ಮೈಸೂರು : ಹಾಸನದ ಅಶ್ಲೀಲ ಪೆನ್ಡ್ರೈವ್ ಪ್ರಕರಣ ದೇಶದಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಪ್ರಜ್ವಲ್ ತಂದೆ, ಮಾಜಿ ಸಚಿವ ಹೆಚ್ಡಿ ರೇವಣ್ಣರನ್ನು ಕೂಡ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯನ್ನಾಗಿ ಹೆಸರಿಸಲಾಗಿದೆ. ಇದೀಗ ಜೆಡಿಎಸ್ ಶಾಸಕ ಹೆಚ್ಡಿ ರೇವಣ್ಣಗೆ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಮತ್ತೊಂದು ಸಂಕಷ್ಟ ಎದುರಾಗಿದೆ.
ಮೈಸೂರಿನಲ್ಲಿ ರೇವಣ್ಣ ವಿರುದ್ಧ ಕೇಸ್ ದಾಖಲಾಗಿದ್ದು, ರೇವಣ್ಣ ವಿರುದ್ಧ ಸಂತ್ರಸ್ತೆ ಪುತ್ರನಿಂದ ದೂರು ದಾಖಲಾಗಿದೆ. ಮಗ ತನ್ನ ತಾಯಿ ಅಪಹರಣ ಶಂಕಿಸಿ ನಿನ್ನೆ ಕೆ.ಆರ್.ನಗರ ಠಾಣೆಯಲ್ಲಿ ದೂರು ನೀಡಿದ್ದಾನೆ. ಈ ಸಂಬಂಧ ಹೆಚ್.ಡಿ.ರೇವಣ್ಣ ವಿರುದ್ಧ ತಡರಾತ್ರಿ FIR ದಾಖಲಾಗಿದೆ. ಹೆಚ್ಚುವರಿ ಪೊಲೀಸ್ ಆಯುಕ್ತೆ ಈ ಬಗ್ಗೆ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಮೈಸೂರು ಹೆಚ್ಚುವರಿ ಪೊಲೀಸ್ ಆಯುಕ್ತೆ ನಂದಿನಿಯಿಂದ ಮಾಹಿತಿ ಸಂಗ್ರಹವಾಗಿದ್ದು, ಪೆನ್ಡ್ರೈವ್ ವಿವಾದದಲ್ಲಿ ನನ್ನ ತಾಯಿಯ ಫೋಟೋ ಇದೆ. ವಿಡಿಯೋ ಬಹಿರಂಗ ಬಳಿಕ ನನ್ನ ತಾಯಿ ದಿಡೀರ್ ನಾಪತ್ತೆ ಎಂದು ದೂರು ಮಗ ನೀಡಿದ್ದಾನೆ.
ಇದನ್ನೂ ಓದಿ : ಪ್ರಜ್ವಲ್ ರೇವಣ್ಣ ವಿರುದ್ದ ರೇಪ್ ಕೇಸ್ ದಾಖಲು..!