ಚನ್ನಪಟ್ಟಣ : ಹೈವೋಲ್ಟೇಜ್ ಕಣದೊಂದಿಗೆ ಜಿದ್ದಾಜಿದ್ದಿನ ರಾಜಕೀಯ ಕಾಳಗಕ್ಕೆ ಸಾಕ್ಷಿಯಾಗಿದ್ದ ಚನ್ನಪಟ್ಟಣ ಉಪಚುನಾವಣೆಗೆ ಶಾಂತಿಯುತ ಮತದಾನವಾಗಿದೆ. ಸಣ್ಣಪುಟ್ಟ ಮಾತಿನ ಚಕಮಕಿ ಹೊರತು ಪಡಿಸಿದರೆ, ಕ್ಷೇತ್ರದಲ್ಲಿ ಯಾವೊಂದು ಅಹಿತಕರ ಘಟನೆ ನಡೆದಿಲ್ಲ. ಇದರ ನಡುವೆ ಇದೀಗ ಚನ್ನಪಟ್ಟಣ ರಿಸಲ್ಟ್ ಮೇಲೆ ಭಾರೀ ಬೆಟ್ಟಿಂಗ್ ನಡೆಯುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.
ಬೈ ಎಲೆಕ್ಷನ್ ಮುಗೀದ ಬೆನ್ನಲ್ಲೇ ಚನ್ನಪಟ್ಟಣ ಕ್ಷೇತ್ರದ ಹಳ್ಳಿ-ಹಳ್ಳಿಗಳಲ್ಲೂ ಬೆಟ್ಟಿಂಗ್ ಭರಾಟೆ ಜೋರಾಗೆ ನಡೆಯುತ್ತಿದೆ. ಚನ್ನಪಟ್ಟಣದಲ್ಲಿ ನಿಖಿಲ್ ಗೆಲುವಿನ ಬಗ್ಗೆ ಬೆಟ್ಟಿಂಗ್ ಹೆಚ್ಚಿದ್ದು, ಅಭಿಮಾನಿಗಳು ಹಣ, ವಾಹನ ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ಅಷ್ಟೇ ಅಲ್ಲದೆ ನಿಖಿಲ್ ಗೆಲ್ತಾರೆ ಎಂದು ಬೆಟ್ಟಿಂಗ್ ಕಟ್ಟುತ್ತಿರುವ ಯುವಕರು, 10 ಸಾವಿರದಿಂದ 1 ಲಕ್ಷದವರೆಗೂ ಬೆಟ್ಟಿಂಗ್ ಕಟ್ಟುತ್ತಿದ್ದಾರೆ.
ಮತ್ತೊಂದೆಡೆ ವೋಟ್ ಲೀಡ್ ಬಗ್ಗೆಯೂ ಜನರು ಬಾಜಿ ಕಟ್ಟುತ್ತಿದ್ದಾರೆ. ರಾಜ್ಯ ಅಷ್ಟೇ ಅಲ್ಲ ದೆಹಲಿ ಮಟ್ಟದಲ್ಲೂ ಗಮನ ಸೆಳೆದಿರೋ ಚನ್ನಪಟ್ಟಣದಲ್ಲಿ ಡಿಕೆ-ಹೆಚ್ಡಿಕೆ ಗುದ್ದಾಟದಲ್ಲಿ ಯಾರ ಕೈ ಮೇಲು ಅನ್ನೋ ಕುತೂಹಲ ಹೆಚ್ಚಾಗಿದೆ.
ಇದನ್ನೂ ಓದಿ : ಅರಣ್ಯ ಇಲಾಖೆಯಲ್ಲಿ ಲಂಚದ ರೇಟ್ ಕಾರ್ಡ್.. ಅಪ್ರೈಸಲ್ ಕಮಿಟಿಯಲ್ಲಿ ಲಕ್ಷ ಲಕ್ಷ ಲೂಟಿ..!