Download Our App

Follow us

Home » ರಾಜಕೀಯ » ಕೇಂದ್ರ ಬಜೆಟ್‌ನಲ್ಲಿ ಬಿಹಾರ-ಆಂಧ್ರಕ್ಕೆ ಬಂಪರ್ ಗಿಫ್ಟ್‌ ..!

ಕೇಂದ್ರ ಬಜೆಟ್‌ನಲ್ಲಿ ಬಿಹಾರ-ಆಂಧ್ರಕ್ಕೆ ಬಂಪರ್ ಗಿಫ್ಟ್‌ ..!

ದೆಹಲಿ : ಪ್ರಧಾನಿ ನರೇಂದ್ರ ಮೋದಿ 3.0 ಸರ್ಕಾರದ ಮೊದಲ ಬಜೆಟ್‌ನಲ್ಲಿ ಬಿಹಾರ ಮತ್ತು ಆಂಧ್ರ ಪ್ರದೇಶಕ್ಕೆ ಭರ್ಜರಿ ಜಾಕ್‌ಪಾಟ್ ದೊರೆತಿದೆ. ಬಿಹಾರ ಸರ್ಕಾರದ ವಿನಂತಿಯಂತೆ ವಿಶೇಷ ಸ್ಥಾನಮಾನವನ್ನು ಅಭಿವೃದ್ಧಿ ಬ್ಯಾಂಕ್‌ಗಳ ಸಹಾಯದಿಂದ ತ್ವರಿತವಾಗಿ ಜಾರಿಗೊಳಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.

ಕೇಂದ್ರ ಸರ್ಕಾರವು ಆಂಧ್ರ ಪ್ರದೇಶ ಮರುಸಂಘಟನೆ ಕಾಯಿದೆಯಲ್ಲಿನ ಬದ್ಧತೆಗಳನ್ನು ಪೂರೈಸಲು ಪ್ರಯತ್ನಗಳನ್ನು ಮಾಡುತ್ತಿದೆ. ಆಂಧ್ರ ಪ್ರದೇಶ ರಾಜ್ಯದ ಬಂಡವಾಳದ ಅಗತ್ಯವನ್ನು ಗುರುತಿಸಿ, ಬಹುಪಕ್ಷೀಯ ಏಜೆನ್ಸಿಗಳ ಮೂಲಕ ಇದೇ ಹಣಕಾಸು ವರ್ಷದಲ್ಲಿ ವಿಶೇಷ ಹಣಕಾಸಿನ ನೆರವು ನೀಡುತ್ತೇವೆ. ಮುಂದಿನ ವರ್ಷಗಳಲ್ಲಿ ಹೆಚ್ಚುವರಿ ಮೊತ್ತದೊಂದಿಗೆ ₹ 15,000 ಕೋಟಿಗಳನ್ನು ಆಂಧ್ರ ಪ್ರದೇಶವನ್ನು ಮರು ಸಂಘಟಿಸಲು ಒದಗಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.

ಹೆದ್ದಾರಿಗಳ ನಿರ್ಮಾಣಕ್ಕೆ 26,000 ಕೋಟಿ ರೂಪಾಯಿ : ನರೇಂದ್ರ ಮೋದಿ ಸರ್ಕಾರ ಬಿಹಾರ ರಾಜ್ಯಕ್ಕೆ ಬಂಪರ್ ಅನುದಾನ ಘೋಷಿಸಿದೆ. ಬಿಹಾರಕ್ಕೆ ಹೊಸ ವಿಮಾನ ನಿಲ್ದಾಣಗಳು, ವೈದ್ಯಕೀಯ ಸೌಲಭ್ಯಗಳು ಮತ್ತು ಕ್ರೀಡಾ ಮೂಲಸೌಕರ್ಯಗಳನ್ನು ನಿರ್ಮಲಾ ಸೀತಾರಾಮನ್ ಘೋಷಿಸಿದ್ದು, ಇದರ ಜೊತೆಗೆ ಬಿಹಾರದಲ್ಲಿ ಹೆದ್ದಾರಿಗಳ ನಿರ್ಮಾಣಕ್ಕೆ 26,000 ಕೋಟಿ ರೂಪಾಯಿ ನೀಡಲಾಗುವುದು, ಬಿಹಾರದಲ್ಲಿ 21 ಸಾವಿರ ಕೋಟಿ ರೂಪಾಯಿ ಮೌಲ್ಯದ ವಿದ್ಯುತ್ ಸ್ಥಾವರವನ್ನೂ ಘೋಷಿಸಲಾಗಿದೆ. ಇದಲ್ಲದೇ ಬಿಹಾರಕ್ಕೆ ಆರ್ಥಿಕ ನೆರವು ಸಿಗಲಿದೆ. ಆಂಧ್ರಪ್ರದೇಶಕ್ಕೆ ಸುಮಾರು 15 ಸಾವಿರ ಕೋಟಿ ರೂಪಾಯಿ ಪ್ಯಾಕೇಜ್ ಸಿಗಲಿದೆ.

ಇದನ್ನೂ ಓದಿ : ಮೋದಿ 3.0 ಸರ್ಕಾರದ ಮೊದಲ ಬಜೆಟ್‌ – ಕೃಷಿ ಕ್ಷೇತ್ರಕ್ಕೆ 1.52 ಲಕ್ಷ ಕೋಟಿ ರೂ. ಅನುದಾನ ಘೋಷಣೆ..!

Leave a Comment

DG Ad

RELATED LATEST NEWS

Top Headlines

ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಡ್ರೆಸ್ ಕೋಡ್ ಜಾರಿ – ದೇವರ ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆ ಕಡ್ಡಾಯ..!

ಚಿಕ್ಕಮಗಳೂರು : ಇತ್ತೀಚೆಗೆ ಶೃಂಗೇರಿಯ ಶ್ರೀ ಶಾರದಾಂಬೆ ಸನ್ನಿಧಾನದಲ್ಲಿ ಹಾಗೂ ಸುತ್ತಲಿನ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿಯಾಗಿತ್ತು. ಇದೀಗ ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾದ ಹೊರನಾಡು ಶ್ರೀ

Live Cricket

Add Your Heading Text Here