Download Our App

Follow us

Home » ರಾಷ್ಟ್ರೀಯ » ರಷ್ಯಾದಲ್ಲಿ ಮಹತ್ವದ ‘ಬ್ರಿಕ್ಸ್’ ಸಮ್ಮೇಳನ – 5 ವರ್ಷಗಳ ಬಳಿಕ ಮೋದಿ, ಜಿನ್​ಪಿಂಗ್ ಮಾತುಕತೆ..!

ರಷ್ಯಾದಲ್ಲಿ ಮಹತ್ವದ ‘ಬ್ರಿಕ್ಸ್’ ಸಮ್ಮೇಳನ – 5 ವರ್ಷಗಳ ಬಳಿಕ ಮೋದಿ, ಜಿನ್​ಪಿಂಗ್ ಮಾತುಕತೆ..!

ಬ್ರಿಕ್ಸ್‌ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ನಿನ್ನೆ ರಷ್ಯಾದ ಕಝಾನ್‌ಗೆ ಆಗಮಿಸಿದ್ದರು. ಈ ವೇಳೆ ರಷ್ಯಾ ಅಧ್ಯಕ್ಷ ಪುಟಿನ್‌ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ರಷ್ಯಾ- ಉಕ್ರೇನ್‌ ಸಂಘರ್ಷವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು, ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ನೆರವು ನೀಡಲು ಭಾರತ ಸಿದ್ಧ ಎಂದು ಭರವಸೆ ನೀಡಿದರು.

ಪ್ರಧಾನಿ ಮೋದಿ ಅವರು ಕೆಲವು ತಿಂಗಳ ಹಿಂದಷ್ಟೇ ರಷ್ಯಾ ಪ್ರವಾಸ ಕೈಗೊಂಡಿದ್ದರು. ಈ ಸಮಯದಲ್ಲಿ ಹಲವು ಪ್ರಮುಖ ವಿಚಾರಗಳ ಬಗ್ಗೆ ಪ್ರಧಾನಿ ಮೋದಿ & ರಷ್ಯಾ ಅಧ್ಯಕ್ಷರಾದ ವ್ಲಾದಿಮಿರ್ ಪುಟಿನ್ ಅವರ ನಡುವೆ ಚರ್ಚೆ ನಡೆದಿತ್ತು. ಬರೋಬ್ಬರಿ ಐದು ವರ್ಷಗಳ ನಂತರ ಚೀನಾ ಪ್ರಧಾನಿ ಕ್ಸಿ ಜಿನ್​ ಪಿಂಗ್​​ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ರಷ್ಯಾಧ್ಯಕ್ಷ ಪುಟಿನ್​​​​ ಜೊತೆಯೂ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.

ಕಜಾನ್‌ನಲ್ಲಿ ನಡೆಯುತ್ತಿರುವ 16ನೇ ಶೃಂಗಸಭೆಯಲ್ಲಿ ಭಾರತ, ಈಜಿಪ್ಟ್, ಬ್ರೆಜಿಲಿಯನ್, ದಕ್ಷಿಣ ಆಫ್ರಿಕಾದ ಧ್ವಜಗಳು ಹಾರಾಡುತ್ತಿವೆ. ಬ್ರಿಕ್ಸ್ ಗುಂಪಿನಲ್ಲಿ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾನೂ ಒಳಗೊಂಡಿವೆ. ಈ ವರ್ಷ ಇರಾನ್, ಈಜಿಪ್ಟ್, ಇಥಿಯೋಪಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳನ್ನು ಸೇರಿಸಲಾಗಿದೆ.

ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರಮುಖ ಪಾತ್ರವನ್ನು ವಹಿಸುವ ನಿರೀಕ್ಷೆಯಿದೆ. ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯ ನಂತರ 2024 ರಲ್ಲಿ ರಷ್ಯಾಕ್ಕೆ ಮೋದಿಯವರ ಎರಡನೇ ಭೇಟಿಯಾಗಿದೆ. ಇದರಲ್ಲಿ ಭಾಗಿಯಾಗುವುದರಿಂದ ಭಾರತದ ಇಂಧನ ಭದ್ರತೆ ಮತ್ತು ರಷ್ಯಾದೊಂದಿಗೆ ಅದರ ರಕ್ಷಣಾ ಸಂಬಂಧದ ಮುಂದುವರಿಕೆ ಚರ್ಚೆಗಳಲ್ಲಿ ಪ್ರಾಬಲ್ಯ ಸಾಧಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ : ಹೈವೋಲ್ಟೇಜ್​ ಚನ್ನಪಟ್ಟಣದಲ್ಲಿ ಕಾವೇರಿದ ಎಲೆಕ್ಷನ್ ​​- ಅಭ್ಯರ್ಥಿಗಳು ಅಖಾಡಕ್ಕೆ ಇಳಿಯುವ ಮುನ್ನವೇ ಮಾತಿನೇಟು..!

Leave a Comment

DG Ad

RELATED LATEST NEWS

Top Headlines

ಬಿಗ್ ಬಾಸ್ ವೇದಿಕೆಯಲ್ಲಿ ಸಲ್ಮಾನ್ ಖಾನ್‌ಗೆ ಮದುವೆ ಪ್ರಪೋಸಲ್ ಇಟ್ಟ ನಟಿ..!

ಬಿಗ್ ಬಾಸ್, ಅತ್ಯಂತ ಜನಪ್ರಿಯ ಕಾರ್ಯಕ್ರಮ. ಹಿಂದಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಅನ್ನು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಡೆಸಿಕೊಡುತ್ತಿದ್ದಾರೆ. ಇದೀಗ ಬಿಗ್ ಬಾಸ್ ವೇದಿಕೆಯಲ್ಲಿ

Live Cricket

Add Your Heading Text Here