Download Our App

Follow us

Home » ಸಿನಿಮಾ » ಬಿಗ್‌ಬಾಸ್‌ ಶೋ ಹಾಳು ಮಾಡೋಕೆ ನಿಮ್ಮಪ್ಪನಾಣೆ ಸಾಧ್ಯವಿಲ್ಲ – ಲಾಯರ್ ಜಗದೀಶ್​​ ಬೆವರಿಳಿಸಿದ ಕಿಚ್ಚ..!

ಬಿಗ್‌ಬಾಸ್‌ ಶೋ ಹಾಳು ಮಾಡೋಕೆ ನಿಮ್ಮಪ್ಪನಾಣೆ ಸಾಧ್ಯವಿಲ್ಲ – ಲಾಯರ್ ಜಗದೀಶ್​​ ಬೆವರಿಳಿಸಿದ ಕಿಚ್ಚ..!

ಕನ್ನಡದ ಬಿಗ್​ ರಿಯಾಲಿಟಿ ಶೋ ಸೀಸನ್​ 11 ಶುರುವಾಗಿ ಒಂದು ವಾರ ಕಂಪ್ಲೀಟ್ ಆಗಿದೆ. ಆರಂಭದ ದಿನಗಳಲ್ಲೇ ಸ್ಪರ್ಧಿಗಳು ಅಬ್ಬರಿಸಿದ್ದಾರೆ. ಕೆಲವರು ರೂಲ್ಸ್ ಬ್ರೇಕ್ ಮಾಡಿದ್ರೆ ಇನ್ನು ಕೆಲವರು ಜಗಳ ಮಧ್ಯೆ ನಾಲಿಗೆ ಹರಿಬಿಟ್ಟಿದ್ರು. ವಾರದ ಕಥೆ ಕಿಚ್ಚನ ಜೊತೆಯಲ್ಲಿ ಇವರೆನ್ನೆಲ್ಲಾ ನಟ ಸುದೀಪ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ರೂಲ್ಸ್ ಬ್ರೇಕ್ ಮಾಡಿದ ಲಾಯರ್ ಜಗದೀಶ್, ಬಿಗ್ ಬಾಸ್ ಬಗ್ಗೆಯೇ ಕೇವಲವಾಗಿ ಮಾತಾಡಿದ್ರು. ಬಿಗ್​ಬಾಸ್​ ಅನ್ನೇ ಉಡೀಸ್ ಮಾಡ್ತೀನಿ ಅಂತ ಹೇಳಿದ್ದ ಲಾಯರ್​ ಜಗದೀಶ್​ಗೆ ಇದೀಗ ಸುದೀಪ್​​ ಮೈ ಚಳಿ ಬಿಡಿಸಿದ್ದಾರೆ.

ಹೌದು, ಮೊನ್ನೆ ಪ್ರಸಾರವಾದ ಸಂಚಿಕೆಯಲ್ಲಿ ಲಾಯರ್ ಜಗದೀಶ್ ಬಿಗ್ ಬಾಸ್ ಕ್ಯಾಮರಾ ಮುಂದೆ ನಿಂತು, ನಮ್ಮನ್ನ ಎದುರು ಹಾಕ್ಕೊಂಡು ಕರ್ನಾಟಕದಲ್ಲಿ ಬಿಗ್​ಬಾಸ್ ರನ್ ಮಾಡ್ತೀರಾ ಎಂದು ಗದರಿದ್ದರು. ಅಲ್ಲದೇ ನನಗೆ ಇಲ್ಲಿ ಇರೋಕೆ ಇಷ್ಟ ಇಲ್ಲ. ಇಲ್ಲಿಂದ ಹೊರ ಹೋಗುತ್ತೇನೆ. ನಾ ಮನಸು ಮಾಡಿದರೆ ಹೆಲಿಕಾಪ್ಟರ್ ಇಲ್ಲಿಗೆ ತರಿಸುತ್ತೇನೆ ಎಂದು ಲಾಯರ್ ಜಗದೀಶ್ ಸವಾಲ್ ಹಾಕಿದ್ದರು.

ಇದೀಗ ವಾರದ ಕಥೆ ಕಿಚ್ಚ ಸುದೀಪನ ಜೊತೆ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್​ ಅವರು ನಗು ನಗುತ್ತಲೇ ಕ್ರಿಮಿನಲ್​ ಲಾಯರ್​ಗೆ ಟಾಂಗ್ ಕೊಟ್ಟಿದ್ದಾರೆ. ಬಿಗ್ ಬಾಸ್ ಅನ್ನೋದು ಒಂದು ಅದ್ಬುತವಾದ ಶೋ ಆಗಿದೆ. ಇದನ್ನು ಇಂಪ್ರೂವ್​ ಮಾಡೋದು ಈಗ ಇರುವ ನಿಮ್ಮ ಕೈಯಲ್ಲಿದೆ, ಆದ್ರೆ ಹಾಳು ಮಾಡೋದು ನಿಮ್ಮಪ್ಪನ ಆಣೆ ಸಾಧ್ಯವಿಲ್ಲ ಎಂದು ಕಿಚ್ಚ ಖಡಕ್​ ಆಗಿ ಹೇಳಿದ್ದಾರೆ. ಈ ಮಾತನ್ನು ಕೇಳಿದ ಲಾಯರ್ ಜಗದೀಶ್​ ಸೈಲೆಂಟ್​ ಆಗಿ ಕುಳಿತುಕೊಂಡಿದ್ದರು.

ಇದನ್ನೂ ಓದಿ : ರೇಣುಕಾಸ್ವಾಮಿ ಕೊಲೆ ಕೇಸ್‌ – 40 ಲಕ್ಷದ ಮೂಲ ಬಿಚ್ಚಿಟ್ಟ ವಕೀಲ ಸಿ.ವಿ.ನಾಗೇಶ್​..!

Leave a Comment

DG Ad

RELATED LATEST NEWS

Top Headlines

ಲಾಯರ್ ಜಗದೀಶ್​ ಅವರು ಹೆಣ್ಮಕ್ಕಳು ಮುಂದೆ ಡ್ರೆಸ್ ಚೇಂಜ್ ಮಾಡ್ತಾರೆ – ದೊಡ್ಮನೆ ನಾರಿಯರು ಗರಂ..!

ಬಿಗ್ ಬಾಸ್ ಮನೆಯಲ್ಲಿ 17 ಸ್ಪರ್ಧಿಗಳು ಒಂದು ವಾರ ಕಳೆದಿದ್ದಾರೆ. ಆರಂಭದ ದಿನಗಳಲ್ಲೇ ಸ್ಪರ್ಧಿಗಳು ಅಬ್ಬರಿಸಿದ್ದಾರೆ. ಕೆಲವರು ರೂಲ್ಸ್ ಬ್ರೇಕ್ ಮಾಡಿದ್ರೆ ಇನ್ನು ಕೆಲವರು ಜಗಳ ಮಧ್ಯೆ

Live Cricket

Add Your Heading Text Here