Download Our App

Follow us

Home » ಸಿನಿಮಾ » ಶಂಕರ್.ವಿ ನಿರ್ದೇಶನದ ‘ಬ್ರಹ್ಮರಾಕ್ಷಸ’ ಸಿನಿಮಾದ ಸಾಂಗ್​​ ರಿಲೀಸ್​​​..!

ಶಂಕರ್.ವಿ ನಿರ್ದೇಶನದ ‘ಬ್ರಹ್ಮರಾಕ್ಷಸ’ ಸಿನಿಮಾದ ಸಾಂಗ್​​ ರಿಲೀಸ್​​​..!

ಸ್ಯಾಂಡಲ್​ವುಡ್​​ನಲ್ಲಿ ಈ ಬಾರಿ ಸಾಲು ಸಾಲು ಸಿನಿಮಾಗಳು ತೆರೆಕಂಡು, ಸಕ್ಸಸ್ ಆಗುವ ಮೂಲಕ ಚಿತ್ರರಂಗದಲ್ಲಿ ಭರವಸೆಯ ಕಿರಣ ಮೂಡಿಸಿದೆ. ಅದೇ ನಿಟ್ಟಿನಲ್ಲಿ ಮತ್ತಷ್ಟು ಚಿತ್ರತಂಡಗಳು ಬಿಡುಗಡೆಯ ಸಿದ್ದತೆ ಮಾಡಕೊಳ್ಳುತ್ತಿವೆ. ಅಂತಹ ಸಿನಿಮಾಗಳಲ್ಲಿ ಬ್ರಹ್ಮರಾಕ್ಷಸ ಕೂಡ ಒಂದು.

ಇತ್ತೀಚೆಗೆ ಈ ಚಿತ್ರದ ಐಟಂ ಸಾಂಗ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಲೈಟ್‌ಮ್ಯಾನ್ ಆಗಿ ಚಿತ್ರರಂಗಕ್ಕೆ ಬಂದು ಹಲವಾರು ನಿರ್ದೇಶಕರ ಬಳಿ ಕೆಲಸ ಕಲಿತ ಶಂಕರ್.ವಿ. ಮೊದಲಬಾರಿಗೆ ಆ್ಯಕ್ಷನ್‌ಕಟ್ ಹೇಳಿರುವ ಚಿತ್ರ ಇದಾಗಿದ್ದು, ಜ್ಯೋತಿ ಆರ್ಟ್ಸ್ ಮೂಲಕ ಕೆಎಂಪಿ. ಶ್ರೀನಿವಾಸ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

1980-90ರ ಕಾಲಘಟ್ಟದಲ್ಲಿ ನಡೆಯುವ ಕಥೆ ಈ ಚಿತ್ರದಲ್ಲಿದ್ದು, ಅಂಕುಶ್ ಏಕಲವ್ಯ ಹಾಗೂ ಪಲ್ಲವಿಗೌಡ ಚಿತ್ರದ ನಾಯಕ, ನಾಯಕಿಯಾಗಿ ನಟಿಸಿದ್ದಾರೆ, ವಿಶೇಷ ಪಾತ್ರದಲ್ಲಿ ವೈಜನಾಥ್ ಬಿರಾದಾರ್ ಕಾಣಿಸಿಕೊಂಡಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಸೇರಿದಂತೆ 5 ಭಾಷೆಯಲ್ಲಿ ಈ ಚಿತ್ರ ತಯಾರಾಗಿದ್ದು, ಈಗ ಕನ್ನಡ ವರ್ಷನ್ ಗೀತೆ ಮಾತ್ರ ಬಿಡುಗಡೆಯಾಗಿದೆ.
ಚಿತ್ರದ ಟೀಸರ್​ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರದಲ್ಲಿ 5 ಹಾಡುಗಳಿದ್ದು, ಎಂ.ಎಸ್.ತ್ಯಾಗರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಆ ಪೈಕಿ ಒಂದು ಹಾಡು ಇದೀಗ ರಿಲೀಸ್ ಆಗಿದೆ.

ಸಿನಿಮಾದ ಬಗ್ಗೆ ಅಭಿಪ್ರಾಯ ಹಂಚಿಕೊಂಡ  ಹಿರಿಯನಟ ಬಿರಾದಾರ್ ಅವರು,  ಸಿನಿಮಾ ಚನ್ನಾಗಿ ಬಂದಿದೆ. ಕಥೆಗೆ ತಕ್ಕಂತೆ ಪಾತ್ರಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನಿರ್ದೇಶಕರು ತುಂಬಾ ಶ್ರಮ ಹಾಕಿದ್ದಾರೆ. ಸಿನಿಮಾ ಜನರಿಗೆ ಖಂಡಿತ ಇಷ್ಟವಾಗುತ್ತದೆ ಎಂದು ಹೇಳಿದರು. ಮತ್ತೊಬ್ಬ‌ನಟ ಅರವಿಂದ್ ರಾವ್ ಮಾತನಾಡಿ ಅಂಕುಶ್ ಅದ್ಭುತವಾಗಿ ಡಾನ್ಸ್ ಮಾಡಿದ್ದಾರೆ. ಇಡೀ ಸಿನಿಮಾ ರೆಟ್ರೋ ಸ್ಟೈಲ್ ನಲ್ಲಿಯೇ ಇದ್ದು ಸಾಂಗ್ ಕೂಡ ಹಾಗೆ ಬಂದಿರುವುದು ವಿಶೇಷ‌ ಎಂದರು.

ನಿರ್ಮಾಪಕ ಕೆಎಂಪಿ ಶ್ರೀನಿವಾಸ್ ಮಾತನಾಡುತ್ತ ನನ್ನ‌ ಮೊದಲ ಚಿತ್ರ ಕಲಿವೀರ. ಬ್ರಹ್ಮರಾಕ್ಷಸ ಎರಡನೇ ಚಿತ್ರ. ಎಲ್ಲರ ಸಹಕಾರದಿಂದ ಸಿನಿಮಾ ಚನ್ನಾಗಿ ಬಂದಿದೆ. ಯಾವುದೇ ತಪ್ಪುಗಳಿಲ್ಲದಂತೆ ಡೈರೆಕ್ಟರ್ ಸಿನಿಮಾ ಮಾಡಿದ್ದಾರೆ.‌ ಹೀರೋ ಸ್ಟಂಟ್​​ಗಳನ್ನು ರಿಯಲ್ಲಾಗಿ ಮಾಡಿದ್ದರಿಂದ ಸಾಕಷ್ಟು ಪೆಟ್ಟು ತಿಂದಿದ್ದಾರೆ. ನಿರ್ದೇಶಕ, ನಾಯಕರ ಕಾಂಟ್ರಿಬ್ಯೂಷನ್​​ನಿಂದ ಸಿನಿಮಾ ಕ್ವಾಲಿಟಿ ಇನ್ನೂ ಉತ್ತಮವಾಗಿದೆ. ಈ ಸಿನಿಮಾ ನಮಗೆ ತೃಪ್ತಿ ಕೊಟ್ಟಿದೆ. ಬ್ರಹ್ಮ ಸೃಷ್ಟಿ ಮಾಡಿದ ಮನುಷ್ಯ ರಾಕ್ಷಸ ಹೇಗೆ ಆಗುತ್ತಾನೆ ಎಂಬುದನ್ನು ಚಿತ್ರದಲ್ಲಿ ತೋರಿಸಿದ್ದೇವೆ ಎಂದರು.

ನಿರ್ದೇಶಕ ಶಂಕರ್ ಮಾತನಾಡಿ, ಒಬ್ಬ ನಿರ್ದೇಶಕ ಎಷ್ಟೇ ಕನಸು ಕಾಣಬಹುದು. ಆದರೆ ಅದಕ್ಕೆ ನಿರ್ಮಾಪಕರು ನೀಡುವ ಸಹಕಾರ ತುಂಬಾ ಮುಖ್ಯವಾಗಿರುತ್ತೆ. ಇದು ನನ್ನ ಮೊದಲ‌ ಚಿತ್ರ. ಲಾಕ್ ಡೌನ್ ಸಂದರ್ಭದಲ್ಲಿ ಈ ಕಥೆ ಹೊಳೆಯಿತು. ಉಡುಪಿ, ಕುಂದಾಪುರ ಹಾಗೂ ಸೆಟ್​​ಗಳಲ್ಲಿ ಹೆಚ್ಚಿನ ಭಾಗದ ಶೂಟಿಂಗ್ ಮಾಡಿದ್ದೇವೆ. ಚಿತ್ರಕ್ಕೆ 80% ಮಳೆ ಹಾಗೂ ರಾತ್ರಿ ವೇಳೆಯಲ್ಲೇ ಶೂಟಿಂಗ್ ಮಾಡಿದ್ದೇವೆ. ಒಂದು ಸೋಶಿಯಲ್ ಮೆಸೇಜ್ ಚಿತ್ರದಲ್ಲಿದ್ದು, ತಪ್ಪು ಮಾಡದೆ ಇಬ್ಬರು ಜೈಲಿಗೆ ಹೋಗಿ ಶಿಕ್ಷೆ ಅನುಭವಿಸುತ್ತಾರೆ. ಅದೇ ಸೇಡಿನಿಂದ ಹೇಗೆ ದ್ವೇಷ ತೀರಿಸಿಕೊಳ್ಳಲು ಹೊರಡುತ್ತಾರೆ ಎನ್ನುವುದೇ ಈ ಚಿತ್ರ. ಸೆನ್ಸಾರ್​​​ನಿಂದ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಇಡೀ ಫ್ಯಾಮಿಲಿ ಕುಳಿತು ನೋಡುವಂತ ಸಿನಿಮಾವಿದು ಎಂದರು.

ಸಂಗೀತ ನಿರ್ದೇಶಕ ಎಂ.ಎಸ್. ತ್ಯಾಗರಾಜ್, ಇದು ಅದ್ಭುತವಾದ ಸಿನಿಮಾ, ಕ್ರಿಯೆಟೀವ್ ಆಗಿ ಕೆಲಸ ಮಾಡಲು ಅವಕಾಶ ಸಿಕ್ಕಿತು. ಈ ಗೀತೆಯನ್ನು ಮಮತಾ ಶರ್ಮಾ ಸಂತೋಷ ಹಾಡಿದ್ದು, ನಾನೇ ಸಾಹಿತ್ಯ ಬರೆದಿದ್ದೇನೆ ಎಂದರು. ನಾಯಕ ಅಂಕುಶ್ ಏಕಲವ್ಯ ಮಾತನಾಡಿ ಈ ಹಿಂದೆ ಕಲಿವೀರ ಚಿತ್ರದಲ್ಲಿ ಅಭಿನಯಿಸಿದ್ದೆ.ಇದು ಎರಡನೇ ಪ್ರಯತ್ನ. ನನ್ನ ಕಲಿವೀರ ಸಿನಿಮಾ ರಿಲೀಸ್ ಹಿಂದಿನ‌ ದಿನ ಬೆಂಗಳೂರಿನಿಂದ ಹುಬ್ಬಳ್ಳಿವರೆಗೆ ನಾನೇ ಪೋಸ್ಟರ್ ಅಂಟಿಸಿಕೊಂಡು ಹೋಗಿದ್ದೆ ಎಂದು ಹೇಳಿದರು. ನಿರ್ಮಾಪಕರ ಸಂಘದ ಆಧ್ಯಕ್ಷ ಉಮೇಶ್ ಬಣಕಾರ್, ಹಾಗೂ ನಾಗೇಂದ್ರ ಅರಸ್ ಮಾತನಾಡಿ ಚಿತ್ರಕ್ಕೆ ಶುಭ ಹಾರೈಸಿದರು.

ಇನ್ನು ಅನಿರುದ್ದ ಅವರ ಕ್ಯಾಮೆರಾವರ್ಕ್ ಈ ಚಿತ್ರದಲ್ಲಿದ್ದು, ಎಂ.ಎಸ್.ತ್ಯಾಗರಾಜ್ ಸಂಗೀತ, ಹಿನ್ನೆಲೆ ಸಂಗೀತ ಮಾಡಿದ್ದಾರೆ. ಅರವಿಂದ್ ರಾವ್, ಸ್ವಪ್ನ, ಪುರುಷೋತ್ತಮ್, ಬಲ ರಾಜವಾಡಿ. ರಥಾವರ ದೇವು, ಭುವನ್‌ಗೌಡ, ಚಿಕ್ಕಹೆಜ್ಜಾಜಿ ಮಜದೇವ್, ಶಿವಾನಂದಪ್ಪ ಹಾವನೂರು ಸೇರಿದಂತೆ ಹಲವಾರು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ,

ಇದನ್ನೂ ಓದಿ : ಕಾಂಗ್ರೆಸ್​ ಶಾಸಕರಿಗೆ ಬಿಜೆಪಿಯಿಂದ 100 ಕೋಟಿ ರೂ. ಆಫರ್ – ರವಿಕುಮಾರ್ ಗೌಡ ಸ್ಫೋಟಕ ಹೇಳಿಕೆ..!

Leave a Comment

DG Ad

RELATED LATEST NEWS

Top Headlines

ಸಿಎಂ ಸಿದ್ದರಾಮಯ್ಯಗೆ ಸದ್ಯಕ್ಕಿಲ್ಲ CBI ಸಂಕಷ್ಟ – ಮುಡಾ ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್​!

ಧಾರವಾಡ : ಇಂದು ಧಾರವಾಡ ಹೈಕೋರ್ಟ್​ನಲ್ಲಿ ಮುಡಾ ಕೇಸ್ ತನಿಖೆ ಸಿಬಿಐಗೆ ನೀಡುವಂತೆ ಕೋರಿ​ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆದಿದ್ದು, ವಾದ-ಪ್ರತಿವಾದ ಆಲಿಸಿದ  ಧಾರವಾಡ ಹೈಕೋರ್ಟ್​

Live Cricket

Add Your Heading Text Here