Download Our App

Follow us

Home » ಸಿನಿಮಾ » ಕಿರುತೆರೆಯಲ್ಲಿ ಶುರುವಾಗ್ತಿದೆ ಸೆಲೆಬ್ರಿಟಿಗಳ ಬಹುದೊಡ್ಡ ಸಮರ ‘ಸುವರ್ಣ ಸೆಲೆಬ್ರಿಟಿ ಲೀಗ್’..!

ಕಿರುತೆರೆಯಲ್ಲಿ ಶುರುವಾಗ್ತಿದೆ ಸೆಲೆಬ್ರಿಟಿಗಳ ಬಹುದೊಡ್ಡ ಸಮರ ‘ಸುವರ್ಣ ಸೆಲೆಬ್ರಿಟಿ ಲೀಗ್’..!

ಕನ್ನಡ ಕಿರುತೆರೆ ವೀಕ್ಷಕರ ಮನ ಮಿಡಿತವನ್ನು ಅರ್ಥೈಸಿಕೊಂಡು ಮನರಂಜನೆಯಲ್ಲಿ ಹೊಸ ಮುನ್ನುಡಿ ಬರೆದ ಸ್ಟಾರ್ ಸುವರ್ಣ ವಾಹಿನಿಯು ಹೊಸತನದ ಸಂಚಲನವನ್ನು ಸೃಷ್ಟಿಸಲು ಭರ್ಜರಿಯಾಗಿ ಸಜ್ಜಾಗಿದೆ. ವೀಕೆಂಡ್​​ನಲ್ಲಿ ಪ್ರೇಕ್ಷಕರಿಗೆ ಮತ್ತಷ್ಟು ಮನರಂಜನೆಯ ರಸದೌತಣ ನೀಡಲು ಸ್ಟಾರ್ ಸುವರ್ಣ ಇದೀಗ ಹೊಸ ಶೋ “ಸುವರ್ಣ ಸೆಲೆಬ್ರಿಟಿ ಲೀಗ್” ಹೊತ್ತು ತರ್ತಿದೆ.

ಅಂದ್ಹಾಗೆ ‘ಸುವರ್ಣ ಸೆಲೆಬ್ರಿಟಿ ಲೀಗ್’ ಕಿರುತೆರೆಯ ಫೇಮಸ್ ಸೆಲೆಬ್ರಿಟಿಗಳಿಗಾಗಿಯೇ ಆರಂಭಿಸುತ್ತಿರುವ ಹೊಸ ರೀತಿಯ ರಿಯಾಲಿಟಿ ಶೋ. ಈ ಶೋನಲ್ಲಿ ಸುಮಾರು ಎರಡು ತಂಡಗಳು ಇರುತ್ತವೆ. 10 ಮಂದಿ ಸೆಲೆಬ್ರಿಟಿಗಳು ಈ ಶೋಗಳಲ್ಲಿ ಭಾಗವಹಿಸುತ್ತಿದ್ದಾರೆ. 10 ಜನ ಸೆಲೆಬ್ರಿಟಿ ಸ್ಪರ್ಧಿಗಳ ನಡುವೆ ಸರಿ ಸುಮಾರು 8 ವಾರಗಳ ಕಾಲ ನಡೆಯುವ ಸಮರ ಇದಾಗಿದೆ. ಈ ಜಟಾಪಟಿಯಲ್ಲಿ ಯಾವ ತಂಡ ಗೆದ್ದು “ಸುವರ್ಣ ಸೆಲೆಬ್ರಿಟಿ ಲೀಗ್” ಪಟ್ಟವನ್ನು ತನ್ನದಾಗಿಸಿಕೊಳ್ಳುತ್ತದೆ ? ಎಂಬುದು ಈ ಕಾರ್ಯಕ್ರಮದ ಶೈಲಿಯಾಗಿದೆ. ಜೊತೆಗೆ ಮೋಜು-ಮಸ್ತಿ, ತರ್ಲೆ ತುಂಟಾಟದ ಜೊತೆ ಪೈಪೋಟಿಯ ಮಹಾ ಯುದ್ಧವೇ ನಡೆಯಲಿದೆ.

ಇನ್ನು ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ನಟನೆಯ ಮೂಲಕ ಕನ್ನಡಿಗರ ಮನಸ್ಸನ್ನು ಅದ್ದೂರಿಯಾಗಿ ಗೆದ್ದ ನಟ ಕಾರ್ತಿಕ್ ಮಹೇಶ್ ಇದೇ ಮೊದಲ ಬಾರಿಗೆ ‘ಸುವರ್ಣ ಸೆಲೆಬ್ರಿಟಿ ಲೀಗ್’ ನ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇದು ಈ ಕಾರ್ಯಕ್ರಮದ ಮತ್ತೊಂದು ವಿಶೇಷತೆ.

ಈಗಾಗಲೇ ‘ಸುವರ್ಣ ಸೆಲೆಬ್ರಿಟಿ ಲೀಗ್’ ಶೋ ಲಾಂಚ್​​ಗೆ ಭರ್ಜರಿಯಾಗಿ ತಯಾರಿ ನಡೆದಿದ್ದು, ಪ್ರೊಮೋಗಳಿಂದ ವೀಕ್ಷಕರಲ್ಲಿ ಕಾತುರತೆ ಹೆಚ್ಚಾಗಿದೆ. 10 ಸ್ಪರ್ಧಿಗಳಾಗಿ ಕಿರುತೆರೆ ಕಲಾವಿದರುಗಳಾದ ವಿನಯ್ ಗೌಡ, ನಮ್ರತಾ ಗೌಡ, ‘ಕಥೆಯೊಂದು ಶುರುವಾಗಿದೆ’ ಧಾರಾವಾಹಿ ಖ್ಯಾತಿಯ ಚಂದು ಗೌಡ, ‘ಆಸೆ’ ಧಾರಾವಾಹಿ ಖ್ಯಾತಿಯ ಪ್ರಿಯಾಂಕಾ ಮತ್ತು ನಿನಾದ್ ಹರಿತ್ಸ, ‘ಗೌರಿಶಂಕರ’ ಧಾರಾವಾಹಿ ಖ್ಯಾತಿಯ ಅಭಿಜ್ಞಾ ಭಟ್, ತನಿಷಾ ಕುಪ್ಪಂಡ, ಪ್ರಿಯಾಂಕಾ ಶಿವಣ್ಣ, ರಕ್ಷಕ್ ಬುಲೆಟ್ ಹಾಗೂ ‘ಕಾಮಿಡಿ ಗ್ಯಾಂಗ್ಸ್’ ಖ್ಯಾತಿಯ ಹಿತೇಶ್ ಭಾಗವಹಿಸಲಿದ್ದಾರೆ.

ಸ್ಟಾರ್ ಸುವರ್ಣದ ಈ ಹೊಚ್ಚ ಹೊಸ ಶೋ ‘ಸುವರ್ಣ ಸೆಲೆಬ್ರಿಟಿ ಲೀಗ್’ ಸೆಪ್ಟೆಂಬರ್ 15ರಿಂದ ಆರಂಭ ಆಗುತ್ತಿದೆ. ಪ್ರತಿ ಭಾನುವಾರ 7 ಗಂಟೆಗೆ ಪ್ರಸಾರ ಆಗಲಿದೆ. ಅದರಲ್ಲೂ ಮತ್ತೊಂದು ರಿಯಾಲಿಟಿ ಶೋ ಮೂಲಕ ಮುಖಾಮುಖಿಯಾಗುತ್ತಿರುವ ಸ್ಪರ್ಧಿಗಳು ವೀಕ್ಷಕರನ್ನು ಹೇಗೆಲ್ಲ ರಂಜಿಸುತ್ತಾರೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ : ಶಾಲಾ ಮಕ್ಕಳ ಕ್ಷೀರ ಭಾಗ್ಯಕ್ಕೆ ಕನ್ನ ಹಾಕಿದ ಹೆಡ್​​ ಮಾಸ್ಟರ್ – ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು..!

Leave a Comment

DG Ad

RELATED LATEST NEWS

Top Headlines

ಪ್ರಭಾಸ್‌ ಜೊತೆಗೆ ಒಂದಲ್ಲ ಎರಡಲ್ಲ ಮೂರು ಸಿನಿಮಾಗಳನ್ನು ಘೋಷಿಸಿದ ಹೊಂಬಾಳೆ ಫಿಲಂಸ್‌..!

ಕನ್ನಡ ಚಿತ್ರಂಗಕ್ಕೆ ಮಾತ್ರ ಸೀಮಿತವಾಗದ ಹೊಂಬಾಳೆ ಫಿಲಂಸ್‌ ಸಂಸ್ಥೆ ಪರಭಾಷೆ ಸಿನಿಮಾಗಳಿಗೆ ಬಂಡವಾಳ ಹೂಡುವ ಮೂಲಕ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಕೆಜಿಎಫ್‌, ಕೆಜಿಎಫ್‌ 2, ಕಾಂತಾರ, ಸಲಾರ್‌, ಈಗ

Live Cricket

Add Your Heading Text Here