ತುಮಕೂರು : ಪೊಲೀಸ್ ಕಚೇರಿಯಲ್ಲೇ ಮಹಿಳೆ ಜೊತೆ ಸರಸ ಸಲ್ಲಾಪ ಆಡಿದ್ದ ಪ್ರಕರಣದಲ್ಲಿ ಮಧುಗಿರಿ ಡಿವೈಎಸ್‌ಪಿ ರಾಮಚಂದ್ರಪ್ಪ ಜೈಲು ಪಾಲಾಗಿದ್ದಾರೆ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿಸಿದ್ದ ಪೊಲೀಸರು ಮಧುಗಿರಿ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಮಧುಗಿರಿ ಪ್ರಿನ್ಸಿಪಲ್ ಸೀನಿಯರ್ ಸಿವಿಲ್ ನ್ಯಾಯಾಧೀಶರು ರಾಮಚಂದ್ರಪ್ಪ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ವಾದ ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಧೀಶರು ಡಿವೈಎಸ್ಪಿಗೆ 14 ದಿನ ನ್ಯಾಯಾಂಗ ಬಂಧನ ನೀಡಿ ಆದೇಶ ಆದೇಶ ಹೊರಡಿಸಿದ್ದಾರೆ. ನಾಳೆ ಒಂದು ದಿನ ಮಧುಗಿರಿ ಉಪ ಕಾರಾಗೃಹದಲ್ಲಿರುವಂತೆ ಆದೇಶ ನೀಡಲಾಗಿದ್ದು ಇನ್ನುಳಿದ 13 ದಿನಗಳ ಕಾಲ ತುಮಕೂರು ಜಿಲ್ಲಾ ಕಾರಾಗೃಹದಲ್ಲಿ ಡಿವೈಎಸ್‌ಪಿ ರಾಮಚಂದ್ರಪ್ಪ ಮುದ್ದೆ ಮುರಿಯಲಿದ್ದಾರೆ.
ಪೊಲೀಸ್ ಠಾಣೆಗೆ ದೂರು ನೀಡಲು ಬಂದ ಮಹಿಳೆಯನ್ನು ಪುಸಲಾಯಿಸಿ ಅವರೊಂದಿಗೆ ಕಾಮಲೀಲೆ ಆಡಿದ್ದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಈ ಪ್ರಕರಣದಲ್ಲಿ ಡಿವೈಎಸ್‌ಪಿ ರಾಮಚಂದ್ರಪ್ಪ ಬಂಧನವಾಗಿದ್ದು, ಅವರನ್ನು ಈಗಾಗಲೇ ಅಮಾನತು ಕೂಡ ಮಾಡಲಾಗಿದೆ. ಕಾಮುಕ DySP ರಾಮಚಂದ್ರಪ್ಪ ಕಾಮದಲೀಲೆ ಬಗ್ಗೆ ಬಿಟಿವಿ ಎಕ್ಸ್ಕ್ಲೂಸಿವ್ ಆಗಿ ರಿಪೋರ್ಟ್ ಮಾಡಿತ್ತು. ಸತತ ವರದಿ ಮಾಡುವ ಮೂಲಕ ರಾಜ್ಯಾದ್ಯಂತ ಭಾರೀ ಸುದ್ದಿ ಮಾಡಿತ್ತು. ಡಿವೈಎಸ್‌ಪಿ ರಾಮಚಂದ್ರಪ್ಪ ಪ್ರಕರಣದಲ್ಲಿ ನ್ಯಾಯ ಕೊಡಿಸುವ ಕೆಲಸ ಬಿಟಿವಿ ಮಾಡಿದೆ.
ಪೊಲೀಸರು ಡಿವೈಎಸ್‌ಪಿ ರಾಮಚಂದ್ರಪ್ಪ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಮಧುಗಿರಿ ತಾಲೂಕು ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಿಕೊಂಡು, ನೇರವಾಗಿ ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರುಪಡಿಸಿದ್ದರು.
ಮೆಡಿಕಲ್ ಟೆಸ್ಟ್ ವೇಳೆಯಲ್ಲೂ ಅವಾಂತರ: ಇನ್ನು ಮೆಡಿಕಲ್ ಟೆಸ್ಟ್ ವೇಳೆಯಲ್ಲೂ ಡಿವೈಎಸ್‌ಪಿ ರಾಮಚಂದ್ರಪ್ಪ ಅವಾಂತರ ಮಾಡಿಕೊಂಡಿದ್ದಾರೆ. ಮೆಡಿಕಲ್ ಟೆಸ್ಟ್ ವೇಳೆ ಡಿವೈಎಸ್ ಪಿ ರಾಮಚಂದ್ರಪ್ಪ ಫೋನ್ನಲ್ಲಿ ಮಾತುಕತೆ ನಡೆಸಿದ್ದಾರೆ. ಮೊಬೈಲ್ ಹಿಡಿದುಕೊಂಡು ಪೋಸ್ ಕೊಟ್ಟಿರುವ ಅವರ ವಿಡಿಯೋ ವೈರಲ್ ಆಗಿದೆ. ಬಂಧಿತ ಆರೋಪಿಗೆ ಮಾತನಾಡಲು ಫೋನ್ ಕೊಟ್ಟಿರುವುದು ಅನುಮಾನಕ್ಕೆ ಕಾರಣವಾಗಿದೆ. ಪೊಲೀಸರ ನಡೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸಾಮಾನ್ಯರಿಗೆ ಒಂದು ಕಾನೂನು ಡಿವೈಎಸ್ಪಿಗೆ ಇನ್ನೊಂದು ಕಾನೂನಾ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಅರೆಸ್ಟ್ ಆದ್ರೂ ಫೋನ್ನಲ್ಲಿ DySP ಸಖತ್ ಬ್ಯುಸಿ – ಮೆಡಿಕಲ್ ಚೆಕಪ್ ವೇಳೆ ಕಾಮುಕ ರಾಮಚಂದ್ರಪ್ಪ ಬಿಂದಾಸ್ ಟಾಕ್!