ತುಮಕೂರು : ಡಿವೈಎಸ್‌ಪಿ ಕಚೇರಿಯಲ್ಲೇ ರಾಸಲೀಲೆಯಲ್ಲಿ ತೊಡಗಿದ್ದ ಮಧುಗಿರಿ ಡಿವೈಎಸ್‌ಪಿ ರಾಮಚಂದ್ರಪ್ಪ ಅವರನ್ನು ಇದೀಗ ಬಂಧಿಸಲಾಗಿದೆ. ಬಿಟಿವಿಯು ಡಿವೈಎಸ್‌ಪಿ ರಾಮಚಂದ್ರಪ್ಪ ಸೆಕ್ಸ್ ಕಹಾನಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿತ್ತು. ಬಿಟಿವಿಯಲ್ಲಿ ಸುದ್ದಿ ವರದಿಯಾದ 12 ಗಂಟೆಯೊಳಗೇ ಸೆಕ್ಸ್ ಮಾಸ್ಟರ್ ಮಧುಗಿರಿ DySP ರಾಮಚಂದ್ರಪ್ಪ ಅವರನ್ನು ಸಸ್ಪೆಂಡ್ ಮಾಡಿ ಡಿಜಿ ಅವರು ಆದೇಶ ಹೊರಡಿಸಿದ್ದರು. ನಂತರ FIR ದಾಖಲಾಗಿತ್ತು. ಆ ಬಳಿಕ ಕಾಮುಕ ಡಿವೈಎಸ್‌ಪಿ ರಾಮಚಂದ್ರಪ್ಪನ್ನು ಬಂಧಿಸಲಾಗಿದೆ.
ಮಧುಗಿರಿ ಕಾಮುಕ ಡಿವೈಎಸ್‌ಪಿ ರಾಮಚಂದ್ರಪ್ಪ ಇಷ್ಟು ದಿನ ರಾಜಾರೋಷವಾಗಿ ತಾನೂ ಆಡಿದ್ದೆ ಆಟ ಅನ್ನೋ ರೀತಿ ನಡೆದುಕೊಂಡಿದ್ದರು. ಇದೀಗ ಅವರದ್ದೇ ಠಾಣೆಯ ಸೆಲ್ನಲ್ಲಿ ಸೊಳ್ಳೆಗಳ ಜೊತೆ ಡ್ಯುಯೆಟ್ ಆಡಿಕೊಂಡು ನಿದ್ದೆ ಬಾರದೆ ಒಂದು ರಾತ್ರಿ ಕಳೆದಿದ್ದಾರೆ.
ಮಧುಗಿರಿ ಲಿಮಿಟ್ನಲ್ಲಿ ಒಟ್ಟು ನಾಲ್ಕು ಪೊಲೀಸ್ ಠಾಣೆಗಳಿವೆ. ರಾಮಚಂದ್ರಪ್ಪ ಇಲ್ಲಿ ಡಿವೈಎಸ್‌ಪಿಯಾಗಿ ಬಂದ ಮೇಲೆ ಅದೆಷ್ಟೋ ಸುಳ್ಳು ಪ್ರಕರಣಗಳಿಗೆ ಅಮಾಯಕರು ಬಲಿಯಾಗಿದ್ದಾರೆ. ದುಡ್ಡು ಕೊಡಲಿಲ್ಲ ಅಂದ್ರೆ ಮಾಮೂಲಿ ಬರಲಿಲ್ಲ ಅಂದ್ರೆ ರಾಮಚಂದ್ರಪ್ಪನ ಕಣ್ಣು ಕೆಂಪಾಗಿ ಸುಳ್ಳು ಎಫ್ಐಆರ್ಗಳನ್ನ ಮಾಡಿ ಇನ್ನಿಲ್ಲದಂತೆ ಅಮಾಯಕರಿಗೆ ಟಾರ್ಚರ್ ಕೊಡುತ್ತಿದ್ದರು.
ನ್ಯಾಯ ಕೇಳಿಕೊಂಡು ಬಂದಿದ್ದ ಅದೆಷ್ಟೋ ಹೆಣ್ಣು ಮಕ್ಕಳ ಪಾಲಿಗೆ ರಾಮಚಂದ್ರಪ್ಪ ಕಾಮುಕನಾಗಿದ್ದರು. ಮಧುಗಿರಿಯ ಹೆಣ್ಣುಕ್ಕಳು ಇವರು ಬಂದಾಗಿನಿಂದ ಪೊಲೀಸ್ ಠಾಣೆಗೆ ಹೋಗುವುದಕ್ಕೆ ಭಯ ಬೀಳುತ್ತಿದ್ದರು. ಇದೀಗ ರಾಮಚಂದ್ರಪ್ಪನ ಅರೆಸ್ಟ್ ಸುದ್ದಿ ಕೇಳಿ ಮಧುಗಿರಿ ಹೆಣ್ಣು ಮಕ್ಕಳು ನಿಟ್ಟುಸಿರು ಬಿಟ್ಟಿದ್ದಾರೆ.
ಇನ್ನು ರಾಮಚಂದ್ರಪ್ಪ ಡಿವೈಎಸ್‌ಪಿಯಾಗಿ ಬಂದಮೇಲೆ ಮಧುಗಿರಿಯಲ್ಲಿ ತಿಂಗಳಿಗೆ ಲಕ್ಷಲಕ್ಷ ಮಾಮೂಲಿ ಕಲೆಕ್ಷನ್ ಮಾಡಿ ಕೋಟಿ ಕುಬೇರನಾಗಿದ್ದ. ಇದಕ್ಕಾಗಿ ತನ್ನದೇ ಆದ ಟೀಂ ಕಟ್ಟಿಕೊಂಡಿದ್ದ ಭ್ರಷ್ಟ ರಾಮಚಂದ್ರಪ್ಪ, ಆ ಟೀಂನಿಂದ ಪಕ್ಕಾ ಪ್ಲಾನ್ ಮಾಡಿಕೊಂಡು ಎಲ್ಲಾ ಕೆಲಸ ಮಾಡಿಸುತ್ತಿದ್ದರು. ಇಷ್ಟೇ ಅಲ್ಲದೇ ತನ್ನ ಸಿಬ್ಬಂದಿಗೂ ಟಾರ್ಚರ್ ಕೊಡುತ್ತಿದ್ದರು. ಇದರಿಂದ ಪೊಲೀಸ್ ಸಿಬ್ಬಂದಿಗಳು ನಲುಗಿ ಹೋಗಿದ್ದರು. ಇವರ ಕೃತ್ಯಗಳಿಗೆ ಪೊಲೀಸ್ ಸಿಬ್ಬಂದಿಗಳು ಸಪೋರ್ಟ್ ಮಾಡಬೇಕಿತ್ತು, ಇಲ್ಲದಿದ್ದರೆ ಅವರನ್ನ ಟಾರ್ಗೆಟ್ ಮಾಡಿ ಆ ಸಿಬ್ಬಂದಿಗೂ ರಾಮಚಂದ್ರಪ್ಪ ಟಾರ್ಚರ್ ಕೊಡುತ್ತಿದ್ದರು .
ಸದ್ಯ ನಿನ್ನೆ ರಾತ್ರಿ ಅರೆಸ್ಟ್ ಆದ ರಾಮಚಂದ್ರಪ್ಪಗೆ ವೈದ್ಯಕೀಯ ತಪಾಸಣೆ ಮುಗಿಸಿ ಮದುಗಿರಿ ಪೊಲೀಸ್ ಠಾಣೆಯಲ್ಲಿ ಇರಿಸಿಕೊಳ್ಳಲಾಗಿದೆ. ಇವತ್ತು ಮಧ್ಯಾಹ್ನದ ವೇಳೆ ಕೋರ್ಟ್ ಮುಂದೆ ಪೊಲೀಸರು ಹಾಜರುಪಡಿಸಲಿದ್ದಾರೆ. ಆ ನಂತರ ಕೋರ್ಟ್ ಬಳಿ ಹೆಚ್ಚಿನ ವಿಚಾರಣೆಗಾಗಿ ರಾಮಚಂದ್ರಪ್ಪನ್ನು ಪೊಲೀಸರು ವಶಕ್ಕೆ ಕೇಳಲಿದ್ದಾರೆ.
ಇದನ್ನೂ ಓದಿ : ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಕೇಸ್ – ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಕಲಬುರಗಿಯಲ್ಲಿಂದು ಬಿಜೆಪಿ ಪ್ರೊಟೆಸ್ಟ್..!