ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಹಣಕಾಸು ಸಚಿವರಾಗಿ ಸೀತಾರಾಮನ್ ಮಂಡಿಸಲಿರುವ 6ನೇ ಬಜೆಟ್ ಇದಾಗಿದೆ. ಅಲ್ಲದೇ ಪ್ರಧಾನಿ ಮೋದಿ ಸರ್ಕಾರದ 2ನೇ ಅವಧಿಯ ಕೊನೆಯ ಬಜೆಟ್ ಕೂಡ ಆಗಲಿದೆ.
ಲೋಕಸಭೆ ಚುನಾವಣೆಯ ನಂತರ ಸರ್ಕಾರ ರಚನೆಯಾಗುವವರೆಗೆ ಮಧ್ಯಂತರ ಬಜೆಟ್ ಮಧ್ಯಂತರ ಅವಧಿಯ ಹಣಕಾಸಿನ ಅಗತ್ಯಗಳನ್ನು ನೋಡಿಕೊಳ್ಳುತ್ತದೆ. ಹೊಸ ಸರ್ಕಾರದಿಂದ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಾಗುವುದು.
2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೋದಿ ಲೆಕ್ಕದ ಮೇಲೆ ಹಲವು ನಿರೀಕ್ಷೆಗಳಿವೆ. ಇದರ ಮಧ್ಯೆ, ಈ ಬಾರಿಯ ಬಜೆಟ್ ಮೇಲೆ ದೊಡ್ಡ ದೊಡ್ಡ ಘೋಷಣೆಗಳು ಇಲ್ಲ. ಜೂನ್ನಲ್ಲಿ ನಡೆಯಲಿರುವ ಪೂರ್ಣಾವಧಿ ಬಜೆಟ್ನಲ್ಲಿ ಅವೆಲ್ಲ ಇರಲಿವೆ ಎನ್ನಲಾಗುತ್ತಿದೆ.
ಚುನಾವಣಾ ಕಾಲದಲ್ಲಿ ಮಂಡನೆಯಾಗುವ ಮಧ್ಯಂತರ ಬಜೆಟ್ನಲ್ಲೂ ಈ ಹಿಂದೆ ಮಹತ್ವದ ಯೋಜನೆಗಳು ಘೋಷಣೆಯಾಗಿವೆ. ಹೀಗಾಗಿ ಇವತ್ತಿನ ಬಜೆಟ್ ಈಜಿಯಾಗಿ ನೋಡುವಂತಿಲ್ಲ. ಹ್ಯಾಟ್ರಿಕ್ ಗೆಲುವು ಸಾಧಿಸುವ ಕನಸ್ಸಿನಲ್ಲಿರುವ ಮೋದಿ ಟೀಂ, ದೇಶದ ಜನರಿಗೆ ಬಿಗ್ ಸರ್ಪ್ರೈಸ್ ನೀಡಿದರೂ ಅಚ್ಚರಿ ಇಲ್ಲ.
ಬೆಳಗ್ಗೆ 11 ಗಂಟೆಯಿಂದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡನೆ ಆರಂಭಿಸಲಿದ್ದು, ಈ ಬಜೆಟ್ನಲ್ಲಿ ಮತದಾರರನ್ನು ಸೆಳೆಯಲು ಕೇಂದ್ರ ಸರ್ಕಾರ ಕೆಲವು ಪ್ರಮುಖ ಘೋಷಣೆಗಳನ್ನು ಮಾಡುವ ಸಾಧ್ಯತೆಯಿದೆ. ಇನ್ನು ಈ ಬಜೆಟ್ ಯಲ್ಲಿ ರೈತರಿಗೆ, ಯುವಕರಿಗೆ, ಶಿಕ್ಷಣ-ಉದ್ಯೋಗಕ್ಕೆ ಎಷ್ಟು ಪ್ರಮಾಣದಲ್ಲಿ ಬಜೆಟ್ ಮೀಸಲಿಡುತ್ತಾರೆ ಎಂಬ ಬಗ್ಗೆ ಕ್ಷಣ ಕ್ಷಣದ ಅಪ್ಡೇಟ್ಗಾಗಿ ಬಿಟಿವಿ ಕನ್ನಡವನ್ನು ಫಾಲೋ ಮಾಡಿ..
ಇದನ್ನೂ ಓದಿ : ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಸಚಿವ ಸಂಪುಟ ಸಭೆ..!