ಚಿತ್ರದುರ್ಗ : ದರ್ಶನ್ & ಗ್ಯಾಂಗ್ನಿಂದ ಕೊಲೆಯಾದ ರೇಣುಕಾಸ್ವಾಮಿ ನಿವಾಸಕ್ಕೆ ಬಿ.ವೈ.ವಿಜಯೇಂದ್ರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ವಿಜಯೇಂದ್ರ ರೇಣುಕಾಸ್ವಾಮಿ ಕುಟುಂಬಕ್ಕೆ ಪರಿಹಾರಧನ ನೀಡಿದ್ದಾರೆ.
ರೇಣುಕ ಪೋಷಕರು ವಿಜಯೇಂದ್ರ ಮುಂದೆ ಕಣ್ಣೀರು ಹಾಕಿ, ನನ್ನ ಮಗ ಮಾಡಿದ ತಪ್ಪೇನು..? ಕಂಡ-ಕಂಡ ದೇವರ ಪೂಜಿಸಿದ್ದೇ ತಪ್ಪಾಯ್ತಾ..? ನಾವು ನಂಬಿದ ದೇವರು ದಿಂಡರು ನಮ್ಮ ಕೈ ಹಿಡಿಯಲಿಲ್ಲ. ರೇಣುಕಾಸ್ವಾಮಿ ಹತ್ಯೆ ಅಮಾನವೀಯ ಕೃತ್ಯ ಎಂದು ಗೋಳಾಡಿದ್ದಾರೆ.
ಇದೇ ವೇಳೆ ಬಿ.ವೈ.ವಿಜಯೇಂದ್ರ ಮಾತನಾಡಿ, ಕುಟುಂಬಕ್ಕೆ ಸರ್ಕಾರ ಧೈರ್ಯ ತುಂಬುವ ಕೆಲಸ ಮಾಡಬೇಕು. ರೇಣುಕಾಸ್ವಾಮಿ ಪತ್ನಿ ಗರ್ಭಿಣಿ ಇದ್ದಾರೆ, ಅವರಿಗೆ ನೌಕರಿ ನೀಡಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ : ಇಂದು ಒಂದೇ ದಿನ ದಾಖಲೆಯ 600 ಪ್ರಕರಣಗಳ ವಿಚಾರಣೆ ನಡೆಸಲಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ..!
Post Views: 60