ಬೆಂಗಳೂರು : ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವ ಸ್ಟೇಟ್ ಲೆವೆಲ್ ಎಕ್ಸ್ಫರ್ಟ್ ಅಪ್ರೈಸಲ್ ಕಮಿಟಿ ವಿರುದ್ದ ಇದೀಗ ಲಕ್ಷ ಲಕ್ಷ ಹಣ ಸುಲಿಗೆ ಮಾಡುತ್ತಿರುವ ಗಂಭೀರ ಆರೋಪ ಕೇಳಿ ಬಂದಿದೆ. ಕಮಿಟಿಯ ಅಧ್ಯಕ್ಷ ಚಿಕ್ಕಮಗಳೂರಿನ ಮಹೇಶ್ ಎ.ಎನ್ ಹಾಗೂ ಸದಸ್ಯರು ಸೇರಿ ಲಕ್ಷ ಲಕ್ಷ ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.
ಕಮಿಟಿ ಮೆಂಬರ್ಸ್ ಒಂದೊಂದು ಶಿಫಾರಸು ಫೈಲ್ಗೂ ಎರಡು ಲಕ್ಷ ಫಿಕ್ಸ್ ಮಾಡಿಕೊಂಡಿದ್ದು, ಬಡ ರೈತ ಜಮೀನಿನಲ್ಲಿ ಕಲ್ಲು ತೆಗಿಸೋಕೂ ಎಕರೆಗೆ ಒಂದು ಲಕ್ಷ ವಸೂಲಿ ಮಾಡುತ್ತಿದ್ದಾರೆ. ಮಹೇಶ್ ಎಎನ್ ಯಾವುದೇ ಅರ್ಹತೆ ಇಲ್ಲದೆ ಇನ್ಶೂರೆನ್ಸ್ ಮೇಲೆ ಕಮಿಟಿಯ ಚೇರ್ಮನ್ ಆಗಿದ್ದು, ಚೇರ್ಮನ್ ಆಗಿ ಆರೇ ತಿಂಗಳಲ್ಲಿ ಚಿಕ್ಕಮಗಳೂರಿನಲ್ಲಿ ಎರಡುವರೆ ಕೋಟಿಯ ಮನೆಯನ್ನ ಕಟ್ಟಿಸಿದ್ದಾರೆ.
ಮಹೇಶ್ ಪ್ರತಿ ಫೈಲ್ಗೆ ಮಿನಿಮಮ್ 2 ಲಕ್ಷದಿಂದ ವಸೂಲಿ ರೇಟ್ ಫಿಕ್ಸ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹೊಸಪೇಟೆಯ ರವಿಕುಮಾರ್ ಯಾದವ್, ಉಡುಪಿಯ ಶಿಕ್ಷಕ ಬಾಲಕೃಷ್ಣ ಮುದೋಡಿ ಹಾಗೂ ಡಾಕ್ಟರ್ ಸಂಗಮೇಶ್ ಜೊತೆ ಸೇರಿಕೊಂಡು ಮಹೇಶ್ ಡೀಲ್ ನಡೆಸುತ್ತಿದ್ದು, ಸಂಕದಕಟ್ಟೆಯ ಆಸ್ಪತ್ರೆಯನ್ನೇ ಇವರು ಡೀಲ್ ಅಡ್ಡ ಮಾಡಿಕೊಂಡಿದ್ದಾರೆ. ಇನ್ನು ನಾಗರಾಜ್ ಕೆಎಚ್, ಸಿದ್ದೀಕ್ ಅಹಮದ್, ಶಿವಪ್ಪ ನಾಯಕ್ ಎಲ್ಲರೂ ಡೀಲ್ ಮಾಸ್ಟರ್ಸ್ಗಳಾಗಿದ್ದಾರೆ. ಅದರಂತೆ SLEIAA (ಸ್ಟೇಟ್ ಲೆವೆಲ್ ಎನ್ವಿರಾನ್ಮೆಂಟ್ ಇಂಪ್ಯಾಕ್ಟ್ ಅಸೆಸ್ಮೆಂಟ್ ಅಥಾರಿಟಿ) ಚೇರ್ಮನ್ ಆಗಿರುವ ಗುರುಪ್ರಸಾದ್ ವಿರುದ್ದವೂ ಹಣ ಸುಲಿಗೆಯ ಗಂಭೀರ ಆರೋಪ ಕೇಳಿಬಂದಿದೆ.
ಮೈನಿಂಗ್ ಕಾಲೇಜು ಸೇರಿ ಅರಣ್ಯದ ಕೆಲಸಗಳಿಗೆ ಇವರ ಶಿಫಾರಸ್ಸು ಬೇಕೇ ಬೇಕು. ಹಾಗಾಗಿ ಇದನ್ನೇ ಬಂಡವಾಳ ಮಾಡ್ಕೊಂಡು ಮಹೇಶ್ ಗ್ಯಾಂಗ್ ಲಕ್ಷ ಲಕ್ಷ ಹಣ ಸುಲಿಗೆ ಮಾಡುತ್ತಿದೆ. ಇನ್ನು ಯಾವುದೇ ಅರ್ಹತೆ ಇಲ್ಲದೆ ನಿಯಮಗಳನ್ನು ಗಾಳಿಗೆ ತೂರಿ ಈ ಗ್ಯಾಂಗ್ ಸ್ಟೇಟ್ ಲೆವೆಲ್ ಎಕ್ಸ್ಫರ್ಟ್ ಅಪ್ರೈಸಲ್ ಸಮಿತಿಯ ಸದಸ್ಯರಾಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಈ ಮೂಲಕ ಸುಲಿಗೆಕೋರರ ದಂಧೆಯ ಮನೆ ಆಯ್ತಾ ಅರಣ್ಯ ಇಲಾಖೆ? ರೇಟ್ ಕಾರ್ಡ್ ಇಟ್ಟುಕೊಂಡು ಸುಲಿಗೆಗೆ ಇಳಿತಾ ಎಕ್ಸ್ಫರ್ಟ್ ಅಪ್ರೈಸಲ್ ಸಮಿತಿ? ಎಂಬೆಲ್ಲ ಪ್ರಶ್ನೆಗಳು ಹುಟ್ಟಿಕೊಂಡಿದ್ದು, ಸಾರ್ವಜನಿಕರಿಂದ ಬಾರೀ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ : ನನ್ನ ಸರ್ಕಾರ ಕಿತ್ತಾಕ್ಬೇಕು ಅಂತಾ 50 MLAಗಳಿಗೆ ಬಿಜೆಪಿ ತಲಾ 50 ಕೋಟಿ ರೂ. ಆಫರ್ – ಸಿಎಂ ಸಿದ್ದು ಬಿಗ್ ಬಾಂಬ್..!