Download Our App

Follow us

Home » ರಾಜ್ಯ » ಕೇರಳದಲ್ಲಿ ಮೆದುಳು ತಿನ್ನುವ ‘ಅಮೀಬಾ ವೈರಸ್’​ಗೆ 3 ಬಲಿ – ರಾಜ್ಯದಲ್ಲೂ ಹೆಚ್ಚಿದ ಆತಂಕ, ಹೈ ಅಲರ್ಟ್ ಘೋಷಣೆ..!

ಕೇರಳದಲ್ಲಿ ಮೆದುಳು ತಿನ್ನುವ ‘ಅಮೀಬಾ ವೈರಸ್’​ಗೆ 3 ಬಲಿ – ರಾಜ್ಯದಲ್ಲೂ ಹೆಚ್ಚಿದ ಆತಂಕ, ಹೈ ಅಲರ್ಟ್ ಘೋಷಣೆ..!

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಿನ್ನೆ ಒಂದೇ ದಿನ 175 ಕೇಸ್​ಗಳು ದೃಢಪಟ್ಟಿವೆ. ಈ ಬೆನ್ನಲ್ಲೇ ನೆರೆಯ ಕೇರಳ ರಾಜ್ಯದಲ್ಲಿ ಮೆದುಳು ಸೋಂಕಿನ ಅಮೀಬಿಕ್ ಮೆನಿಂಗೋಎನ್ಸಿಫಲಿಟಿಸ್ ಕಾಯಿಲೆ ಪತ್ತೆಯಾಗಿರುವುದು ತೀವ್ರ ಆತಂಕ ಮೂಡಿಸಿದೆ.

ದೇಶದೆಲ್ಲೆಡೆ ಮಳೆ ಜೋರಾದಂತೆ ನಾನ ವೈರಸ್​ಗಳ ಹಾವಳಿ ಕೂಡ ತೀವ್ರಗೊಂಡ್ಡಿದ್ದು, ಜೀವ ತೆಗೆಯೋ ಡೇಂಜರಸ್ ಕಾಯಿಲೆಗಳು ದೇಹಕ್ಕೆ ವಕ್ಕರಿಸುತ್ತಿದೆ. ಒಂದೆಡೆ ರಾಜ್ಯದಲ್ಲಿ ಡೆಂಘೀ ಪ್ರಕರಣಗಳು 6 ಸಾವಿರದ ಗಡಿ ದಾಟಿದ್ದು, ಜೀವಹಾನಿಯ ಸಂಖ್ಯೆ 6 ರಷ್ಟಾಗಿದೆ. ಇನ್ನೊಂದೆಡೆ ಕೇರಳದಲ್ಲಿ ಕಳೆದ ಮೇ ತಿಂಗಳಿನಿಂದೀಚೆಗೆ 4 ಮಂದಿ, ಅದರಲ್ಲೂ ಬಾಲಕರು ಅಮೀಬಿಕ್ ಮೆನಿಂಗೋಎನ್ಸಿಫಲಿಟಿಸ್ (ಅಮೀಬಾ ವೈರಸ್) ಸೋಂಕಿಗೆ ಸಿಲುಕಿದ್ದು, 3 ಬಾಲಕರು ಪ್ರಾಣ ಕಳೆದುಕೊಂಡಿದ್ದಾರೆ. ಕೇರಳದ ಕೋಯಿಕೋಡ್, ಮಲಪುರಂನಲ್ಲಿ ಕೇಸ್​ಗಳು ಪತ್ತೆಯಾಗಿವೆ.

ಡೆಂಘೀ ಆತಂಕದ ನಡುವೆ ಕೇರಳದ ಅಮೀಬಿಕ್ ಮೆನಿಂಗೋಎನ್ಸಿಫಲಿಟಿಸ್ ಕಾಯಿಲೆ ಮತ್ತಷ್ಟು ಗಂಭೀರ ಪರಿಸ್ಥಿತಿಯನ್ನು ನಿರ್ಮಿಸಿದೆ. ಕಲುಷಿತ ನೀರಿನಲ್ಲಿ ಸ್ವತಂತ್ರವಾಗಿ ಜೀವಿಸುವ ಅಮೀಬಾ ಮಾದರಿಯ ಸೋಂಕಿನಿಂದ ಹರಡುವ ಅಮೀಬಿಕ್ ಮೆನಿಂಗೋಎನ್ಸಿಫಲಿಟಿಸ್ ಕಾಯಿಲೆ ಮೆದುಳಿನ ಸೋಂಕಿಗೆ ಕಾರಣವಾಗಲಿದ್ದು, ಇದು ಮಾರಣಾಂತಿಕವಾಗಿದೆ. ದೇಹ ಪ್ರವೇಶಿಸಿದ ಕೂಡಲೇ ಈ ವೈರಸ್ ಮೆದುಳಿಗೆ ಡೈರೆಕ್ಟ್ ಅಟ್ಯಾಕ್ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಮೆದುಳಿಗೆ ಪ್ರವೇಶಿಸಿದ ವೈರಸ್​ನಿಂದ ಬ್ರೈನ್ ಡೆಡ್ ಆಗೋ ಸಾದ್ಯತೆ ತೀವ್ರವಾಗಿದೆ.

ಜಲ ಮೂಲಗಳ ಶುದ್ಧೀಕರಣ, ಈಜುಕೊಳಗಳಿಗೆ ಕ್ಲೋರೇನಿಯೇಷನ್ ಮೂಲಕ ಸ್ವಚ್ಛಗೊಳಿಸುವುದು, ಮಕ್ಕಳನ್ನು ನೀರಿನಲ್ಲಿ ಬಿಡುವಾಗ ಅಗತ್ಯ ಮುಂಜಾಗ್ರತಾ ಕ್ರಮ ವಹಿಸುವಂತೆ ನಾನಾ ರೀತಿಯ ಮಾರ್ಗಸೂಚಿಗಳನ್ನು ಕೇರಳದಲ್ಲಿ ಜಾರಿಗೊಳಿಸಲಾಗಿದೆ. ಈ ಬೆನ್ನಲ್ಲೇ ರಾಜ್ಯದಲ್ಲೂ ಹೈ ಆಲರ್ಟ್ ಘೋಷಿಸಲಾಗಿದೆ.

ಅಮೀಬಿಕ್ ಮೆನಿಂಗೋಎನ್ಸಿಫಲಿಟಿಸ್ ಸೋಂಕಿನ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸೋಂಕಿತ ಪ್ರದೇಶಗಳಿಂದ ರಾಜ್ಯಕ್ಕೆ ಬರುವವರು ಮತ್ತು ಇಲ್ಲಿಂದ ಅಲ್ಲಿಗೆ ಪ್ರವಾಸಕ್ಕೆ ತೆರಳುವವರ ಮೇಲೆ ನಿಗಾ ಇಡಲಾಗಿದೆ. ಈ ಸಂದರ್ಭದಲ್ಲಿ ಕೇರಳದ ಪ್ರವಾಸವನ್ನು ಮುಂದೂಡುವುದು ಸೂಕ್ತ ಎಂಬ ಸಲಹೆಗಳು ಕೇಳಿಬರುತ್ತಿವೆ.

ಅಶುದ್ಧ ನೀರಿನಲ್ಲಿ ಅಡಗಿರುವ ಅಮೀಬಾ ಮಾದರಿ ವೈರಾಣು ಮೂಗಿನ ಮೂಲಕ ದೇಹ ಪ್ರವೇಶಿಸಲಿದ್ದು, ಸೋಂಕಿಗೆ ಕಾರಣವಾಗಲಿದೆ. ಕೇರಳದಲ್ಲಿ 2017 ಮತ್ತು 2023ರಲ್ಲೂ ಇದೇ ಸೋಂಕು ಪತ್ತೆಯಾಗಿ ತೀವ್ರ ಆತಂಕ ಮೂಡಿಸಿತ್ತು.

ಇದನ್ನೂ ಓದಿ : ಗದಗ : ರೆಡ್ ಹ್ಯಾಂಡ್ ಆಗಿ ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here