿಟಿವಿ ಜೊತೆ ಮಾತನಾಡಿದ ಚೈತ್ರಾ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಹಾಗೆಯೇ ಯಾರು ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂಬುದನ್ನು ಹೇಳಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 11ರ, ಟಾಪ್ 5 ಫೈನಲಿಸ್ಟ್ ಜಾಗದಲ್ಲಿ ತ್ರಿವಿಕ್ರಂ, ಹನುಮಂತ, ರಜತ್, ಭವ್ಯಾ ಗೌಡ ಹಾಗೂ ಉಗ್ರಂ ಮಂಜು ಇರ್ತಾರೆ. ರಜತ್ 50ದಿನ ಆದ್ಮೇಲೆ ಬಂದ್ರೂ ಅವರು ಟಾಪ್ 5ಗೆ ಬರಬಹುದು, ಬರುವಂತ ಸಾಮಥ್ರ್ಯ ಅವರಲ್ಲಿದೆ ಎಂದಿದ್ದಾರೆ.
ಇನ್ನು ತ್ರಿವಿಕ್ರಂ ಅವರು ಗೆಲ್ತಾರೆ, ಗೆಲ್ಬೇಕು ಕೂಡ. ಹನುಮಂತು ರನ್ನರ್ ಅಪ್ ಆಗ್ತಾರೆ. ಅವರಿಬ್ಬರಲ್ಲಿ ಇರುವ ಟಕ್ ಅಫ್ ವಾರ್ ಅಷ್ಟೇ ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ.
ಇದನ್ನೂ ಓದಿ : ಜ್ಯೋತಿ ರೂಪದಲ್ಲಿ ಭಕ್ತರಿಗೆ ದರ್ಶನ ಕೊಟ್ಟ ಅಯ್ಯಪ್ಪ.. ಲಕ್ಷಾಂತರ ಭಕ್ತರಿಂದ ಶರಣು ಘೋಷ..!