ತುಮಕೂರು : ಹಾಡಹಗಲೇ ಡಿವೈಎಸ್‌ಪಿ ಕಚೇರಿಯಲ್ಲಿ ಖುಲ್ಲಾಂಖುಲ್ಲ ರಾಸಲೀಲೆಯಲ್ಲಿ ತೊಡಗಿದ್ದ ಮಧುಗಿರಿ ಡಿವೈಎಸ್‌ಪಿ ರಾಮಚಂದ್ರಪ್ಪ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಮಧುಗಿರಿ ಡಿವೈಎಸ್‌ಪಿ ರಾಮಚಂದ್ರಪ್ಪ ಅವರನ್ನು ಅಮಾನತು ಮಾಡಿ ಡಿಜಿ ಅವರು ಆದೇಶ ಹೊರಡಿಸಿದ್ದಾರೆ. ಡಿವೈಎಸ್‌ಪಿ ರಾಮಚಂದ್ರಪ್ಪ ಅವರ ಕಾಮಕಾಂಡ ತುಮಕೂರು ಜಿಲ್ಲೆಯಾದ್ಯಂತ ಹಾಗೂ ರಾಜ್ಯಾದ್ಯಂತ ಭಾರೀ ಸದ್ದು ಮಾಡಿತ್ತು. ಬಿಟಿವಿಯು ಡಿವೈಎಸ್‌ಪಿ ರಾಮಚಂದ್ರಪ್ಪ ಸೆಕ್ಸ್ ಕಹಾನಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿತ್ತು. ಬಿಟಿವಿ ವರದಿಯ ಬಿಗ್ ಇಂಪ್ಯಾಕ್ಟ್ ಹಿನ್ನೆಲೆ ಸೆಕ್ಸ್ ಮಾಸ್ಟರ್ ಮಧುಗಿರಿ DySP ರಾಮಚಂದ್ರಪ್ಪ ಅವರ ತಲೆದಂಡವಾಗಿದೆ.
ಮಧುಗಿರಿ ತಾಲೂಕಿನ ಡಿವೈಎಸ್‌ಪಿ ಕಚೇರಿಯಲ್ಲಿ ಜಮೀನು ವಿಚಾರಕ್ಕೆ ದೂರು ಕೊಡಲು ಬಂದ ಮಹಿಳೆಯೊಂದಿಗೆ ಡಿವೈಎಸ್‌ಪಿ ರಾಮಚಂದ್ರಪ್ಪ ರಾಸಲೀಲೆ ನಡೆಸಿದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಈ ಘಟನೆಯಿಂದಾಗಿ ಇಡೀ ಪೊಲೀಸ್ ಇಲಾಖೆಯೇ ತಲೆ ತಗ್ಗಿಸುವಂತಾಗಿತ್ತು. ಡಿವೈಎಸ್‌ಪಿ ರಾಮಚಂದ್ರಪ್ಪ ಕೃತ್ಯಕ್ಕೆ ಸಾಕಷ್ಟು ವಿರೋಧ ಬಂದ ಬೆನ್ನಲ್ಲೇ ಡಿವೈಎಸ್‌ಪಿ ರಾಮಚಂದ್ರಪ್ಪ ಎನ್ನುವರನ್ನು ಡಿಜಿ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಬೆಳಗ್ಗೆ ಬಿಟಿವಿ ಸುದ್ದಿ ವಾಹಿನಿಯಲ್ಲಿ ಡಿವೈಎಸ್‌ಪಿ ರಾಮಚಂದ್ರಪ್ಪ ಕಾಮಲೀಲೆ ಸುದ್ದಿ ಪ್ರಸಾರ ಆಗಿತ್ತು. ದೂರು ನೀಡಲು ಬಂದಿದ್ದ ಮಹಿಳೆ ಜೊತೆ ಶೌಚಾಲಯದಲ್ಲಿ ಸರಸ ಸಲ್ಲಾಪ ನಡೆಸಿದ್ದರು. ಇಡೀ ರಾಜ್ಯಕ್ಕೆ ಕಳಂಕವಾಗಿರೋ DySP ಅವರನ್ನು ಸಸ್ಪೆಂಡ್ ಮಾಡಿ ಜೈಲಿಗೆ ಹಾಕಿ ಎಂದು ಬಿಟಿವಿ ಆಗ್ರಹ ಮಾಡಿತ್ತು. ಇದೀಗ ಬಿಟಿವಿ ಸುದ್ದಿ ಪರಿಣಾಮ ಎಚ್ಚೆತ್ತ ಪೊಲೀಸ್ ಇಲಾಖೆ ಡಿವೈಎಸ್‌ಪಿ ರಾಮಚಂದ್ರಪ್ಪ ಅವರನ್ನು ಅಮಾನತು ಮಾಡಿದೆ. ಇನ್ನೂ ರಾಮಚಂದ್ರಪ್ಪ ಅವರ ತಲೆದಂಡ ಆದೇಶವನ್ನು ತುಮಕೂರು ಜಿಲ್ಲಾ ಪೊಲೀಸ್ ಎಸ್.ಪಿ ಕಚೇರಿ ಕೂಡ ಖಚಿತಪಡಿಸಿದೆ. ಈ ಮೂಲಕ ಮಹಿಳೆಯರನ್ನು ತಮ್ಮ ಕಾಮತೃಷೆಗೆ ಬಳಸಿಕೊಳ್ಳುವ ಕೆಲವು ಪೊಲೀಸ್ ಅಧಿಕಾರಿಗಳಿಗೆ ರಾಮಚಂದ್ರಪ್ಪ ಅವರ ಅಮಾನತು ಆದೇಶ ಎಚ್ಚರಿಕೆ ಆಗಿದೆ.
ಇದನ್ನೂ ಓದಿ : ಕಳ್ಳತನಕ್ಕೆ ಬಂದು ಮಹಿಳೆ ಜೊತೆ ಅಸಭ್ಯ ವರ್ತನೆ – ಕಂಬಕ್ಕೆ ಕಟ್ಟಿ ಯುವಕನಿಗೆ ಗ್ರಾಮಸ್ಥರ ಗೂಸಾ..!